ವಿಷಯ ಎಂತ ಗೊತ್ತುಂಟಾ
ಹಿಂದೆ ಒಮ್ಮೆ ಒಂದು ರಾತ್ರಿ ಭಯಂಕರ ಗೋಳಿನ ಮೆಸೇಜ್ ಬರೆದು ಫೇಸ್ಬುಕ್ ನಲ್ಲಿ ಹಾಕಿದ್ದೆ." ನನ್ನದು ಸ 5K ಫ್ರೆಂಡ್ಸ್ ಆಗಿದ್ದಾರೆ.ಹಾಗಾಗಿ ಈ ಸುಸಂದರ್ಭದಲ್ಲಿ ನಾನು ಹೇಳತಕ್ಕಂತಹ ಈ ಒಂದು ಮಾತು ಏನೆಂದರೆ.. ಅಪರಿಚಿತರಂತೆ ಕಂಡು ಬರುವವರನ್ನು ನನ್ನ ವಾಲಿನಿಂದ ಈ ಕ್ಷಣವೇ ನಿರ್ದಾಕ್ಷಿಣ್ಯವಾಗಿ ಕಿತ್ತು ಹಾಕಲಾಗುವುದು...ದಯವಿಟ್ಟು ಯಾರೂ ಕೂಡ ಬೇಜಾರು ಮಾಡ್ಬಾರ್ದು..ಎಲ್ಲರೂ ಶಾಂತಚಿತ್ತರಾಗಿ ವರ್ತಿಸಿ..ಕಾನೂನನ್ನು ಕೈಗೆ ತೆಗದುಕೊಳ್ಳದೇ... ಆಕ್ರೋಶಕ್ಕೆ ಒಳಗಾಗದೇ..ಜೀವನ ಎಂಬ ಏನು ಈ ಮೂರು ದಿನದ ಬಾಳಿನಲ್ಲಿ ನಾವೆಲ್ಲರೂ.." ಎಂದೆಲ್ಲಾ ಬಾಯಿಗೆ ಬಂದದ್ದು ಬರೆದು ಹಾಕಿದ್ದೆ.
ಅದಕ್ಕೆ ಒಬ್ಬರು ಹೇಳಿದರು "ನೋಡಿ ನೀವು ಹೀಗೆ ಮಾಡಿ,ಡೈಲಿ ಈ ಬರ್ತ್ ಡೇ ನೋಟಿಫಿಕೇಶನ್ ಬರ್ತದೆ ಅಲ,ಆವಾಗ "ಸರಿಯಾಗಿ" ನೋಡಿಕೊಂಡು ನೋಡಿಕೊಂಡು ದಿನಾಲೂ ಒಂದಿಷ್ಟು ಜನರನ್ನು ರಿಮೂವ್ ಮಾಡುತ್ತಲೇ ಹೋಗಿ,ಈ ಹುಡುಕಿ ಹುಡುಕಿ ರಿಮೂವ್ ಮಾಡುವುದಕ್ಕಿಂತಲೂ ನಿಮಗೆ ಇದೇ ಸುಲಭವಾಗಬಹುದು ..." ಎಂದು ಅವರು ಸಜೇಷನ್ ಕೊಟ್ಟಿದ್ದರು.
ಮೊದಲೇ ಅತೀ ದೊಡ್ಡ ಉದಾಸೀನದ ಮಾರಿ ನಾನು.ನನಗೆ ಈ ಐಡಿಯಾ ಹೇಳಿ ಮಾಡಿಸಿದಂತಿತ್ತು ಮತ್ತು ಹಿಡಿಸಿತು.ನಿಜವಾಗಿಯೂ ನಾನು ಹಾಗೇ ಮಾಡುತ್ತಿದ್ದೆ.ದಿನಾಲೂ ಎದ್ದು ಯಾರಿಗೆ ಸ ಬರ್ತಡೆ ವಿಶ್ ಮಾಡದಿದ್ದರೂ,ಬರ್ತಡೇ ಲಿಸ್ಟ್ ಗೆ ತಪ್ಪದೇ ಹೋಗಿ ಅಪರಿಚಿತರಂತೆ ಕಂಡು ಬರುವ ಒಂದಿಷ್ಟು ಮುಖಗಳನ್ನು "ಸರಿಯಾಗಿ" ನೋಡಿಕೊಂಡು ನೋಡಿಕೊಂಡು ರಿಮೂವ್ ಮಾಡುತ್ತಲೇ ಬಂದಿದ್ದೆ.ಆದರೆ ಈಗ ಒಂದು ಭಯಂಕರ ಅಚಾತುರ್ಯ ನಡೆದಿದೆ ಫ್ರೆಂಡ್ಸ್, ರಿಮೂವ್ ಮಾಡುವ ಭರದಲ್ಲಿ ಈ ಐಡಿಯಾ ಕೊಟ್ಟವರನ್ನೇ ನಾನು ಗೊತ್ತಾಗದೇ ......
#ವಿಷಯ_ಎಂತ_ಗೊತ್ತುಂಟಾ
ab
Comments
Post a Comment