Gumnami
ಇದು ನೇತಾಜಿಯ ಕಥೆ.ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸಾವು ಹಾಗೂ ಮತ್ತು ಆ ಸಾವಿನ ಕುರಿತಾದ ಹತ್ತು ಹಲವಾರು ರಹಸ್ಯಗಳ ಕಥೆಯೇ ಈ Gumnami.
1945 ರಲ್ಲಿ ವಿಮಾನ ಅಪಘಾತದಲ್ಲಿ ನೇತಾಜಿ ಮೃತಪಟ್ಟರು ಎಂದು ಹೆಚ್ಚಾಗಿ ಎಲ್ಲರಿಗೂ ಗೊತ್ತಿರುವ ಸತ್ಯ.ಆಗಿನ ಸರಕಾರ ಕೂಡ ಈ ದೇಶಕ್ಕೆ ಅದನ್ನೇ ಹೇಳಿದ್ದು.ಆದರೆ ನೇತಾಜಿಯ ಸಾವಿನ ಜೊತೆಗೆ ಹಲವಾರು ಸಂಶಯಗಳು ಹುಟ್ಟಿಕೊಂಡವು,ಅದೇ ರೀತಿ ಒಂದಷ್ಟು ರಹಸ್ಯಗಳು ಕೂಡ ಉಳಿದುಕೊಂಡವು!
ಇದು ಆ ರಹಸ್ಯಗಳ ಕುರಿತಾದ ಕಥೆ.
ನೇತಾಜಿ 1945 ರಲ್ಲಿ ಸಾಯಲಿಲ್ಲ,ಬದಲಿಗೆ ಅವರು 1985 ರ ತನಕವೂ ತಲೆಮರೆಸಿಕೊಂಡು ಬದುಕಿದ್ದು,ಆಮೇಲೆ ಮರಣ ಹೊಂದಿದರು ಎಂದು ಹೇಳುವ ಇದರ ಕಥೆ ಅದನ್ನು ಸಾಕ್ಷಿ ಸಮೇತವಾಗಿ ಇಲ್ಲಿ ನಿರೂಪಿಸುತ್ತಲೇ ಹೋಗುತ್ತದೆ!
ಒಂದು ವೇಳೆ ನೇತಾಜಿ ಅಷ್ಟು ವರ್ಷ ದೀರ್ಘಕಾಲ ಬದುಕಿಯೇ ಇದ್ದಿದ್ದರೆ,ಅದು ಕೂಡ ಭಾರತದಲ್ಲಿಯೇ ವೃದ್ಧ ಸಂನ್ಯಾಸಿಯಂತೆ ಜೀವನ ಸವೆಸಿದ್ದರೆ.... ಅವರು ಏಕೆ ಈ ದೇಶದ ಜನರ ಮುಂದೆ ಬರಲಿಲ್ಲ?ಆಗಿನ ಸರಕಾರ ಕೂಡ ಏಕೆ ಅವರನ್ನು ಜಗತ್ತಿಗೆ ಪರಿಚಯಿಸುವ ಕೆಲಸ ಮಾಡಲಿಲ್ಲ?.. ಏಕೆ?
ಅಸಲಿಗೆ ನೇತಾಜಿ ಅಷ್ಟು ವರ್ಷ ಬದುಕಿ ಉಳಿದಿದ್ದು ನಿಜಾನಾ..?
ಅದಕ್ಕಾಗಿ ನೀವು ಈ ಮೂವಿಯನ್ನೇ ನೋಡಬೇಕು.
Srijit Mukherji ಇದನ್ನು ನಿರ್ದೇಶಿಸಿದ್ದಾರೆ. Prosenjit Chatterjee, Anirban Bhattacharya,Tanusree Chakraborty ಮುಂತಾದವರ ಅಭಿನಯವಿದೆ.
ಅಂದ ಹಾಗೆ ಇದರ ಕತೆ ಕೂಡ ಎಲ್ಲಾ ಸತ್ಯಗಳನ್ನು ಬಿಚ್ಚಿಡುವುದಿಲ್ಲ!
ಏಕೆಂದರೆ ಈ ದೇಶದಲ್ಲಿ ಕೆಲವೊಂದು ಸತ್ಯಗಳನ್ನು ಹೇಳಲಾಗುವುದಿಲ್ಲ!!!.. ಎಂದಿಗೂ!
ಕಥೆ ನಿಧಾನಕ್ಕೆ ಸಾಗುತ್ತದೆ.ಆದರೂ ನೋಡಿ,ನೇತಾಜಿ ನಿಮಗೂ ಇಷ್ಟವಾಗಬಹುದು.Mukherjee Commission Hearings ಹಾಗೂ Conundrum ಪುಸ್ತಕ ಆಧಾರಿಸಿ ಈ ಮೂವಿಯನ್ನು ಮಾಡಲಾಗಿದೆ.
ಮೂವಿಯ ಕೊನೆಯಲ್ಲಿ ನೇತಾಜಿ ತನ್ನ Indian National Army(INA) ಜೊತೆ ಆ ಕಾಲದ Provisional Government of Free India ದ ರಾಷ್ಟ್ರ ಗೀತೆ " Subh Sukh Chain" ಹಾಡುವುದನ್ನು ಸಾಂದರ್ಭಿಕವಾಗಿ ತೋರಿಸಿದ್ದಾರೆ.ನಿಜಕ್ಕೂ ಈ ಗೀತೆ ಒಮ್ಮೆ ಕೇಳಬೇಕು ನೀವು.ಈಗಿನ "ಜನಗಣಮನ" ದ ರಿವ್ರೈಟ್ ಇದಂತೆ,ರಾಗ ಕೂಡ ಹಾಗೆಯೇ ಇದೆ.ಆದರೆ ಸಾಲುಗಳು ಮಾತ್ರ ತುಂಬಾ ಸುಂದರವಾದದ್ದು.ನೇರಾವಾಗಿ ಅದರ ಒಂದಷ್ಟು ಸಾಲುಗಳನ್ನು ಇಲ್ಲಿ ಕಾಪಿ ಪೇಸ್ಟ್ ಮಾಡಿದ್ದೇನೆ ನಿಮಗಾಗಿ..
" Shubh sukh chain ki barkhā barse,
Bhārat bhāg hai jāga.
Punjāb, Sindh, Gujarāt, Marāthā, Dravid, Utkal,Bangā,
Chanchal sagar,Vindhya, Himālaya, nīlā Yamunā, Gangā.
Tere nit gun gāyen,tujhse jīvan pāye,
har tan pāye āsha.
Sūraj ban kar jag par chamke, Bhārat nām subhāgā,
jai ho! Jai ho! Jai ho! Jai, jai, jai, jai ho.... "
#Gumnaami | Prime
Bengali Movie
Mystery Movie
Release - 2019
#Movies
ab




Comments
Post a Comment