Home




ಕೆಲವೊಮ್ಮೆ ಸುಂದರ ಕಥೆಗಳಿಗಾಗಿ ನಾವು ಮನೆಯ ಅಂಗಳಕ್ಕಿಳಿದು ಹೊರ ಜಗತ್ತಿನೆಡೆ ಉದ್ದಕ್ಕೆ ದೃಷ್ಟಿ ಹರಿಸಬೇಕಾಗಿಲ್ಲ. 


ಎಕ್ಸ್ಟ್ರಾಡಿನರಿ ಕಥೆಗಳು ತೀರಾ ಆರ್ಡಿನರಿ ಎನಿಸುವ ನಮ್ಮ ಮನೆಯ ಸದಸ್ಯರಲ್ಲೇ ಇರುತ್ತವೆ.


ನಾವು ಹೆಚ್ಚಾಗಿ ಕೇಳುವುದಿಲ್ಲ...


ಅವರಾಗಿ ಅವರು ಕೂಡ ಹೇಳುವುದೂ ಇಲ್ಲ.


ಕೇಳಬೇಕು..


ಒಂದಷ್ಟು ಕಿವಿಯಾಗಬೇಕು.


ಕಥೆ ಎಲ್ಲರಲ್ಲೂ ಇರುತ್ತದೆ.


ಕೆಲವೊಂದು ಕಥೆ ಮನೆಯವರದ್ದು ಮಾತ್ರವಲ್ಲ.. ಎಲ್ಲರ ಹೃದಯವನ್ನು ಕೂಡ ಹಾಗೇ ಗೆದ್ದು ಬಿಡುತ್ತದೆ.


ಇದು ಕೂಡ ಅಂತಹದ್ದೇ ಕಥೆ. 


ದೂರದ ಊರಲ್ಲಿರುವ ನಿರ್ದೇಶಕ ಮಗ,ತನ್ನ ಮೂವಿಗೆಂದು  ಬರೆದ ಅಪೂರ್ಣ ಕಥೆಯನ್ನು ಪೂರ್ಣಗೊಳಿಸುವುದಕ್ಕಾಗಿ  ಬಿಡುವು ಮಾಡಿಕೊಂಡು ನೇರವಾಗಿ ತನ್ನ ಮನೆಗೆಯೇ ಬರುತ್ತಾನೆ.ಅಷ್ಟಾಗಿ ಆಧುನಿಕತೆಗೆ ತೆರೆದು ಕೊಳ್ಳದ ಅಪ್ಪ,ಅಪ್ಪನನ್ನು ಎಂದೂ ಅರ್ಥ ಮಾಡಿಕೊಳ್ಳದ ಸಿಡುಕ ಮಗ ಈ ಕಥೆಯ ಎರಡು ಪ್ರಮುಖ ಪಾತ್ರಗಳು. 


ಹೆಚ್ಚಾಗಿ ಎಲ್ಲರ ಜೀವನದಲ್ಲಿ ಅದರಲ್ಲೂ ಈಗಿನ ಕಾಲದಲ್ಲಿ ನಡೆಯುವ ಹಲವಾರು ಘಟನೆಗಳನ್ನೇ ಹೆಕ್ಕಿ ಹೆಕ್ಕಿ ಅದಕ್ಕೊಂದು ಸುಂದರವಾದ ಚಿತ್ರಕಥೆ ಬರೆದು ಅದನ್ನೇ ಹಾಗೇ ನೋಡುಗನ ಮುಂದೆ ರುಚಿ ರುಚಿಯಾಗಿ ಉಣಬಡಿಸಿದೆ ಚಿತ್ರ ತಂಡ. 


ಹೆಚ್ಚು ಕಡಿಮೆ 2.40 ಗಂಟೆ ಈ ಮೂವಿ ಇದ್ದರೂ ಇದು ಒಂದು ಸ್ವಲ್ಪವೂ ನಿಮ್ಮನ್ನು ಬೋರ್ ಹೊಡಿಸುವುದಿಲ್ಲ.ಖಂಡಿತವಾಗಿಯೂ ಸಿಕ್ಕಾಪಟ್ಟೆ ನಗಿಸುತ್ತದೆ,ಅದರ ನಡು ನಡುವಲ್ಲಿ ಒಂದಷ್ಟು ಭಾವುಕತೆ,ಹಾಗೇ ಆ ಭಾವ ತೀವ್ರವಾಗುವ ಇನ್ನೊಂದು ಬಗೆ,ಗೊತ್ತಿಲ್ಲದೆ ಹೃದಯ ಬೆಚ್ಚಗಾಗುವುದು,ಸ್ವಲ್ಪ ಕಣ್ಣಂಚು ಅದರಷ್ಟಕ್ಕೆ ಒದ್ದೆಯಾಗುವುದು.. ಎಲ್ಲವೂ ಇದರಲ್ಲಿ ಇದೆ.


ಟೆರೇಸ್ ಮೇಲಿನ ತರಕಾರಿ ತೋಟ,ಪುಟ್ಟ ಪುಟ್ಟ ಆರೆಂಜು ಹಣ್ಣು,ಒಂದಿಷ್ಟು ಬೆಂಡೆ ಕಾಯಿ,ಮನೆಯ ಮುಂದೆ ದಿನಾ ಉದುರುವ ಬೋಗನ್ ವಿಲ್ಲೆ, ಮನೆಯೊಳಗಿನ ಫಿಶ್ ಟ್ಯಾಂಕಿನ  ಒಂಟಿ ಮೀನು,ಅಜ್ಜ ಮತ್ತು ಅಜ್ಜನ ಟೈಪ್ ರೈಟರ್..." ನನಗೊಂದು ಕಾಫಿ ವಿತ್ಔಟ್ ಇರುವೆ,ಅವನಿಗೊಂದು ಕಾಫಿ ವಿತ್ ಇರುವೆ.." ಬೇಕಾದಷ್ಟು ಕಚಗುಳಿಯ ಸಂಭಾಷಣೆ,ಇಂಟರ್‌ನೆಟ್ ಯುಗದಲ್ಲಿ ಸಂಬಂಧಗಳ ತೋಳಲಾಟ,ಮನೆಯೊಳಗೊಂದು ಸದಾ ಭಾವಗಳದ್ದೇ  ಹೊಯ್ದಾಟ....ಇದುವೇ  #Home


Rojin Thomas ಇದನ್ನು ನಿರ್ದೇಶಿಸಿದ್ದು. Indrans, Sreenath Bhasi, Manju Pillai, Deepa Thomas ಮುಂತಾದವರ ಅಭಿನಯವಿದೆ. Indrans ನಟನೆ ತುಂಬಾ ಆಪ್ತವಾಗಿ ಬಿಡುತ್ತದೆ. 


ಫ್ಯಾಮಿಲಿ ಸಹಿತ ನೋಡಬಹುದಾದ ಸುಂದರ ಚಿತ್ರವಿದು. ಒಂಥರಾ ಫೀಲ್ ಗುಡ್ ಮೂವಿ.ವೀಕೆಂಡ್ ಮಾತ್ರವಲ್ಲ ಯಾವಾಗ ಬೇಕಾದರೂ,ಎಷ್ಟು ಸಲ ಬೇಕಾದರೂ ನೋಡಬಹುದು.ಈ ಚಿತ್ರಕ್ಕೆ ಹೃದಯದಿಂದಲೇ ಫುಲ್ ಮಾರ್ಕ್ಸ್ ನನ್ನದು.ನೀವೂ ನೋಡಿ.ಒಬ್ಬರೇ ನೋಡಬೇಡಿ.ಪಕ್ಕದಲ್ಲಿ ನಿಮ್ಮ ಅಪ್ಪ ಹಾಗೂ ಅಜ್ಜ ಕೂಡ ಇರಲಿ... 


#Home | Prime 

Malayalam Movie 

Comedy Drama 

Release - August 19 2021


#Movies 

Ab

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ