Navarasa




ಕೆಳಗಿನದ್ದು ಓದಬಹುದು... ಅಂತಹ " Spoiler Alert " ಇಲ್ಲ.


ಮೇಲಿಂದ ಮೇಲೆ ಕಾಯಿ ಹೋಳಿಗೆಯ ಕ್ರಸ್ಟ್ ಬಗ್ಗೆ ಮಾತ್ರ ಹೇಳುತ್ತೇನೆ.ಹೊಳಿಗೆಯೊಳಗಿನ ಬೆಲ್ಲ ಕಾಯಿಯನ್ನು ನೇರವಾಗಿ ಸ್ವತಃ ನಿಮಗೆಯೇ ಸವಿಯುವ ಮನಸ್ಸಿದ್ದರೆ ಖಂಡಿತವಾಗಿಯೂ ನಿರಾಸೆ ಮಾಡುವುದಿಲ್ಲ.




" Navarasa " ಇದು Anthology ಸೀರಿಸ್. ಒಟ್ಟು ಒಂಬತ್ತು ಬೇರೆ ಬೇರೆ ಕಥೆಗಳಿವೆ. ಒಂಬತ್ತು ಬೇರೆ ಬೇರೆ ಭಾವ,ಹಾಗೂ ಬೇರೆ ಬೇರೆ ರಸಗಳಿಂದ ಕೂಡಿದ ಕಥೆಗಳಿವು. 


ಬನ್ನಿ,ಹೂರಣಕ್ಕೆ ಜಾಸ್ತಿ ಕೈ ಹಾಕದೇ ಜಸ್ಟ್ ಕಣಕದ ರುಚಿ ಹೇಗಿದೆ ಎಂದು ನೋಡಿ ಬರೋಣ.




#E01_Edhiri : Karuna 

" ಮನುಷ್ಯ ಎಂಬುವವನು  ದೇವರೂ ಆಗಬಹುದು,ಎಲ್ಲರಿಗೂ ಸಮವಾಗಿ ಹಂಚುವವನು ಆಗಿದ್ದರೆ ರಾಜನೂ ಆಗಬಹುದು,ಬಾಳೆ ಗಿಡದಂತೆ ಎಲ್ಲವನ್ನೂ ಸಮರ್ಪಿಸುವನು  ಆಗಿದ್ದರೆ ಸಮಜಕ್ಕೆ ಅವನೊಬ್ಬ ಹುತಾತ್ಮ,ಅದೇ ಮೇಣದ ದೀಪದಂತೆ ಸ್ವಾರ್ಥವಿಲ್ಲದೆ ಉರಿದರೆ ನಿರಂತರವಾಗಿ ಅವನೂ ಕೂಡ ಬೆಳಕು ಕೊಡುವ ದೀಪ  " ಎನ್ನುವ ಅರ್ಥವಿರುವ ಪಿ. ಬಿ ಶ್ರೀನಿವಾಸ್ ಹಾಡಿರುವ Manithan Enbavan ಎಂಬ ಸೊಗಸಾದ ತಮಿಳು ಹಾಡಿನೊಂದಿಗೆ ಇದರ ಕಥೆ ಆರಂಭವಾಗುತ್ತದೆ.ಅಷ್ಟೇ ಬೇಗ ಅಂದರೆ 28 ನಿಮಿಷದಲ್ಲೇ ಇದರ ಕಥೆ ಮುಗಿದು ಕೂಡ ಹೋಗುತ್ತದೆ.ಮೊದಲ ಕಥೆಗೆ ನಾಯಕ ವಿಜಯ ಸೇತುಪತಿ.ಆದರೆ ಕಥೆಯಲ್ಲಿ ಅಲ್ಲ! 


ಇದು ಕರುಣ ಭಾವದ ಕಥೆ."ಮರವನ್ನು ಗಟ್ಟಿಯಾಗಿ ಹಿಡಿದು ರಕ್ಷಣೆ ಮಾಡದೇ ಹೋದರೆ ಹೇಗೆ ನೆಲವೊಂದು ಉಪಯೋಗಕ್ಕೆ ಬರುವುದಿಲ್ಲವೋ,ಅದೇ ರೀತಿ ಒಂದು ಚೂರು ಕರುಣೆ ಇಲ್ಲದೇ ಇತರರಿಗೆ ಹಿತ ಬಯಸದೆ ಹೋದರೆ ಆ ಹೃದಯವೂ ಕೂಡ ಅಷ್ಟೇ ಉಪಯೋಗವಿಲ್ಲದ್ದು! ಎಂಬ ತಿರುಕ್ಕುರಲ್-576 ರ ಸಾರವೇ ಇದರ ಒಟ್ಟಾರೆ ಕಥೆ.




#E02_Summer_of_92 : Hasya

"A day without laughter is a day wasted" ಥೀಮಿನ ಹಾಸ್ಯದ ಕಥೆ ಇದು.ಕಥೆಗೆ ತಕ್ಕ ಹಾಗೆಯೇ ಇದರ ನಾಯಕ ಯೋಗಿ ಬಾಬು.ನಿಜಕ್ಕೂ ಮಜವಾಗಿದೆ ಇದು.ಪುಳಿಯೋಗರೆ ತಿನ್ನಲು ಇಷ್ಟ ಪಡುವ ಒಂದು ದುಷ್ಟ ನಾಯಿ ಹಾಗೂ ನಾಲ್ಕು ಬಾರಿ 10th ಫೈಲ್ ಆಗಿರುವ ಬಾಲಕನ ಕಥೆ ಇದು.ಹೆಚ್ಚೆಂದರೆ 30 ನಿಮಿಷಗಳ ಕಥೆ ಅಷ್ಟೇ ಇದು.ಯೋಗಿ ಬಾಬು ಇದ್ದಾನಲ್ಲ ಹಾಗಾಗಿ ಮಜವಾಗಿದೆ,ನಿಮಗೆ ಇಷ್ಟವಾಗಬಹುದು.Innocent Vareed Thekkethala ಎಂಬ ನಟ ಹಾಗೂ ಎಂ.ಪಿ ಯೊಬ್ಬನ  ನಿಜ ಘಟನೆಗಳನ್ನೇ ಆಧಾರಿಸಿ ಇದರ ಕಥೆ ಮಾಡಿದ್ದಾರೆ.




#E03_Project_Agni : Adbutha

ಇದರಲ್ಲಿ ಅರವಿಂದ್ ಸ್ವಾಮಿ ನಾಯಕ. ಕಲ್ಪನೆಗಳನ್ನು ನಿಜ ಜೀವನದಲ್ಲಿ ಸಾಧ್ಯವಾಗಿಸುವ ಫಿಕ್ಷನ್ ಥ್ರಿಲ್ಲರ್ ಕಥೆ ಇದು.Man's reach exceeds his grasp ಎನ್ನುವ ಸ್ವಯಂ ಆವಾಂತರದ ಕಥೆ ಇದು! ಎಲ್ಲರಿಗೂ ಇಷ್ಟವಾಗಲಿಕ್ಕಿಲ್ಲ. ಆದರೆ ಕೆಲವರಿಗೆ ಇಂತಹದ್ದೇ ಇಷ್ಟ,ಹಾಗಾಗಿ ಚೆನ್ನಾಗಿಲ್ಲ ಎಂದು ಹೇಳಲು ಬರುವುದಿಲ್ಲ. 




#E04_Payasam : Bheebhatsa

ಇದೊಂತರಹದ ಪಾಯಸದಂತೆಯೇ ರುಚಿಕಟ್ಟಾದ ಕಥೆ.ಕಥೆಯಲ್ಲಿ ಪಾಯಸವೂ ಇದೆ.ಕಡ್ಲೆಬೇಳೆಯೊಂದು ಇತರ ಬೇಳೆ ಸಾಮಾಗ್ರಿ,ಗೋಡಂಬಿ, ತುಪ್ಪ ಹಾಗೂ ಬೆಲ್ಲದೊಂದಿಗೆ ಮುಹೂರ್ತದ ಪಾಯಸವಾಗುತ್ತಾ ಹೋಗುವ ಬಗೆ ಇದರದ್ದು.ಆದರೆ ಪಾಯಸ ಮಾಡುವುದೇ ಇದರ ಕಥೆಯಲ್ಲ.1965 ರ ಈ ಕಥೆಯಲ್ಲಿ ಪಾಯಸ ಅಲ್ಲಲ್ಲಿ ಇದೆ.ಅದಿತಿ ಬಾಲನ್ ಹಾಗೂ ಡೆಲ್ಲಿ ಗಣೇಶ್ ಅಭಿನಯ ಇಷ್ಟವಾಗುತ್ತದೆ.ಈ ಕಥೆ  ನನಗೆ ಬಹಳ ಇಷ್ಟವಾಯಿತು.




#E05_Peace : Shanthih

ಶ್ರೀಲಂಕಾ ನೆಲದಲ್ಲಿದ್ದ ತಮಿಳು ಹೋರಾಟಗಾರರ ಕದನದ ಕಥೆ ಇದು.ಎರಡೂ ಕಡೆಗಳ ಬುಲ್ಲೆಟ್, ಬಾಂಬು ದಾಳಿಗಳ ನಡುವೆಯೊಂದು ಪುಟ್ಟ ನಾಯಿ ಮರಿಯೊಂದರ ಕಥೆ ಇದರಲ್ಲಿ ಇದೆ.ಶಾಂತಿ ಸ್ಥಾಪನೆ ಆಗುತ್ತಾ? ಬಾಬಿ ಸಿಂಹ,ಗೌತಮ್ ವಾಸುದೇವ್ ಮೆನನ್ ಅಭಿನಯವಿದೆ.




#E06_Raudram : Raudra

ಆ ಅಣ್ಣ ತಂಗಿಯಂದಿರ ಅನ್ನದ ಬಟ್ಟಲಿನಲ್ಲಿ ದಿನಲೂ  ಕಾಯಿಸಿದ ಒಣಮೀನು. ಒಮ್ಮೆಯಾದರೂ ಹಸಿ ಮೀನು ತಿನ್ನಬೇಕು ಎಂದು ಇನ್ನಿಲ್ಲದಂತೆ ಆಸೆ ಪಡುವ ಅವರಿಬ್ಬರಿಗೆ ಅವರ ತಾಯಿ,ತನ್ನ ತಾಯಿ ಹೇಳಿದ ಈ ಮಾತು ಹೇಳುತ್ತಾಳೆ "ಹೆಣ್ಣು ಬಂಗಾರ ಇದ್ದಂತೆ. ಎಲ್ಲರಿಗೂ ಅವಳು ಬೇಕು. ಅವಳಿಗಾಗಿ ಜಗಳಗಳೇ ಆಗುತ್ತದೆ.ಎಲ್ಲರಿಗೂ ಅವಳನ್ನು ಗೆಲ್ಲಬೇಕು. ಹೌದು ಹೆಣ್ಣು ಬಂಗಾರ ಇದ್ದಂತೆ.ಆದರೆ ಅವಳು ಬೆಂಕಿಯಲ್ಲಿಯೇ ಉರಿದು ಅರಳಬೇಕು. ಬಂಗಾರಕ್ಕೂ ಹೆಣ್ಣಿಗೂ ಒಂದೇ ವ್ಯತ್ಯಾಸ. ಬಂಗಾರಕ್ಕೆ ಬೆಲೆಯೂ ಇದೆ,ಗೌರವವೂ ಇದೆ. ಆದರೆ ಕೆಲವೊಮ್ಮೆ ಹೆಣ್ಣಿಗೆ ಬೆಲೆ ಮಾತ್ರ ಇದೆ....ಆದರೆ  ಗೌರವವಿಲ್ಲ! " ಏತಕ್ಕಾಗಿ ಈ ಕಥೆ ರೌದ್ರ?! ಶ್ರೀ ರಾಮ್ ಅಭಿನಯ ಚೆನ್ನಾಗಿದೆ. ಈ ಕಥೆಯೂ ಇಷ್ಟವಾಗುತ್ತದೆ.



#E07_Enmai : Bhaya 

What is fear? Non acceptance of uncertainity.ಇದು ರುಮಿ ಹೇಳಿದ್ದು.ಕಥೆಯಲ್ಲೂ ಇದು ಇದೆ. ಚಂದದ ಅಕ್ಷರಗಳ ಬರೆಯುವ  ಕ್ಯಾಲಿಗ್ರಾಫಿ ಅವನಿಗೆ ಗೊತ್ತು.ಅದರ ಜೊತೆಗೆ ಇನ್ನೊಂದು ಯಾರಿಗೂ ಗೊತ್ತಿರದ ಅವಳ ಕಥೆ. " ಟೀ ಕಪ್ ಗೆ ಮೊದಲು ಹಾಲು ಹಾಕಬೇಕೋ ಅಥವಾ ಮೊದಲು ಡಿಕಾಕ್ಷನ್ ಹಾಕಿ ಆ ನಂತರ ಹಾಲು ಬೆರೆಸಬೇಕೋ ಎಂಬುವ ಲೆಕ್ಕಾಚಾರಕ್ಕಿಂತಲೂ ಅತಿಥಿಗೆ ಕುಡಿಯಲು ಕೊಡುವ ಟೀ ಕಪ್ ಎಷ್ಟು ಸುಂದರವಾದದ್ದು, ಎಷ್ಟು ದುಬಾರಿಯಾದದ್ದು ಎಂದು ತೋರಿಸುವುದೇ ಸಿರಿವಂತರ ಗುಣ..! " ಎಂದು ಹೇಳುತ್ತಲೇ ಅವಳನ್ನು ತಣ್ಣಗೆ ಅದುರಿಸಿ ಅವನು ಕಥೆ ಮುಂದುವರಿಸುತ್ತಾನೆ. Parvathy Thiruvothu, Siddharth ಇದರಲ್ಲಿ ಅಭಿನಯಿಸಿದ್ದಾರೆ.



#E08_Thunintha_Pin : Veera

ಹೊಸದಾಗಿ ಸೈನ್ಯಕ್ಕೆ ಸೇರಿದ ತರುಣ ಯೋಧನೊಬ್ಬ ಒಬ್ಬ ನಕ್ಸಲನನ್ನು ಸೆರೆ ಹಿಡಿದು ದಟ್ಟ ಕಾಡಿನಲ್ಲಿ ಜೀಪಿನಲ್ಲಿ ಹೋಗುವಾಗ ನಕ್ಸಲ್ ಯೋಧನಿಗೆ  ಹೇಳುತ್ತಾನೆ " ನಿನ್ನ ಕೈಯಲ್ಲಿರುವ  ತುಪಾಕಿ ಮಾತ್ರ ನಿನ್ನದು.. ಆದರೆ ಈ ಇಡೀ ಕಾಡೇ ನನ್ನದು! ಹೆದರಿಕೆ ಆಗ್ತಾ ಇದೆಯಾ.? ಒಂದೇ ಒಂದು ಸೆಕೆಂಡ್ ಧೈರ್ಯ ಬಂದರೂ ಸಾಕು ಮನಸ್ಸು ದೇಹ ಎರಡೂ ಸೇರಿ ಒಟ್ಟಿಗೆಯೇ ಕೆಲಸ ಮಾಡಬಹುದು.ಇಲ್ಲದಿದ್ದರೆ ಅದು ಸಾಧ್ಯವಿಲ್ಲ.ನೀನು ಗುರಿ ಇಡಬಹುದು,ಆದರೆ ಶೂಟ್ ಮಾಡಲಾರೆ.. ಏಕೆಂದರೆ ನಿನ್ನ ಕೈ ಅದುರುತ್ತಿದೆ! " ಮುಂದೇನಾಗುತ್ತದೆ? ಅಥರ್ವ, ಅಂಜಲಿ ಹಾಗೂ ಕಿಶೋರ್ ನಟಿಸಿದ್ದಾರೆ.



#E09_Guitar_Kambi_mele_Nindru : Sringara

ಇಡ್ಲಿ ಬಡಿಸುವಾಗ ಅಮ್ಮ ಕೇಳುತ್ತಾಳೆ "ಒಳ್ಳೆಯ ಹಾಡುಗಾರ ನೀನು, ಎಲ್ಲಾ ಕಡೆ ನಿನ್ನದೇ ಹೆಸರು. ಎಲ್ಲರಿಗೂ ಹಾಡುವ ನೀನು ನನಗಾಗಿ ಒಂದು ಹಾಡು ಹಾಡಲಾರೆಯಾ?" ಇದರ ಕಥೆ ಈ ರೀತಿ ಆರಂಭವಾಗುತ್ತದೆ.ಆದರೆ ಇದು ಅಮ್ಮ ಮಗನ ಕಥೆ ಅಲ್ಲ. 

ಎಲ್ಲಾ ರಸಗಳ ಕಥೆ ಆದ ಮೇಲೆ  ಕೊನೆಯಲ್ಲೊಂದು ಪ್ರೀತಿಯ ಕಥೆಯೇ ಇರದಿದ್ದರೆ ಹೇಗೆ. ಅದಕ್ಕಾಗಿ ಈ ಕಥೆ.

ಒಂದೆರಡು ಹಾಡು ಕೇಳಲು ಬಹಳಷ್ಟು ಇಂಪಾಗಿದೆ. ಸೂರ್ಯ ಕ್ಲೀನ್ ಶೇವ್ ಮಾಡಿಕೊಂಡು ಅಲ್ಲಲ್ಲಿ ಸುಮ್ಮನೆ ನಗುತ್ತಿದ್ದರೆ ಅದ್ಯಾಕೋ ಸಿಕ್ಕಾಪಟ್ಟೆ ಇಷ್ಟವಾಗುತ್ತಾನೆ.ಪ್ರೀತಿ ಹೇಗೆ ಆಗುತ್ತದೆ? ಗೊತಿಲ್ಲ.ಒಟ್ಟಿಗೆ ಇದ್ದರೂ ಅದು ಪ್ರೀತಿಯೇ.ಸಿಗದೇ ಹೋದರೂ ಅದು ಎಂದಿಗೂ ಅಷ್ಟೇ ಪ್ರೀತಿ,ಅದೇ ಪ್ರೀತಿ! Prayaga Rose Martin ನಿಮಗೂ ಇಷ್ಟ ಆಗಬಹುದು.ಈ ಕಥೆಯೇ ಸ್ವಲ್ಪ ಹೆಚ್ಚು ಉದ್ದ ಇರುವುದು,ಅಂದರೆ ಸುಮಾರು 45 ನಿಮಿಷ ಅಷ್ಟೇ. ಹಾಡು,ನವೀರಾದ ಸಂಭಾಷಣೆಗಳು ಹಾಗೇ ಈ ಕಥೆಯನ್ನು ಬಹು ಬೇಗನೇ ಮುಗಿಸಿ ಬಿಡುತ್ತದೆ.



ಒಟ್ಟಾರೆ ಈ ಸೀರಿಸ್ ಬಗ್ಗೆ ಹೇಳಬೇಕೆಂದರೆ ಇದು  ಪುಟ್ಟ ಬೌಲ್ ನಲ್ಲಿರುವ ಹಲವು ಬಗೆಯ ಹಣ್ಣುಗಳ ಫ್ರೂಟ್ ಸಲಾಡ್. ಒಂದೊಂದೂ ವಿಭಿನ್ನ ರುಚಿಯ ಹಣ್ಣುಗಳು.ಎಲ್ಲಾ ಹಣ್ಣುಗಳು ಎಲ್ಲರಿಗೂ ಇಷ್ಟವಾಗಬೇಕಿಲ್ಲ. ಹೇಗೆ ಸಿಹಿ ರುಚಿಯ ಹಣ್ಣುಗಳಿವೆಯೋ ಹಾಗೆಯೇ  ಸಪ್ಪೆ ಅನಿಸಬಹುದಾದ ಹಣ್ಣುಗಳೂ ಕೂಡ ಇದರಲ್ಲಿದೆ.ಇಲ್ಲಿ ಕೊನೆಯದ್ದೊಂಂದು ಕಥೆ ಬಿಟ್ಟರೆ ಉಳಿದ ಎಂಟು ಕಥೆಗಳು ಇರುವುದೇ ಕೇವಲ 25 ರಿಂದ 30 ನಿಮಿಷಗಳಷ್ಟು ಅಷ್ಟೇ.ಆದರೂ ಕಮ್ಮಿ ಸಮಯದ ಕಥೆಗಳಾದರೂ ಕೆಲವೊಂದು ಕಥೆ ಬಹಳಷ್ಟು ಇಷ್ಟವಾಗುತ್ತದೆ. ಇನ್ನು ಕೆಲವು ಬಹುಶಃ ಇಲ್ಲ.ಕೆಲವು ಕಥೆಗಳಿಗೆ ಮುಕ್ತಾಯವೇ ಇಲ್ಲ.ನನಗಂತು ಅಂತಹ ಕಥೆಗಳೇ ಇಷ್ಟ.ಎಲ್ಲವನ್ನೂ ಹೇಳದೇ ಒಂದಷ್ಟನ್ನು ಉಳಿಸುವುದು!


Mani Ratnam ಕೈಯಲ್ಲಿ ಅರಳಿದ ಈ ನವರಸ ಸಿರೀಸ್ ಗೆ ಬಹಳಷ್ಟು ದೊಡ್ಡ ದೊಡ್ಡ ನಾಯಕ ನಾಯಕಿಯರ ದಂಡೇ ಇದೆ. ಒಂಬತ್ತು ನಿರ್ದೇಶಕರ ಕೆಲಸವೂ ಇದೆ.ಒಟ್ಟಿನಲ್ಲಿ ಉಪ್ಪು,ಹುಳಿ, ಖಾರ,ಸಿಹಿ,ಸಪ್ಪೆ,ಒಗರಿನ ಅನುಭವ.



ನೋಡಿ.. ಕಥಾ ಸಂಕಲನ ಓದಿದ ಅನುಭವ ಇದು.

ಒಂದಷ್ಟು ಕಥೆ ನಿಮಗೂ ಇಷ್ಟ ಆಗಬಹುದು..... 



#Navarasa | Netflix

Tamil Series 

Anthology 

Release - 6 August 2021


#Series 

Ab Pacchu

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ