Netrikann
ಇದು 2011 ರಲ್ಲಿ ಬಂದಂತಹ ಕೊರಿಯನ್ ಮೂವಿ "Blind" ನ ರಿಮೇಕ್.Blind ನೋಡಿದವರಿಗೆ ಇದು ಸ್ವಲ್ಪ ಸಪ್ಪೆ ಅನಿಸಬಹುದು,ಅದನ್ನು ನೋಡದೆ ಇದ್ದರೆ ಒಂದು ಬಾರಿ ನೋಡಲು ಅಂತಹ ಅಡ್ಡಿ ಏನಿಲ್ಲ ಈ ಮೂವಿ.
ಓರಿಜಿನಲ್ ಮೂವಿಯ ರಿಮೇಕ್ ಅಲ್ಲದೇ ಹೋದರೂ ಇಂತಹ ಕಥೆಗಳು ಬೇರೆ ಬೇರೆ ರೀತಿಯಲ್ಲಿ ಅದಾಗಲೇ ಬಂದಿರುವುದರಿಂದ ಕಥೆ ಹೇಗೆ ಸಾಗಬಹುದು ಅನ್ನುವುದು ಹೆಚ್ಚು ಕಡಿಮೆ ಮೊದಲೇ ಗೊತ್ತಾಗಿ ಬಿಡುತ್ತದೆ.
ಥ್ರಿಲ್ಲರ್ ಮೂವಿ ಆದರೂ ಕೆಲವೊಮ್ಮೆ ಕಥೆಯ ಮೇಲಿನ ಹಿಡಿತ ಸಡಿಲವಾಗುವುದು ಆಮೇಲೆ ಒಮ್ಮೆಲೇ ಇನ್ನಷ್ಟು ಬಿಗಿಯಾಗುವುದರಿಂದ "ಓಕೆ ಓಕೆ" ಅನ್ನಬಹುದಾದ ಮೂವಿ ಇದು.ಆದರೂ ನೋಡಲೇ ಬೇಡಿ ಎಂದು ಹೇಳಲಾರೆ. ಖಂಡಿತವಾಗಿಯೂ ಕೆಲವೊಂದಷ್ಟು ಜನಗಳಿಗೆ ಇದು ಕೂಡ ಇಷ್ಟ ಆಗಬಹುದು.
ನಯನತಾರ ಅಭಿನಯ ಎಂದಿನಂತೆ ಇದೆ.ಕೆಲವೊಂದು ಕಡೆ ಆಕೆ ಹಿಂದಿನಂತೆಯೇ ತುಂಬಾ ಇಷ್ಟವಾಗುತ್ತಾಳೆ,ಕೆಲವೊಂದು ಕಡೆಗಳಲ್ಲಿ ಖಂಡಿತವಾಗಿಯೂ ಇಲ್ಲ.
ಇಲ್ಲಿ ಅಂಧಳಾಗಿ ನಟಿಸಿದ ನಯನತಾರಳದ್ದೊಂದು ಅಭಿನಯ,ಅವಳದ್ದೊಂದು ನಿಯತ್ತಿನ ನಾಯಿ ಕಣ್ಣ,ನಿಷ್ಠೆಯ ಪೋಲಿಸ್ ಇನ್ಸ್‌ಪೆಕ್ಟರ್ ಮಣಿಕಂಠನ್,ನೆರವಿಗೆ ಬರುವ ಡೆಲಿವರಿ ಭಾಯ್ ಗೌತಮ್.. ಈ ಮೂವಿಯ ಹೈಲೈಟ್. ಮೆಟ್ರೊ ಸ್ಟೇಷನ್ ನ ದೃಶ್ಯಗಳು ಒಂದಷ್ಟು ಗಮನ ಸೆಳೆಯುತ್ತದೆ.ಅಂತಹ ನಿರೀಕ್ಷೆಗಳು ನಿಮ್ಮಲ್ಲಿ ಇಲ್ಲದೇ ಹೋದರೆ ಒಂದು ಬಾರಿ ನೋಡಲು ಕಷ್ಟವಾಗದು.
Milind Rau ಇದನ್ನು ನಿರ್ದೇಶಿಸಿದ್ದು, Nayanthara,Ajmal Ameer, Sharan Shakthi ಮುಂತಾದವರ ಅಭಿನಯವಿದೆ.
#Netrikann | Hotstar
Tamil Movie
Crime Thriller
Release - 13 August 2021
#Movies
Ab
Comments
Post a Comment