Shershaah
ಇಷ್ಟು ಬೇಗ ಮತ್ತೆ ಹೋಗಬೇಕಾ..ಎಂದು ಬೇಜಾರಿನಲ್ಲಿ ಹೇಳಿದ ಗೆಳೆಯನಿಗೆ ಅವನು ನಗು ನಗುತ್ತಲೇ ಈ ರೀತಿ ಹೇಳುತ್ತಾನೆ.
" Oye.. fikkar naa kar jaani..main Tiranga lehrake aaunga,nahi toh usme lipatke aaunga... Lekin aaunga zaroor..!! "
ಯೋಧರ ಕಥೆಗಳೇ ಹಾಗೇ.ಹೇಗೆ ಹೇಳಿದರೂ,ಯಾರೇ ಹೇಳಿದರೂ,ಎಷ್ಟು ಸಲ ಕೇಳಿದರೂ,ಪದೇ ಪದೇ ಓದಿದರೂ... ಕೊನೆಯಲ್ಲಿ ಮಾತ್ರ ಕಣ್ಣಿಂದ ಎರಡು ಹನಿ ಹಾಗೇ ಕೆನ್ನೆಯ ಮೇಲೆ ನಮಗರಿವಿಲ್ಲದೆ ಜಾರಿ ಬಿಡುತ್ತದೆ!
Vikram Batra.. ಯೋಧರನ್ನು ಪ್ರೀತಿಸುವ ಎಲ್ಲರಿಗೂ ಈ ಒಂದು ಹೆಸರು ಬಹಳಷ್ಟು ಚಿರಪರಿಚಿತ.ಆತನ ಸಾಧನೆ,ಸಾಹಸ ಕೂಡ ಅಷ್ಟೇ ದೊಡ್ಡದು.ಪಾಕಿಸ್ತಾನಕ್ಕೆ ಮಣ್ಣು ಮುಕ್ಕಿಸಿ ಹುತಾತ್ಮರಾಗಿ ಹೋದ ಈ ನೆಲದ ಹಲವು ಧೀರ ವೀರ ಯೋಧರಲ್ಲಿ ಒಂದು ಹೆಸರು ಈ ವಿಕ್ರಂ ಭಾತ್ರನದ್ದು ಕೂಡ. ಅವನನ್ನು ಈ ದೇಶ ಎಂದೆಂದಿಗೂ ಕೊಂಡಾಡುತ್ತಲೇ ಇರುತ್ತದೆ.ಇರಬೇಕು ಕೂಡ.ಏಕೆಂದರೆ ಅವನ ಕಥೆಯೇ ಅಂತಹದ್ದು.ಈ ಮೂವಿಯ ಕಥೆಯು ಕೂಡ ಅವನದ್ದೇ.
ಕಥೆ ಗೊತ್ತಿದ್ದರೂ ಒಂದು ಬಾರಿ ನೋಡಿ ಬಿಡಿ... ವಿಕ್ರಂಗಾಗಿ.. ಪರಮ್ ವೀರ್ ಚಕ್ರ ಕ್ಯಾಪ್ಟನ್ ವಿಕ್ರಂ ಭಾತ್ರನಿಗಾಗಿ.
"ದುರ್ಗೆ ಮಾತ ಕಿ ಜೈ.." ಎಂದು ಹೆಜ್ಜೆ ಹೆಜ್ಜೆಗೂ ಜೈಕಾರ ಕೂಗುವ 13 JAK RIFLES ಹಾಗೂ ಕೇವಲ ಗೆಲುವಿನ ಹಸಿವು ಒಂದನ್ನೇ ಇಟ್ಟುಕೊಂಡು "ದಿಲ್ ಮಾಂಗೇ ಮೋರ್..." ಎಂದು ಹೇಳಿ ಹೋರಾಡುವ ಕಾರ್ಗಿಲ್ ಹೀರೋ ವಿಕ್ರಂ ಭಾತ್ರ ಯಾರಿಗೆ ತಾನೆ ಇಷ್ಟವಾಗುವುದಿಲ್ಲ ಹೇಳಿ.
" If you're a fauji then you live by chance,Love by choice.... and Fight by profession "ಎಂದು ಹೇಳುವ ವಿಕ್ರಂ ಭಾತ್ರ ಹೋರಾಡಿದ್ದು,ಬದುಕಿದ್ದು ಕೂಡ ಅದೇ ರೀತಿಯೇ.
" Har fauji ka sapna hota hai.. ki kam se kam ek bar war mein jaane ka mauka mile" ಎಂದು ಹೇಳಿ ಆಸೆ ಪಟ್ಟು Point 5140, Point 4875 ನಂತಹ ದುರ್ಗಮ ಶಿಖರಗಳನ್ನು ಭಯ ರಹಿತವಾಗಿ ಹತ್ತಿ ಪಾಪಿ ಪಾಕಿಸ್ತಾನದ ಸದ್ದಡಗಿಸುವ ವಿಕ್ರಂ.. ಕೊನೆಯಲ್ಲಿ ಮಾತ್ರ ನೋಡುಗನ ಹೃದಯವನ್ನು ಬಹಳಷ್ಟು ಭಾರಗೊಳಿಸಿಯೇ ಕಥೆ ಮುಗಿಸುತ್ತಾನೆ.
ಎಂದಿಗೂ ಸಂದೇಹವೇ ಇಲ್ಲ,ಯೋಧರೇ ಈ ನೆಲದ ನಿಜವಾದ ಹೀರೋಗಳು.ಎಲ್ಲರಿಗೂ ಸ್ಪೂರ್ತಿ ಆಗಬಲ್ಲ ಅವರುಗಳ ಕಥೆ ಈ ರೀತಿ ಮೂವಿಯಾಗಿ ಇನ್ನಷ್ಟು ಬರುತ್ತಲೇ ಇರಲಿ.
ಇಲ್ಲಿ Sidharth Malhotra ಯೋಧನಾಗಿ ಬಹಳ ಸುಂದರವಾಗಿ ಕಾಣುತ್ತಾನೆ ಮತ್ತು ಅಲ್ಲಲ್ಲಿ ಇಷ್ಟವಾಗುತ್ತಾನೆ.Kiara Advani ಅಭಿನಯವೂ ಚೆನ್ನಾಗಿದೆ.ಮೊದಲ ಒಂದು ಹಾಡು ಇಷ್ಟವಾಯಿತು.Vishnuvardhan ಇದನ್ನು ನಿರ್ದೇಶಿಸಿದ್ದಾರೆ.
ಟ್ರೈಲರ್ ನಲ್ಲಿ ಹಾಗೆ ಇತ್ತು,ಹೀಗೆ ಇತ್ತು,ಅದು ಸರಿ ಇರಲಿಲ್ಲ, ಇದು ಸರಿ ಇರಲಿಲ್ಲ, ಹೀಗೆ ಮಾಡಬಾರದಿತ್ತು ಎನ್ನುವುದನ್ನೆಲ್ಲಾ ಪಕ್ಕಕ್ಕೆ ಇಟ್ಟು ಹಾಗೇ ಒಮ್ಮೆ ನೋಡಿ ಬಿಡಿ...ಕೇವಲ ವಿಕ್ರಂ ಭಾತ್ರ ಹಾಗೂ ಅವನದ್ದೊಂದು ಶೌರ್ಯದ ಕಥೆಗಾದರೂ ಇದು ನಿಮಗೆ ಇಷ್ಟವಾಗುತ್ತದೆ.ನಿಮ್ಮ ಮನೆಯ ಮಕ್ಕಳಿಗೆ ವಿಕ್ರಂ ನ ಕಥೆ ಗೊತ್ತಿರದಿದ್ದರೆ ಅವರನ್ನೂ ಕೂಡ ಪಕ್ಕಕ್ಕೆ ಕೂರಿಸಿಕೊಂಡು ಅವರಿಗೂ ವಿಕ್ರಂನನ್ನು ಒಂದಷ್ಟು ಪರಿಚಯ ಮಾಡಿಸಿ.
ಇಲ್ಲಿ ವಿಕ್ರಂ ಹೇಳುವ ಹೆಚ್ಚಿನ ಸಾಲುಗಳು ಬಹಳಷ್ಟು ಇಷ್ಟವಾಗುತ್ತದೆ.ಬಹುಶಃ ಅವುಗಳಲ್ಲಿ ಕೆಲವೊಂದು ನಿಮಗೂ ಇಷ್ಟವಾಗಬಹುದು.
" Ek fauji ke rutbe se bada koi aur rutba nahi hota, vardi ki shaan se badi koi aur shaan nahi hoti ... aur apne desh se bada koi dharam nahi hota"
ಎಲ್ಲಕ್ಕಿಂತ ಹೆಚ್ಚು ಈ ಸಾಲು ಒಂದು ಹಾಗೇ ಹೃದಯದೊಳಗೆ ಇಳಿದು ಬಿಟ್ಟಿತು..
" Kuch bhi ho jaaye, Tiranga hum hi lehrayenge..." 🇮🇳
"ದುರ್ಗೆ ಮಾತ ಕಿ ಜೈ.."
#Shershaah | Prime
Hindi Movie
Biographical War Film
Release - 12 August 2021
#Movies
Ab




Comments
Post a Comment