The Bridge on the river kwai
ಜಪಾನ್ 1943 ರಲ್ಲಿ ಸೆರೆ ಸಿಕ್ಕ ಬ್ರಿಟಿಷ್ ಹಾಗೂ ಮಿತ್ರ ಪಕ್ಷಗಳ ಸೈನಿಕರನ್ನು ಬರ್ಮಾದ ಕಾಡಿನ ನಡುವೆ ಇರುವ ತನ್ನದೊಂದು ಪ್ರಿಸಂನ್ ಕ್ಯಾಂಪಿನಲ್ಲಿ ಯುದ್ಧ ಖೈದಿಗಳನ್ನಾಗಿ ಇರಿಸಿಕೊಳ್ಳುತ್ತದೆ.
ಬ್ಯಾಂಕಾಕ್ ಮತ್ತು ರಂಗೂನ್ ನಡುವೆ ಸಂಪರ್ಕ ಕಲ್ಪಿಸುವುದಕ್ಕಾಗಿ ಅಲ್ಲಿಯ ಕ್ವಾಯಿ ನದಿಯ ಮೇಲೊಂದು ರೈಲ್ವೆ ಸೇತುವೆ ನಿರ್ಮಿಸುವ ತುರ್ತು ಅಗತ್ಯ ಜಪಾನ್ ಗೆ ಇರುತ್ತದೆ.
ಇದೇ ಬ್ರಿಟಿಷ್ ಯುದ್ಧ ಕೈದಿಗಳನ್ನು ಬಳಸಿಕೊಂಡು ಅದು ಕ್ವಾಯಿ ನದಿಯ ಮೇಲೆ ಒಂದು ಸೇತುವೆ ಕಟ್ಟಲು ಮುಂದಾಗುತ್ತದೆ.
ಆದರೆ ಆ ಪ್ರಿಸಂನ್ ಕ್ಯಾಂಪ್ ನ ಜಪಾನ್ ಕರ್ನಲ್, ಬ್ರಿಟಿಷ್ ಸೈನಿಕರು ಮಾತ್ರವಲ್ಲ ಬ್ರಿಟಿಷ್ ಅಧಿಕಾರಿಗಳು ಕೂಡ ಕೂಲಿ ಕಾರ್ಮಿಕರಂತೆ ಕೆಲಸ ಮಾಡಬೇಕು ಎಂದು ಆದೇಶಿಸಿ ಬಿಡುತ್ತಾನೆ.
ಆದರೆ ಬ್ರಿಟಿಷ್ ಅಧಿಕಾರಿಗಳು ಅದಕ್ಕೆ ಒಪ್ಪುವುದಿಲ್ಲ.
ಒಂದಷ್ಟು ಘರ್ಷಣೆ ಆ ದಟ್ಟ ಕಾಡಿನ ನಡುವಿನ ಕ್ಯಾಂಪ್ ನಲ್ಲಿ ತಣ್ಣನೆ ನಡೆದು ಬಿಡುತ್ತದೆ.
ಕೆಲವರು ಅಲ್ಲಿಂದ ತಪ್ಪಿಸಿಕೊಂಡು ಹೋಗಲು ಪ್ರಯತ್ನ ಪಟ್ಟು ಕೊಲ್ಲಲ್ಪಡುತ್ತಾರೆ.ಆದರೆ ಅದರಲ್ಲಿ ಯುದ್ಧ ಖೈದಿಯಾಗಿದ್ದ ಯು.ಸ್ ನೇವಿ ಯ ಕಮಾಂಡರ್ ಒಬ್ಬ ಮಾತ್ರ ಯಶಸ್ವಿಯಾಗಿ ಅಲ್ಲಿಂದ ತಪ್ಪಿಸಿಕೊಂಡು ಹೋಗಿ ಪಕ್ಕದ ಸಿಲೋನ್ (ಈಗಿನ ಶ್ರೀಲಂಕಾ)ನ ಬ್ರಿಟಿಷ್ ಕ್ಯಾಂಪ್ ಗೆ ಸೇರಿಕೊಳ್ಳುತ್ತಾನೆ.
ಇಲ್ಲಿ ಜಪಾನ್ ಕರ್ನಲ್ ಕೊನೆಗೂ ಬ್ರಿಟಿಷ್ ಅಧಿಕಾರಿಗಳ ಮನವಿಗೆ ಒಪ್ಪಿಗೆ ನೀಡುತ್ತಾನೆ. ಏಕೆಂದರೆ ಅವನಿಗೆ ಆದಷ್ಟು ಬೇಗ ಸೇತುವೆ ಪೂರ್ಣಗೊಳಿಸುವ ಅತಿಯಾದ ಒತ್ತಡವಿರುತ್ತದೆ.
ಕೊನೆಗೂ ಸೇತುವೆ ಕೆಲಸ ಶುರುವಾಗುತ್ತದೆ.
ಆದರೆ ಬ್ರಿಟಿಷ್ ಸೈನ್ಯದಲ್ಲಿದ್ದ ಕರ್ನಲ್ ಗೆ ಜಪಾನ್ ಇಂಜಿನಿಯರಿಂಗ್ ಕೌಶಲ್ಯ ಇಷ್ಟವಾಗುವುದಿಲ್ಲ ಮತ್ತು ಅವನಿಗೆ ಆ ಸೇತುವೆಯಲ್ಲಿ ಹಲವಾರು ಲೋಪ ದೋಷಗಳು ಕಂಡು ಬರುತ್ತದೆ.ಅವನು ಜಪಾನ್ ಕರ್ನಲ್ ಗೆ ಮನವರಿಕೆ ಮಾಡಿಕೊಡುತ್ತಾನೆ,ನೋಡಿ ಈ ಸೇತುವೆ ಜಾಸ್ತಿ ದಿನ ಬಾಳಿಕೆ ಬರುವುದಿಲ್ಲ,ಇದಕ್ಕಿಂತ ಬಲಿಷ್ಟವಾದ ಹಾಗೂ ಸುಂದರವಾದ ಸೇತುವೆ ನಾವು ಮಾಡಿಕೊಡುತ್ತೇವೆ ನಮಗೆ ಸಂಪೂರ್ಣ ಅನುಮತಿ ಹಾಗೂ ಸಹಕಾರ ನೀಡಿ ಎಂದು ಅವನು ಕೇಳಿ ಕೊಳ್ಳುತ್ತಾನೆ.ಅವನ ಮಾತಿನಲ್ಲಿ ಸತ್ಯವಿರುವುದನ್ನು ಅರಿತ ಜಪಾನ್ ಕರ್ನಲ್ ಇದಕ್ಕೆ ಒಪ್ಪುತ್ತಾನೆ ಕೂಡ.
ಬ್ರಿಟಿಷ್ ಯುದ್ಧ ಕೈದಿಗಳು ಅವರದ್ದೊಂದು ಕರ್ನಲ್ ನ ಮಾರ್ಗದರ್ಶನದಲ್ಲಿ ಅದೆಂತಹ ಸುಂದರವಾದ ಸೇತುವೆ ಕಟ್ಟುತ್ತಾರೆ ಎಂದರೆ ಅವರ ಆ ಒಂದು ಕೆಲಸದಲ್ಲಿ ಅವರು ತಮ್ಮ ತನು ಮನವನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿರುತ್ತಾರೆ. ಅದಕ್ಕೂ ಮೊದಲು ಆ ಭಾಗದಲ್ಲಿ ಆ ಸಮಯದಲ್ಲಿ ಅಂತದ್ದೊಂದು ಸುಂದರವಾದ ಸೇತುವೆ ನಿರ್ಮಾಣವೇ ಆಗಿರುವುದಿಲ್ಲ.ಬ್ರಿಟಿಷ್ ಸೈನಿಕರು ಹಾಗೂ ಅವರ ಕರ್ನಲ್ ತಮ್ಮ ಕೌಶಲ್ಯಕ್ಕೆ ಹೆಮ್ಮೆ ಪಟ್ಟುಕೊಳ್ಳುತ್ತಾರೆ.ಮುಂದೊಂದು ದಿನ ಜಗತ್ತು ನಮ್ಮ ಈ ಸಾಧನೆಗೆ,ಶಾಂತಿಯ ಕೊಡುಗೆಗೆ ಕೊಂಡಾಡುತ್ತದೆ ಎಂದು ಸಂಭ್ರಮದಿಂದ ಹೇಳುತ್ತಾನೆ ಬ್ರಿಟಿಷ್ ಕರ್ನಲ್.
ಜಪಾನ್ ಕರ್ನಲ್ ಕೂಡ ತುಂಬಾ ಸಂತೋಷ ಪಡುತ್ತಾನೆ.
ಸೆಲೆಬ್ರೇಶನ್ ಒಂದು ಹಾಗೇ ಆ ರಾತ್ರಿ ನಡೆದು ಬಿಡುತ್ತದೆ.
ಆದರೆ ಇದರ ಕಥೆ ಸರಳರೇಖೆ ಅಲ್ಲ!
ಈ ಮೊದಲು ಆ ಜಪಾನ್ ಕ್ಯಾಂಪ್ ನಿಂದ ತಪ್ಪಿಸಿಕೊಂಡು ಹೇಗೋ ಸಿಲೋನ್ ನ ಬ್ರಿಟಿಷ್ ಕ್ಯಾಂಪ್ ಸೇರಿದ್ದ ಅಮೇರಿಕಾ ನೇವಿ ಕಮಾಂಡರ್ ಅನ್ನು ಬ್ರಿಟಿಷ್ ಸೈನ್ಯ,ಅಮೇರಿಕಾ ನೇವಿಯ ಒಪ್ಪಿಗೆಯನ್ನು ಪಡೆದು ಅವನನ್ನು ಈ ಕ್ವಾಯಿ ನದಿಯ ಮೇಲೆ ನಿರ್ಮಿಸಲಾದ ಹೊಸ ಸೇತುವೆಯನ್ನು ದ್ವಂಸಗೊಳಿಸುವುದಕ್ಕಾಗಿ ರಚಿಸಲಾದ ತಂಡಕ್ಕೆ ಸೇರಿಸಿ ಬಿಡುತ್ತಾರೆ.
ತಮ್ಮದೇ ಸೈನಿಕರು ಶತ್ರುವಿಗೊಂದು ಕಟ್ಟಿಕೊಟ್ಟ ಸೇತುವೆಯನ್ನು ಹೊಡೆದುರುಳಿಸಲು ಬ್ರಿಟಿಷ್ ತಂಡ ಅದರ ಉದ್ಘಾಟನೆಯ ದಿನವೇ ಹೊಂಚಿ ಹಾಕಿ ಆ ದಟ್ಟ ಕಾಡಿನ ರಾತ್ರಿ ಪೂರ ಕಾದು ಕುಳಿತು ಕೊಳ್ಳುತ್ತದೆ.
ಜಪಾನ್ ಸೈನ್ಯ ಹಾಗೂ ಬ್ರಿಟಿಷ್ ಯುದ್ಧ ಖೈದಿಗಳು ಸಹ ತಮ್ಮದೊಂದು ಕಾರ್ಯ ಪೂರ್ಣಗೊಂಡ ಸಂತಸದಲ್ಲಿ ಮುಂದಿನ ಒಳ್ಳೆಯ ದಿನಗಳ ನಿರೀಕ್ಷೆಯಲ್ಲಿಯೇ ಇರುತ್ತಾರೆ.
ಸೇತುವೆಗೆ ಏನಾಗುತ್ತದೆ?
ಶತ್ರುತ್ವದ ನಡುವೆ ಎದ್ದು ನಿಂತ ಒಂದು ಶಾಂತಿಯ ಸೇತುವೆ ಮನಸ್ಸುಗಳನ್ನು ಒಡೆದೇ ಬಿಡುತ್ತದಾ.. ?
David Lean ಇದನ್ನು ನಿರ್ದೇಶಿಸಿದ್ದು,William Holden, Alec Guinness,Jack Hawkins Sessue Hayakawa ಮೊದಲಾದವರ ಅಭಿನಯವಿದೆ. ಇದರ ಕಥೆ Pierre Boulle ಅವರ ನಾವೆಲ್ " The Bridge over the River Kwai" ಆಧಾರಿತವಾದದ್ದು.ಆದರೆ ಇದರ ಮೂಲ ಕಥೆ Carl Foreman ಹಾಗೂ Michael Wilson ಎಂಬ ಹಾಲಿವುಡ್ ನಿಂದ ಬಹಿಷ್ಕ್ರತ ರೈಟರ್ ಗಳು ಬರೆದದ್ದು ಅಂತೆ.
ನೀವು ನೋಡಲೇಬೇಕಾದ ಜಗತ್ತಿನ 50 ಕ್ಲಾಸಿಕ್ ಮೂವಿಗಳಲ್ಲಿ ಇದೂ ಒಂದು.ಇಂದಿಗೂ ಗ್ರೇಟೆಸ್ಟ್ ಫಿಲ್ಮ್ ಗಳಲ್ಲಿ ಒಂದು ಎಂದು ಗುರುತಿಸಲ್ಪಡುವ ಇದು 50 ರ ದಶಕದಲ್ಲಿ ಬಾಚಿಕೊಂಡ ಪ್ರಶಸ್ತಿಗಳಿಗೆ ಲೆಕ್ಕವೇ ಇಲ್ಲ. ಕೇವಲ ಪ್ರಶಸ್ತಿ ಬಾಚಿಕೊಂಡಿದೆ ಎಂಬುವುದಕ್ಕಾಗಿಯೇ ಇದು ಗ್ರೇಟ್ ಅಲ್ಲ, ಅದು ಹೇಳ ಹೊರಟ ಕಥೆ ಇದನ್ನು ಗ್ರೇಟ್ ಮಾಡಿದೆ.
ಇದು ಬಹಳ ಹಳೆಯ ಮೂವಿ.ಎಲ್ಲರಿಗೂ ಇಷ್ಟವಾಗಲಿಕ್ಕಿಲ್ಲ. ಆದರೆ ಒಳ್ಳೆಯ ಮೂವಿಗಳನ್ನು ಹುಡುಕಿ ಹುಡುಕಿ ನೋಡುವವರು ನೀವಾಗಿದ್ದರೆ... ಇದನ್ನು ಮಿಸ್ ಮಾಡಿಕೊಳ್ಳ ಬೇಡಿ.ಹಾಗೇ ಬಕೆಟ್ ಲಿಸ್ಟ್ ಗೆ ಸೇರಿಸಿಬಿಡಿ.
#The_Bridge_on_the_River_Kwai | Netflix
English Movie
War Film
Year - 1957
#Movies
Ab
Comments
Post a Comment