The Courier




ಸೋವಿಯತ್ ಯೂನಿಯನ್(U.S.S.R) ನಂತಹ ದೇಶದಲ್ಲಿ  ಸಾಮಾನ್ಯ ಕಳ್ಳ ಒಬ್ಬ ಪೋಲಿಸರಿಗೆ ಸಿಕ್ಕಿ ಬಿದ್ದರೆ ಅವರು ಹೇಗೆ ಅವನ ಕಷ್ಟ ಸುಖ ವಿಚಾರಿಸಿ ಕೊಳ್ಳುತ್ತಾರೋ ಗೊತ್ತಿಲ್ಲ,ಆದರೆ ಆ ದೇಶದ ನೆಲದಲ್ಲಿ ಯಾರಾದರೊಬ್ಬ ಗೂಢಚಾರ ಸಿಕ್ಕಿಬ್ಬಿದ್ದರೆ ಅದರಲ್ಲೂ ಅಮೇರಿಕಾಗೋಸ್ಕರ ಕೆಲಸ ಮಾಡುವಂತಹ ಗೂಢಚಾರ ಅಲ್ಲಿಯ KGB ಯ ಕೈಗೆ  ಸಿಕ್ಕಿಬಿದ್ದರೆ...ಆವಾಗ  ಮಾತ್ರ ಅವನದ್ದು ಅಕ್ಷರಶಃ ನರಕದ ಬಾಗಿಲು ತಟ್ಟಿದ ಸ್ಥಿತಿ! 


60 ರ ದಶಕದಲ್ಲಿ ಅಮೆರಿಕಾ ಹಾಗೂ ಸೋವಿಯತ್ ಒಕ್ಕೂಟದ ನಡುವೆ ನಡೆಯುತ್ತಿದ್ದ ಮುಸುಕಿನ ಶೀತಲ ಸಮರದ ಸಂಧರ್ಭದಲ್ಲಿ,ಅಮೇರಿಕಾದ ಇಂಟೆಲಿಜೆನ್ಸ್ ಏಜೆನ್ಸಿ CIA ಯ ಮನವಿಯ ಮೇರೆಗೆ ಬ್ರಿಟಿಷ್ ಇಂಟೆಲಿಜೆನ್ಸ್ ಏಜೆನ್ಸಿ M16 ಗಾಗಿ ಸಾಮಾನ್ಯ ಬ್ರಿಟಿಷ್ ಬ್ಯುಸಿನೆಸ್ ಮ್ಯಾನ್ ಒಬ್ಬ ಸಹಾಯ ಮಾಡಲು ಮುಂದಾಗುವುದೇ ಇದರ ಕಥೆ.


ಆದರೆ ಸಹಾಯ ಸಾಮಾನ್ಯವಾದದ್ದು ಅಲ್ಲ.ರಷ್ಯಾದ ಸೆಕ್ಯುರಿಟಿ ಏಜೆನ್ಸಿ KGB ಕಣ್ಣು ತಪ್ಪಿಸಿ ಅಲ್ಲಿಯ ನೆಲದ ಟಾಪ್ ಸಿಕ್ರೇಟ್ ಅನ್ನು ಅಲ್ಲಿಂದ ಅಮೇರಿಕಾ ಏಜೆನ್ಸಿಗೆ ಕೊರಿಯರ್ ಮಾಡುವುದು!!


ಈ ಕೆಲಸದಲ್ಲಿ ಯಶಸ್ವಿಯಾದರೆ ಅದೊಂದು ದೊಡ್ಡ ಸಾಹಸದ ಕಥೆ..ಅದೇ ಸಿಕ್ಕಿ ಬಿದ್ದರೆ ಆವಾಗ ಮಾತ್ರ ಅದು ಬೇರೆಯದ್ದೇ ಇನ್ನೊಂದು ಕಥೆ! ಆ ಕಥೆಗಾಗಿ ಈ ಮೂವಿಯನ್ನೇ ನೋಡಬೇಕು ನೀವು.



Cuban Missile Crisis ಹಾಗೂ ನ್ಯೂಕ್ಲಿಯರ್ ವಾರ್ ಗೆ ಸಂಬಂಧಿಸಿದಂತೆ 196 0-62 ರಲ್ಲಿ ಅಮೇರಿಕಾ ಹಾಗೂ ಸೋವಿಯತ್ ಒಕ್ಕೂಟದ ಕೋಲ್ಡ್ ವಾರ್ ಒಂದು ಹಾಗೇ ಮೆಲ್ಲಗೆ ತಾಪಮಾನ ಹೆಚ್ಚಿಸಿಕೊಂಡು ಹೋಗುವ ಸಂದರ್ಭದಲ್ಲಿ ನಡೆದ ನಿಜ ಘಟನೆಗಳನ್ನೇ ಆಧಾರಿಸಿ ಈ ಮೂವಿಯ ಕಥೆಯನ್ನು ಮಾಡಿದ್ದಾರೆ.


ಕಥೆಗೆ ತಕ್ಕಂತೆ ತುಂಬಾ ಸ್ಲೋ ಇರುವುದರಿಂದ ತಕ್ಕ ಮಟ್ಟಿಗೆ ಬೋರ್ ಅನಿಸಬಹುದು.ಕೊನೆಯವರೆಗೆ ನೋಡುವ ತಾಳ್ಮೆ ಇದ್ದರೆ ಈ ಕಥೆಯೂ ಚೆನ್ನಾಗಿಯೇ ಇದೆ.Dominic Cooke ನಿರ್ದೇಶನದ ಈ ಮೂವಿಯಲ್ಲಿ Benedict Cumberbatch ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. 


#The_Courier | Prime 

English Movie 

Historical Spy/Thriller 

Release - 2020


#Movies

Ab

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ