Bell Bottom

 #Bell_Bottom | Prime





ಇದು ನಿಜ ಘಟನೆ ಆಧಾರಿತ ಮೂವಿ.


1984 ಆಗಸ್ಟ್ 24 ರಂದು ದೆಹಲಿ ವಿಮಾನ ನಿಲ್ದಾಣದಿಂದ ಅತೀ  ಉಲ್ಲಾಸದಿಂದ ಗಗನಕ್ಕೆ ಹಾರಿದ ಭಾರತದ 'ಇಂಡಿಯನ್ ಏರ್ ಲೈನ್ಸ್ IC 691'ವಿಮಾನವೊಂದು ಖಲಿಸ್ತಾನಿ ಪ್ರತ್ಯೇಕವಾದಿಗಳಿಂದ ಹೈಜಾಕ್ ಆಗಿ,ದುಬೈ ವಿಮಾನ ನಿಲ್ದಾಣದಲ್ಲಿ ಇನ್ನಿಲ್ಲದಂತೆ ಚಡಪಡಿಸಿಕೊಂಡು ನಿಂತು ಬಿಡುತ್ತದೆ.


ಅದು ಆಗಿನ ಪ್ರಧಾನಮಂತ್ರಿ ಇಂದಿರಾ ಗಾಂಧಿಯ ಆಡಳಿತಾವಧಿಯಾಗಿತ್ತು ಮತ್ತು ಅದಕ್ಕೂ ಹಿಂದಿನ 7 ವರ್ಷಗಳಲ್ಲಿ ಸರಿಯಾಗಿ ಲೆಕ್ಕ ಹಾಕಿದರೆ ಅದು ಭಾರತದ 5ನೇ ವಿಮಾನ ಹೈಜಾಕ್ ಆಗಿತ್ತು! 


ಪ್ರತೀ ಬಾರಿಯೂ ವಿಮಾನ ಹೈಜಾಕ್ ಆದಾಗ ಭಾರತ ಸರ್ಕಾರ ಒತ್ತೆಯಾಳುಗಳ ಬಿಡುಗಡೆಗಾಗಿ ಸೆರೆಯಲ್ಲಿದ್ದ ಡೇಂಜರಸ್ ಹಾಗೂ ಮೋಸ್ಟ್ ವಾಂಟೆಡ್ ಉಗ್ರರನ್ನು ಬಿಡುಗಡೆ ಮಾಡುತ್ತಿತ್ತು  ಮತ್ತು ಕೋಟಿಗಟ್ಟಲೆ ಹಣವನ್ನು ಚೀಲದಲ್ಲಿ ತುಂಬಿಸಿ ಅಪಹರಣಕಾರರಿಗೆ ಹಸ್ತಾಂತರಿಸಿ ಬಿಡುತ್ತಿತ್ತು. 


ಆದರೆ ಈ ಬಾರಿ RAW(Research and Analysis Wing) ಅಪಹರಣಕ್ಕೊಳಗಾದ ಎಲ್ಲಾ 210 ಪ್ರಯಾಣಿಕರನ್ನು ಸುರಕ್ಷಿತವಾಗಿ ಹಿಂದೆ ತರುವುದು ಮಾತ್ರವಲ್ಲ,ಅಪಹರಣ ಮಾಡಿದ ಆ ಉಗ್ರರನ್ನು ಸಹ ಸೆರೆ ಹಿಡಿದು ತರಲು ಮುಂದಾಗುತ್ತದೆ.ಅದಕ್ಕೆ ನಿಯೋಜಿತನಾಗುವ Raw ಏಜೆಂಟೇ ಈ Bell Bottom. ಹೌದು ಈ ಆಪರೇಷನ್ ನಲ್ಲಿಅದು  ಅವನದ್ದೊಂದು ಕೋಡ್ ನೇಮ್. 


ಆಪರೇಷನ್ ನಲ್ಲಿ ಮುಂದೆ ಏನಾಗುತ್ತದೆ?


ಇದೇ ರೀತಿ ವಿಮಾನ ಹೈಜಾಕ್  ಆಗಿದ್ದಾಗ 1976 ರಲ್ಲಿ ಇಸ್ರೇಲ್ ಡಿಫೆನ್ಸ್ ಪೋರ್ಸ್(IDF) ಉಗಾಂಡದಲ್ಲಿ ನಡೆಸಿದಂತಹ ಯಶಸ್ವಿ "ಅಪರೇಷನ್ ಎಂಟೆಬ್ಬೆ" ಯಂತಹ ಅಪರೇಷನ್ ಅನ್ನು,ಈ ಬಾರಿ ನಮ್ಮ ಭಾರತೀಯ ಏಜೆಂಟ್ ಗಳು ಸಹ ಜಗತ್ತಿನೆದುರು ಮಾಡಿ ತೋರಿಸುತ್ತಾರಾ?


ಎಲ್ಲಕ್ಕಿಂತ ಹೆಚ್ಚಾಗಿ ವಿದೇಶಿ ನೆಲದಲ್ಲಿ ನಮ್ಮವರು ಯಶಸ್ವಿಯಾಗುತ್ತಾರಾ..?? 


ನಿಜಕ್ಕೂ ಇದು ಎಲ್ಲರೂ ನೋಡಬೇಕಾದ ಮೂವಿ ಖಂಡಿತಾ ಹೌದು.ಹೆಚ್ಚಿನವರಿಗೆ ಗೊತ್ತಿಲ್ಲದ ನಮ್ಮ ದೇಶದ ಸಾಹಸಿ ಏಜೆಂಟ್ ಗಳ ಒಂದು ವೀರಗಾಥೆ ಇಲ್ಲಿದೆ.ಇಂತಹ ಮೂವಿ ಇನ್ನಷ್ಟು ಬರಲಿ.ಏಕೆಂದರೆ ನಮ್ಮವರ ಬಗ್ಗೆ ನಾವುಗಳು ಹೆಮ್ಮೆ ಪಡುವಂತಹ ಮೂವಿಗಳು ಈ ದೇಶದಲ್ಲಿ ನಿರಂತರವಾಗಿ ಬರುತ್ತಲೇ ಇರಬೇಕು. 


ಆದರೆ ವೈಯಕ್ತಿಕವಾಗಿ ನನಗೆ ಈ ಮೂವಿಯನ್ನು ನರೇಟ್ ಮಾಡಿದ ರೀತಿ ಅಷ್ಟೇನು ಸುಖಿಸಲಿಲ್ಲ. ಏಕೆಂದರೆ ಅಕ್ಷಯ್ ಕುಮಾರ್ ನ  ಇಂತಹ ದೇಶ ಪ್ರೇಮದ ಈ ಹಿಂದಿನ ಮೂವಿಗಳು ಬಹಳಷ್ಟು ಇಷ್ಟವಾಗಿದ್ದವು ಮತ್ತು ತುಂಬಾನೇ ಕಾಡಿದ್ದವು ಮಾತ್ರವಲ್ಲ ಇಂತಹ ಮೂವಿ ಮಾಡುವುದರಲ್ಲಿ ಆತ ಸದಾ ಎತ್ತಿದ ಕೈ.ಆದರೆ ಯಾಕೋ ಇಲ್ಲಿ ಅಕ್ಷಯ್ ಅಷ್ಟೊಂದು ಹಿಡಿಸಲಿಲ್ಲ.ಬಹುಶಃ ಕಥೆಯೇ ಆ ರೀತಿ ಇರುವುದರಿಂದಲೋ ಏನೋ.ಕೆಲವೊಂದು ಕಡೆ ಮೂವಿ ಅಗತ್ಯಕ್ಕಿಂತ ನಿಧಾನ ಅನಿಸಿತು.ಒಟ್ಟಿನಲ್ಲಿ ಇಂತಹದ್ದೊಂದು ಅಧ್ಭುತ ಕಥೆಯನ್ನು ಇನ್ನಷ್ಟು ಸೊಗಸಾಗಿ ಮಾಡಬಹುದಿತ್ತು ಎಂದು ನನ್ನ ಅನಿಸಿಕೆ ಅಷ್ಟೇ.ಆದರೆ ಖಂಡಿತವಾಗಿಯೂ ಎಲ್ಲರಿಗೂ ಹಾಗೆ ಅನಿಸಬೇಕಾಗಿಲ್ಲ.


Ranjit M Tewari ಇದನ್ನು ನಿರ್ದೇಶಿಸಿದ್ದು,Akshay Kumar, Lara Dutta, Vaani Kapoor, Huma Qureshi ಮುಂತಾದವರ ಅಭಿನಯವಿದೆ. 


ಸೈನಿಕರನ್ನು ಆದರೂ ಯಾವುದೇ ದೇಶ ಎಂದೆಂದಿಗೂ ಕೊಂಡಾಡುತ್ತದೆ,ಹಾಡಿ ಹೊಗಳುತ್ತದೆ.ಆದರೆ ಆ ಭಾಗ್ಯ ಒಬ್ಬ ಗುಪ್ತಚರನಿಗೆ ಯಾವತ್ತೂ ಇರುವುದೇ ಇಲ್ಲ.ಅವನಿಗೆ ಯಾವುದೇ ಪ್ರಶಸ್ತಿ ಸಹ  ಕೊಟ್ಟು ಸಹ ಸಾರ್ವಜನಿಕವಾಗಿ ಗೌರವಿಸಲಾಗುವುದಿಲ್ಲ.ಅಷ್ಟೇ ಏಕೆ ಅವನು ತೆರೆಮರೆಯಲ್ಲಿ ಈ ದೇಶಕ್ಕಾಗಿ ಕೆಲಸ ಮಾಡಿ ಕೊನೆಗೆ ತೆರೆಮರೆಯಲ್ಲಿಯೇ ಮಣ್ಣಾಗಿ ಹೋದರೂ ಈ ದೇಶಕ್ಕೆ ಅವನೊಬ್ಬ ಯಾರೆಂದೇ ಗೊತ್ತಿರುವುದಿಲ್ಲ,ಹೆಂಡತಿ ಮಕ್ಕಳಿಗೂ ಕೂಡ ತಮ್ಮ ಅಪ್ಪ ಇಲ್ಲವೇ ಗಂಡ  ಒಬ್ಬ ಏಜೆಂಟ್ ಎಂದು ಎಂದಿಗೂ ಗೊತ್ತಿರುವುದಿಲ್ಲ.ದೇಶ ಕೂಡ ಅವನು ತಮ್ಮ ಏಜೆಂಟ್ ಎಂದು ಎಲ್ಲಿಯೂ ಒಪ್ಪಿಕೊಳ್ಳುವುದಿಲ್ಲ! ಸ್ವತಃ ಅವನೂ ಕೂಡ ಒಮ್ಮೆಯೂ ಹೇಳಿಕೊಳ್ಳುವುದಿಲ್ಲ! 


ಆದರೂ RAW  ಹೆಮ್ಮೆಯಿಂದ ಈ ರೀತಿ ಹೇಳಿಕೊಳ್ಳುತ್ತದೆ.. ತನ್ನ ಒಬ್ಬ ಏಜೆಂಟನ ನಿಜವಾದ ಸಾಧನೆ ಏನೆಂದರೆ.. ಕೊನೆಯಲ್ಲಿ ಆತ ಸತ್ತು ಹೋಗುವವರೆಗೂ ಆತ ಯಾರೆಂದು ಜಗತ್ತಿಗೆ ಎಂದಿಗೂ ಗೊತ್ತಾಗದೇ ಉಳಿದು ಹೋಗಿ ಬಿಟ್ಟರೆ... ಅದಕ್ಕಿಂತ ದೊಡ್ಡ ಸಾಧನೆಯೇ ಇನ್ನೊಂದಿಲ್ಲ ಎಂದು ತಣ್ಣನೆ ಹೇಳುತ್ತದೆ RAW. 


ನೀವೂ ನೋಡಿ Bell Bottom.ಎಂದಿಗೂ ಪ್ರಚಾರ ಪಡೆಯದ ನಮ್ಮ ಏಜೆಂಟರ ಸಾಧನೆಗೆ, ತ್ಯಾಗಕ್ಕೆ ಒಂದು ಮೆಚ್ಚುಗೆ ಹೃದಯದಿಂದಲೇ ಇರಲಿ. 


#Bell_Bottom | Prime 

Hindi Movie 

Action Thriller 

Release -2021


#Movies 

Ab

Comments

Popular posts from this blog

ಗಗನದ ಸೂರ್ಯ

ಬಿಡುಗಡೆ!

ಭಕ್ತಿಯ ಜೊತೆಗೆ ಭಯವೂ ಇರಲಿ..