ಮಿಳ್ಳೆ ತುಪ್ಪ..
ಸಂಪ್ರದಾಯದಂತೆಯೇ ಎಲೆ ಊಟ.
ಎಂದಿನಂತೆ ಬಡಿಸಲು ನಿಂತಿದ್ದೆ.
ಅನುಭವದ ಹುಡುಗರು,ಉತ್ಸಾಹಿ ಪಿಟ್ಟೆಗಳು ಕೂಡ ಇದ್ದರು.
ಲೋಟಗಳಿಗೆ ಶ್ರದ್ಧೆಯಿಂದ ನೀರು ತುಂಬುವ ಜವಾಬ್ದಾರಿ ನನ್ನದು.
ಬೇರೆ ಎಲ್ಲಾ ದೊಡ್ಡ ದೊಡ್ಡ ಶ್ರೇಷ್ಠವಾದ ಐಟಂ ಗಳು ಇತ್ತು. ಆದರೆ ಸ ನೀರು ಕೊಡುವುದು ಸ ಒಂದು ಶ್ರೇಷ್ಠವಾದ ಕೆಲಸವೇ ಎಂದುಕೊಂಡು ನೀರಿನ ಚೊಂಬಿನೊಂದಿಗೆ ಊಟದ ಪಂಕ್ತಿಗೆ ಹಾಗೇ ನುಗ್ಗಿದೆ ನಾನು.
ಬಗ್ಗಿ ಬಗ್ಗಿ ಲೋಟಗಳಿಗೆ ನೀರು ಹಾಕುವ ಆ ಒಂದು ನನ್ನ ಪ್ರಕ್ರಿಯೆ ತುಂಬಾ ಅಂದರೆ ತುಂಬಾನೇ ವಿಳಂಬವಾದ ಕಾರಣ...ನಾನು ನೀರು ಕೊಟ್ಟು ಮುಗಿಸುವ ವೇಳೆಗೆ ಹೆಚ್ಚಿನ ಎಲ್ಲಾ ಐಟಂಗ ಗಳು ಬಾಲೆಳೆಯನ್ನು ಅಲಂಕರಿಸಿಬಿಟ್ಟಿದ್ದವು.
ಆದರೂ ಸುಮ್ಮನೆ ಹೇಳಿದೆ... ಶೇ ಎಂತ ಮರ್ರೆ.. ನನಗೆ ಬಡಿಸಲು ಯಾವುದು ಸ ಐಟಂ ಉಳಿಯಲೇ ಇಲ್ಲ..
ಆದರೆ ಬಿಸಿ ಅನ್ನದ ಮೇಲೆ ಮಿಳ್ಳೆ ತುಪ್ಪ ಎರೆಯುವ ದಿವ್ಯ ಕೆಲಸವೊಂದು ಇನ್ನೂ ಬಾಕಿ ಉಳಿದಿತ್ತು.
ಹಿರಿಯರು ಒಬ್ಬರು ತುಪ್ಪದ ಬಟ್ಟಲು ಕೈಗಿತ್ತು..ನನಗೆ ತುಪ್ಪ ಹಾಕಿಕೊಂಡು ಬರಲು ಹೇಳಿದರು.
ಅಭ್ಯಾಸ ಬಲದಿಂದ ತುಪ್ಪವನ್ನು ಬಗ್ಗಿಕೊಂಡೇ ಹಾಕಿದೆ.
ಆಗಲೇ ಸಭೆಯಲ್ಲಿ ಹಾಹಾಕಾರ ಎದ್ದಿದ್ದು...ಹೇಯ್ ಯಾರು ಮರ್ರೆ ಇವ.. ತುಪ್ಪವನ್ನು ಯಾರಾದರೂ ಬಗ್ಗಿಕೊಂಡು ಹಾಕುತ್ತಾರಾ... ಹಹ್ಹಾ.. ಹಹ್ಹಾ..ಅಷ್ಟೇ.. ಎಂದೆಲ್ಲಾ ಹೇಳಿದರು.
ನನಗೆ ಚಿಕ್ಕಂದಿನಿಂದಲೂ ಈ ತುಪ್ಪವನ್ನು ಬಗ್ಗಿ ಹಾಕಿದರೆ ಏನಾಗುತ್ತದೆ.. ಏಕೆ ನಿಂತೇ ಹಾಕಬೇಕು.. ಎಂಬ ಜಿಜ್ಞಾಸೆ ಇತ್ತಾದರೂ,ನಂತರ ದಿನಗಳಲ್ಲಿ ತುಪ್ಪ ಬಡಿಸುವ,ಮಿಳ್ಳೆಯಷ್ಟೇ ಸುರಿಸುವ ಆ ಒಂದು ಕೆಲಸಕ್ಕೆ ಜಾಸ್ತಿ ಕೈ ಹಾಕದೇ ಇದ್ದುದರಿಂದ.. ಆ ಪ್ರಶ್ನೆಯೊಂದು ಹಾಗೇ ನನ್ನಲ್ಲಿ ಮೂಲೆಗುಂಪಾಗಿ ಹೋಗಿತ್ತು.
ಆದರೆ ಊಟವೆಲ್ಲಾ ಆದ ಮೇಲೆ ಹಿರಿಯರೊಬ್ಬರಲ್ಲಿಯೇ ಕೇಳಿದೆ... ತುಪ್ಪವನ್ನು ಬಗ್ಗಿ ಬಡಿಸಿದರೆ ಏನಾಗುತ್ತದೆ.. ಹೇಳಿ?
ಅದಕ್ಕೆ ಅವರು ಹೇಳಿದರು..
" ತುಪ್ಪವನ್ನು ಬಗ್ಗಿ ಬಡಿಸಿದರೆ ನೀನು ಜೀವನ ಪೂರ್ತಿ ಬಗ್ಗಿಯೇ ಇರುತ್ತೀಯಾ..ಹಹ್ಹಾ ಹಹ್ಹಾ ."
ಅದಕ್ಕೆ ನಾನು ಹೇಳಿದೆ.. "ಒಳ್ಳೆಯದೇ ಆಯ್ತಲ್ಲಾ... ಜೀವನದಲ್ಲಿ ತಗ್ಗಿ ಬಗ್ಗಿ ನಡೆಯುವ ಸುಸಂಸ್ಕೃತ ಒಳ್ಳೆಯ ವ್ಯಕ್ತಿಯೇ ನಾನಾಗುತ್ತೇನೆ ಅಲ್ವಾ.." ಅಂದೆ
ಅದಕ್ಕೆ ಇನ್ನೊಬ್ಬರು ಹೇಳಿದರು.. " ಅಣ್ಣಾ.... ಆ ತರಹ ತಗ್ಗಿ ಬಗ್ಗಿ ಅಲ್ಲ... ಜೀವನದಲ್ಲಿ ನೀನು ಮೇಲೇಳುವುದೇ ಇಲ್ಲ,ಜೀವನದಲ್ಲಿ ಮುಂದೆಯೇ ಬರುವುದಿಲ್ಲ,ಬಂದರೂ ಬೇರೆಯವರು ಬೆನ್ನಿಗೆ ಗುದ್ದಿ ಗುದ್ದಿ ನೀನು ಬಗ್ಗಿಯೇ ಇರುವಂತೆ ಮಾಡುತ್ತಾರೆ...!"
ನನಗೆ ಸ್ಪೈನಲ್ ಕಾರ್ಡ್ ಅತೀ ಮುಖ್ಯ ಹಾಗಾಗಿ ಇನ್ನು ಮುಂದೆ ಆದರೂ ನಾನು ಸರಿಯಾಗಿ ನಿಂತುಕೊಂಡೇ ತುಪ್ಪ ಸುರಿಯುತ್ತೇನೆ.ನಮ್ಮ ನಂಬಿಕೆಯೂ ಉಳಿಯುತ್ತದೆ,ಅದೇ ರೀತಿ ನನ್ನ ಬೆನ್ನು ಕೂಡ...
#ವಿಷಯ_ಎಂತ_ಗೊತ್ತುಂಟಾ
ab
Comments
Post a Comment