ಹಾರುವ ತಾರಿಮಡಲೆ
ಕ್ರಿಕೆಟ್ ಆಟವಾಡುತ್ತಿರುವಾಗ ಅಶ್ವತ್ಥ ಕಟ್ಟೆಯ ಮೇಲೆ ಕುಳಿತಿದ್ದ ಒಬ್ಬರ ಮೇಲೆ ಹಾವೊಂದು ಮರದ ಮೇಲಿಂದ ಹಾರಿ,ಆ ನಂತರ ಅಲ್ಲೇ ಇದ್ದ ಪೊದೆಯಲ್ಲಿ ಮರೆಯಾಗಿ ಹೋಯಿತು.
ಆಗ ಒಬ್ಬರು ಹೇಳಿದರು.. " ಬಚಾವ್ ಮರ್ರೆ,ಅದು ತಾರಿಮಡಲೆ ಹಾವು.ಪುಣ್ಯಕ್ಕೆ ಭುಜಕ್ಕೆ ಹಾರಿತು,ಇಲ್ಲದಿದ್ದರೆ ನೀನು ಇಷ್ಟು ಹೊತ್ತಿಗೆ ಅಷ್ಟೇ..."
ಹಿರಿಯರು ಒಬ್ಬರು ಹೇಳಿದರು " ಆದು ತಾರಿಮಡಲ ಹಾವು ಅಲ್ಲ.. ಒಂದು ವೇಳೆ ಅದು ತಾರಿಮಡಲ ಹಾವು ಆಗಿದ್ದರೆ ನೇರವಾಗಿ ನೆತ್ತಿಗೆ ಗುರಿ ಇಟ್ಟೇ ಹಾರಿ ಕಚ್ಚುತ್ತಿತ್ತು..."
ಅದಕ್ಕೆ ಮತ್ತೊಬ್ಬರು ಕ್ಲಬ್ ಹೌಸ್ ನಲ್ಲಿ ಮಾತನಾಡುವಂತೆ ಹೇಳಿದು.." ಹೌದು ನಾನು ಇದಕ್ಕೆ ಒಂದು ಪಾಯಿಂಟ್ Add ಮಾಡ್ತೆನೆ, ನನ್ನದು ಸ ಇದೇ ಅಭಿಪ್ರಾಯ ಆಗಿದೆ,ತಾರಿಮಡಲೆ ಯಾವತ್ತೂ ಗುರಿ ತಪ್ಪಲ್ಲ,ಇದು ಗುರಿ ತಪ್ಪಿದೆ, ಹಾಗಾಗಿ ಇದು ತಾರಿಮಡಲೆ ಹಾವು ಅಲ್ಲ ಅಂತ ನಾವು ಒಂದು ನಿರ್ಧಾರಕ್ಕೆ ಬರಬಹುದು.. "
ಇನ್ನೊಬ್ಬರು ಹೇಳಿದರು..." ಯಾಕೆ ಮರ್ರೆ ಅಷ್ಟೊಂದು ಟೆನ್ಶನ್, ತಾರಿಮಡಲೆ ಕೇವಲ ತಾರಿ(ತಾಳೆ) ಮರದಲ್ಲಿ ಮಾತ್ರ ಇರ್ತದೆ.. ಹಾಗಾಗಿ ಅದು ತಾರಿಮಡಲೆಯೇ ಅಲ್ಲ.."
ಆದರೆ ಒಬ್ಬ ಪುಟ್ಟ ಬಾಲಕ ಆ ಹಿರಿಯರಿಗೆ ಹೇಳಿದ "ಅಂಕಲ್... ಈ ತಾರಿಮಡಲೆ ಹಾವಿಗೆ ಬೋರ್ ಆದ್ರೆ ಆಗ ಅದು ಬೇರೆ ಮರಗಳಿಗೆ ಎಲ್ಲಾ ಹಾರುತ್ತಾ ಹಾರುತ್ತಾ ಹೋಗಲ್ವಾ...? "
ನನಗೆ ಯಾಕೋ ಈಗ ಈ ಬಾಲಕನ ಮಾತಿನಲ್ಲಿಯೇ ಜಾಸ್ತಿ ಲಾಜಿಕ್ ಇರುವ ಹಾಗೆ ಕಾಣಿಸ್ತಾ ಇದೆಯಲ್ಲಾ... 🙄🤔
ab
Comments
Post a Comment