ಕ್ಯಾಂಡಿಡ್ ಪೋಟೋ




ಟಾಮಿ - ಹೇಯ್ ಟೈಗರ್.. ಇವನು ಯಾರ ಉತ್ಸಾಹಿ ಬಾಲಕ? ಆಗದಿಂದ ನಮ್ಮದೇ ಪಟ ಬೇರೆ ಬೇರೆ Angle ನಿಂದ ತೆಗಿತಾನೇ  ಇದ್ದಾನೆ ಮಾರ್ರೆ,ಇವನಿಗೆ ಪೋಟೋ ತೆಗಿಲಿಕ್ಕೆ ಬೇರೆ ಎಂತಸ ಸಿಗ್ಲಿಲ್ವಾ.. 🙄🤔


ಟೈಗರ್ - ಅವನು ಬಾಲಕ ಅಲ್ಲ..ಅವನು  ಪೋಂಕ್ರ(ಉತ್ತಮನು)ಆಗಿರುವನು. 


ಟಾಮಿ - ಈಗ ಎಂತ ಮಾಡುವುದಾ..ಅವನಿಗೆ ಹೆದರಿಸಿ ಬೆದರಿಸಿ ಓಡಿಸುವನಾ..?


ಟೈಗರ್ - ಬೇಡ..ನಾವು ಅಮಾಯಕರಂತೆ ಬೇರೆ ಎಲ್ಲೋ ಬೇಕಂತಲೇ ನೋಡಿಕೊಂಡು ಅವನಿಗೆ ಕ್ಯಾಂಡಿಡ್ ಪೋಸ್ ಕೊಡುವ.


ಟಾಮಿ - ಹಾಗೆ ಹೇಳ್ತಿಯಾ..


ಟೈಗರ್ - ಮತ್ತೆ ಎಂತದಾ ಟಾಮಿ.. ನಮ್ಮದೆಲ್ಲಾ ಯಾರು ಪೋಟೋ ತೆಗೀತಾರ.. ಈ ಮರ್ಲನಿಗೆ (ಅತೀ ಉತ್ತಮನು) ಮಾಡ್ಲಿಕ್ಕೆ ಬೇರೆ ಕೆಲಸ ಇಲ್ಲ ಅಂತ... ಎಂಜಾಯ್.. ಎಂಜಾಯ್ 


ಟಾಮಿ - ಮತ್ತೆ ನನ್ನ ಹೇರ್‌ಸ್ಟೈಲ್ ಓಕೆಯಾ...ಸ್ಟ್ರೈಟ್ ಉಂಟಲ್ಲಾ? 


ಟೈಗರ್ - ನನ್ನ ಮ..ಗ..ನೇ  ಮೊದಲು ಕಿವಿ ಸ್ಟ್ರೈಟ್ ಮಾಡಿ ಬೇರೆ ಕಡೆ ನೋಡು.. ಇಲ್ಲದಿದ್ದರೆ ಅದು ಕ್ಯಾಂಡಿಡ್ ಪೋಟೋ ಆಗಲ್ಲ. 


ಟಾಮಿ - ಒಹ್.. ಹಾಗೇ ಅಲ.. ಅದೊಂದು ಮಿಸ್ಟೇಕ್ ಆಯ್ತಾ ಸಾವ್. 


ಟೈಗರ್ -  ಟಾಮಿ ನಿನ್ನದೊಂದು ಯಾವಾಗಲೂ ಮಿಸ್ಟೆಕೇ ಆಯ್ತಾ..ಪೋಟೋಗೆಲ್ಲಾ ಪೋಸ್ ಕೊಡ್ಲಿಕ್ಕೆ ಸ ಬರಲ್ಲವಾ ನಿನಗೆ..ಸತ್ಯ ಹೇಳು ಇದು ಫಸ್ಟ್ ಟೈಮಾ..?


ಟಾಮಿ - ಎಂತಾ..? 


ಟೈಗರ್ - ಅದೇ ನಿನ್ನದು ಯಾರಾದರೂ ಪೋಟೋ ತೆಗೆಯುವುದು ಇದೇ ಫಸ್ಟಾ..


ಟಾಮಿ - ಹೌದು.. ಮತ್ತೆ ನಿಂಗೆ  ಎಂತ ಇದೆಲ್ಲಾ Already ಅನುಭವ ಉಂಟಾ..? 


ಟೈಗರ್ - ಇವನೇ ಮಾರ್ರೆ... ಮೊನ್ನೆ ಕೂಡ ತೆಗ್ದಿದ್ದ...ಮಧ್ಯಾಹ್ನ ಊಟ ಮಾಡಿ ಒಂದು ಸರಿಯಾಗಿ ನಿದ್ದೆ ಸ ಮಾಡ್ಲಿಕ್ಕೆ ಬಿಡ್ಲಿಲ್ಲ.. ಎಂತ ಚೊರೆಯಾ ಸಾವ್ ಇವನದ್ದು..ಬೇಗ ಪೋಟೋ ತೆಗ್ದು ಮುಗಿಯುವುದು ಸ ಇಲ್ಲ..ಒಂದು ರಾಶಿ ಪೋಟೋ ತೆಗಿತಾನೇ ಇದ್ದ. 


ಟಾಮಿ - ಅವನ ಶರ್ಟು ಪ್ಯಾಂಟ್ ಎಲ್ಲಾ ಕಚ್ಚಿ ಕಚ್ಚಿ ಹರಿದು ಹಾಕಿ ಓಡಿಸ್ಬೇಕಿತ್ತು.. ಮೋತಿ,ಮಂಜ,ಕೂರೆ,ಪಿಂಕಿ,ಡೆಡ್ಲಿ, ಜಂಗ್ಲಿ ಎಲ್ಲಾ ಇರ್ಲಿಲ್ವಾ? 


ಟೈಗರ್ - ಓ ಮರ್ಲಾ..ನಮ್ಮದು ಅವತ್ತು ಗ್ರೂಫ್ ಪೋಟೋ ಸೆಷನ್ ಇದ್ದದ್ದಾ..ನಿನಗೆ ಯಾವಾಗ ನೋಡಿದರೂ ಪೆಟ್ಟ್ ಲಡಾಯಿ ಒಂದೇ ಇರುವುದು ಅಲಾ...ಸತ್ಯ ಹೇಳ್ತೇನೆ ನೀನು ಲೈಫಿನಲ್ಲಿ ಸುದಾರುದಿಲ್ಲವ ಟಾಮಿ...


ಟಾಮಿ - 🙄🤔


ಟೈಗರ್ - 🤷‍♂️


ನಾನು - 📸📸


ab

Comments

Popular posts from this blog

ಗಗನದ ಸೂರ್ಯ

ಬಿಡುಗಡೆ!

ಭಕ್ತಿಯ ಜೊತೆಗೆ ಭಯವೂ ಇರಲಿ..