ಜ್ವರ ಬಂದಿಲ್ಲ




ನಮ್ಮೂರಲ್ಲಿ ಒಬ್ಬರು ಇತ್ತೀಚೆಗೆ ಕೋವಿಡ್ ಲಸಿಕೆ ತಗೊಂಡ್ರು.ಬೆಸ್ಟ್ ಜನ ಆಯ್ತ ಅವರು.

ಲಸಿಕೆ ತಗೊಂಡ ನಂತರ ಎಲ್ಲರಿಗೂ ಕೊಡುವಂತೆ ಅವರಿಗೂ ಜ್ವರ ಏನಾದರೂ ಬಂದ್ರೆ ತಗೊಳ್ಳಿ ಅಂತ ಮಾತ್ರೆ ಕೂಡ ಕೊಟ್ಟು ಕಳುಹಿಸಿದ್ದರು.

ಆದರೆ ಅವರ ಸದ್ಯದ ಅತೀ ದೊಡ್ಡ ಟೆನ್ಶನ್ ಏನೆಂದರೆ... ಅವರಿಗೆ ಜ್ವರವೇ  ಬಂದಿಲ್ಲದೇ ಇರುವುದು!

ಸಿಕ್ಕ ಸಿಕ್ಕವರಲ್ಲಿ ಅದನ್ನೇ ಹೇಳಿ ಚಿಂತೆ ಹೆಚ್ಚಿಸಿಕೊಳ್ಳುತ್ತಿದ್ದಾರೆ.

ನಾನೂ ಅವರಿಗೆ ಒಂದಷ್ಟು ಸಮಾಧಾನ ಹೇಳಿದೆ,ನೋಡಿ ಇವರೇ,ಎಲ್ಲರಿಗೂ ಜ್ವರ ಬರುವುದಿಲ್ಲ,ಒಂದು ವೇಳೆ ಜ್ವರ ಏನಾದರೂ ಬಂದರೆ ತಗೊಳ್ಳಿ ಅಂತ ಮಾತ್ರೆ ಕೊಡ್ತಾರೆಯೇ ವಿನಹ ಜ್ವರ ಬರಲೇ ಬೇಕು ಅಂತ ಏನಿಲ್ಲ ಎಂದು ಹೇಳಿದೆ.

ಆದರೂ ಅವರಿಗೆ ಸಮಾಧಾನವಿಲ್ಲ.ಎಲ್ಲರಿಗೂ ಸ್ವಲ್ಪ ಸ್ವಲ್ಪ ಆದರೂ ಜ್ವರ ಬಂದಿದೆ,ಆ ರಮೇಶನಿಗೆ ಬಂದಿದೆ, ಸುರೇಶನಿಗೆ ಬಂದಿದೆ,ಅದು ಯಾಕೆ ನನಗೆ ಒಬ್ಬನಿಗೆ ಬಂದಿಲ್ಲ? ನೀನು ನನ್ನ ಬಳಿ ಎಲ್ಲಾ ರೈಲ್ ಬಿಡ್ಬೇಡಾ,ನೀನು ಡಾಕ್ಟರ್ ಅಲ್ಲ ..! ಬಹುಶಃ ಲಸಿಕೆಯಲ್ಲಿಯೇ ಏನೋ ಮಿಸ್ಟೇಕ್ ಆಗಿದೆ.. ಅಂತ ಅವರದ್ದೊಂದು ಮುಗಿಯದ ಗೋಳು.

ಹಾಗಾಗಿ ಗೆಳೆಯರೇ ಅರ್ಜೆಂಟಾಗಿ ಜ್ವರ ಬರಿಸುವ ಯಾವುದಾದರೂ ಮಾರ್ಗೋಪಾಯಗಳಿವೆಯೇ..? 
ದಯವಿಟ್ಟು ಸರಳ ಸುಲಭ ಪರಿಹಾರ ತಿಳಿಸಿ. 

ಅವರು ಬೆಸ್ಟ್ ಜನ,ಅವರಿಗೆ ಸ್ವಲ್ಪ ಆದರೂ ಸಮಾಧಾನ ಆಗಲಿ ಅಂತ ಅಷ್ಟೇ,ಹೊರತು ಬೇರೆನೂ ದುರುದ್ದೇಶ ಇಲ್ಲ.. 🏃‍♂️🏃‍♂️

#ವಿಷಯ_ಎಂತ_ಗೊತ್ತುಂಟಾ 
ab

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ