ಚಕ್ಕುಲಿ ಕಾಯಿಲ್




ನಮ್ಮ ಊರಿನ ಅಂಗಡಿಗಳು ತುಂಬಾ ಅಪ್ಡೇಟ್ ಆಗಿವೆ. 

ಇವತ್ತು ಒಂದು ಕಡೆ ಹೋಗಿ ಸೊಳ್ಳೆ ಕಾಯಿಲ್(ಮೋಸ್ಕಿಟೋ ಕಾಯ್ಲ್) ಕೊಡಿ ಅಂತ ಕೇಳಿದೆ.

ಅದಕ್ಕೆ ಅವರು... ಯಾವುದು ಚಕ್ಕುಲಿಯಾ..? ಅಂತ ಕೇಳಿದ್ರು.

ನನಗೆ ಒಮ್ಮೆಗೆ ಅರ್ಥ ಆಗಲಿಲ್ಲ. 

ನನಗೆ ಚುಕ್ಕುಲಿ ಬೇಡ,ಕಾಯಿಲ್ ಮಾತ್ರ ಕೊಡಿ... ಅಂದೆ.

ಹಾಗೇ ಅಲ್ಲ ಇವರೇ..ನೋಡಿ ಈ ಬೆಂಕಿ ಹಚ್ಚುವ ಸುರುಳಿ ಸುರುಳಿ ಸೊಳ್ಳೆ ಬತ್ತಿ ಉಂಟಲ್ಲಾ,ಅದಕ್ಕೆ ನಾವು ಜನರಲ್ ಆಗಿ ಚಕ್ಕುಲಿ ಕಾಯಿಲ್ ಅಂತ ಹೇಳ್ತೇವೆ.. ಅಂದ್ರು.

ಓಹ್ ಹಾಗೆಯಾ.. ಹಾಗಾದರೆ ನೀವು ಚಕ್ಕುಲಿಗೆ ಏನು ಹೇಳ್ತೀರಾ..? ಕೇಳಿದೆ.

ಚಕ್ಕುಲಿಗೆ ಎಂತ ಹೇಳ್ತಾರೆ.. ಚಕ್ಕುಲಿಗೆ ಚಕ್ಕುಲಿ ಎಂದೇ ಹೇಳ್ತೇವೆ.. ಅವರಂದರು. 

ನನಗೆ ಯಾಕೋ ಈಗ ಚಕ್ಕುಲಿ ಕೂಡ ಬೇಕು ಎಂದು ಒಮ್ಮೆ ಅನಿಸಿತು.

ಹಾಗಾದರೆ ನನಗೆ ಒಂದು ಪ್ಯಾಕ್ ಚಕ್ಕುಲಿ ಕಾಯಿಲ್ ಕೊಡಿ, ಹಾಗೆಯೇ...ಒಂದು ಪ್ಯಾಕೆಟ್ ಕಾಯಿಲ್ ತರಹ ಇರುವ ಚಕ್ಕುಲಿ ಕೂಡ ಕೊಡಿ.. ಅಂದೆ.

ಎರಡೂ ಕೊಟ್ಟರು. 

ಇನ್ನು ಮನೆಗೆ ಹೋಗಿ ಜಾಗ್ರತೆಯಿಂದ ಚಕ್ಕುಲಿ ಕಾಯಿಲ್, Sorry... ಕಾಯಿಲ್ ಚಕ್ಕುಲಿಯನ್ನೇ ತಿನ್ನಬೇಕು ಹಾಗೂ ಚಕ್ಕುಲಿ ಕಾಯಿಲ್ ಅನ್ನೇ ಹಚ್ಚಿ ಸೊಳ್ಳೆಯನ್ನು ಮನೆಯಿಂದಾಚೆಗೆ ಓಡಿಸಬೇಕು.ಉಲ್ಟಾಪಲ್ಟ ಆದ್ರೆ ನನಗೆ ಕಷ್ಟವಿದೆ.

ನಮ್ಮ ಊರಿನವರು ಈ ತರಹ ಒಳಗೊಳಗೆ ಕೇವಲ ಅವರುಗಳೇ ಸಿಕ್ಕಾಪಟ್ಟೆ ಅಪ್ಡೇಟ್ ಆಗ್ತಾ ಇದ್ದರೆ... ನಮಗೆಲ್ಲಾ ಜೀವನ ಭಯಂಕರ ಮುಶ್ಕಿಲ್ ಆಗಲಿದೆ. 

#ವಿಷಯ_ಎಂತ_ಗೊತ್ತುಂಟಾ
ab

Comments

Popular posts from this blog

ಗಗನದ ಸೂರ್ಯ

ಬಿಡುಗಡೆ!

ಭಕ್ತಿಯ ಜೊತೆಗೆ ಭಯವೂ ಇರಲಿ..