ಹೃದಯ ವಿದ್ರಾವಕ ಘಟನೆ
ಒಂದು ಪರಿಚಯದ ಹೋಟೆಲ್ ಗೆ ಹೋಗಿದ್ದೆ.
ಊರಿನದ್ದೇ ತಿನಿಸು ಜಾಸ್ತಿ ಅಲ್ಲಿ.
ಒಂದು ಪ್ಲೇಟ್ ಪುಂಡಿಗಸಿ ತಗೊಂಡು ನನ್ನಷ್ಟಕ್ಕೆ ತಿನ್ನ ತೊಡಗಿದೆ.
ನನ್ನ ಪಕ್ಕದಲ್ಲಿಯೇ ಒಬ್ಬರು ಇದ್ದರು.ಅವರು ದೋಸೆ ತಿನ್ನುತ್ತಾ ಇದ್ದರು.
ಅಲ್ಪ ಸ್ವಲ್ಪ ಕನ್ನಡ ಬರುತ್ತಿದ್ದ ಅವರು ಬಹುಶಃ ನಮ್ಮ ರಾಜ್ಯದವರು ಅಲ್ಲ ಅಂತ ಕಾಣುತ್ತೆ.
ನಾನು ತಿನ್ನುವುದನ್ನು ನೋಡಿ,ಇದೆಲ್ಲಾ ನೀವು ಏನು ತಿನ್ನುವುದು.. ಅಂತ ಆಶ್ಚರ್ಯ ಚಕಿತವಾಗಿ,ಅಷ್ಟೇ ಭಯ ಭೀತರಾಗಿ ಕೇಳಿದರು.
ಅವರು ನನ್ನನ್ನೊಮ್ಮೆ ಹಾಗೂ ಪ್ಲೇಟ್ ನಲ್ಲಿರುವ ಪುಂಡಿಯನ್ನೊಮ್ಮೆ ಮೇಲೆ ಕೆಳಗೆ ನೋಡುತ್ತಾ ಕೇಳುತ್ತಿದ್ದ ಆ ರೀತಿ,ನನಗೊಮ್ಮೆ ನಾನು ಯಾವುದೋ ಅನ್ಯಗ್ರಹ ಜೀವಿಯೇ ಇರಬೇಕು ಎಂಬಂತಹ ಫೀಲ್ ಕೊಟ್ಟಿತು.
ಆದರೂ ಪಾಪ.. ಬಹುಶಃ ಅವರಿಗೆ ಇದೆಲ್ಲಾ ಗೊತ್ತಿರಲಿಕ್ಕಿಲ್ಲ ಅಂತ ನಾನೇ ಅವರಿಗೆ ಸವಿವರವಾಗಿ ವಿವರಿಸಿದೆ...
ನೋಡಿ ಇವರೇ,ಇದೆಲ್ಲಾ ನಮ್ಮ ಮಂಗಳೂರಿನ ತಿಂಡಿ.ನೀವೂ ಸ ಇದನ್ನು ತಿನ್ನಿ,ಇದು ಬಹಳ ಚೆನ್ನಾಗಿರುತ್ತದೆ,ದೋಸೆ,ಪೂರಿ, ಚಪಾತಿ ಎಲ್ಲಾ ಕಡೆ ಇದ್ದೇ ಇರುತ್ತದೆ...ಅಂದೆ.
ನನಗೆ ಇವುಗಳದ್ದೆಲ್ಲಾ ಹೆಸರೇ ಗೊತ್ತಿಲ್ಲ.ಆವಾಗದಿಂದ ಕೆಲವರು ಬಂದು ಏನೇನೋ ಹೆಸರು ಹೇಳಿಕೊಂಡು,ತಿಂದುಕೊಂಡು ಹೋಗ್ತಾನೆ ಇದ್ದಾರೆ,ನಾನು ಇದೆಲ್ಲಾ ಯಾವತ್ತೂ ತಿಂದೂ ಇಲ್ಲ,ನೋಡಿಯೂ ಇಲ್ಲ... ಅಂದರು.
ಪರವಾಗಿಲ್ಲ ನಾನು ನಿಮಗೆ ಸಹಾಯ ಮಾಡುವೆನು ಎಂದು ಹೇಳಿ...ನಾನು ಒಂದೊಂದು ಪ್ಲೇಟ್ ಪುಂಡಿ ಗಸಿ,ಬಜಿಲ್ ಕೊಜಪು,ಬನ್ಸ್,ತೆಲ್ಲವ್,ಗೋಳಿಬಜೆ ಕಲ್ತಪ್ಪ,ಸಂಜೀರಾ,ಪದೆಂಗಿ ಬಜಿಲ್,ಕಡ್ಲೆ ಬಜಿಲ್,ಸಜ್ಜಿಗೆ ಬಜಿಲ್.. ಹೀಗೆ ಹೋಟೆಲ್ ನಲ್ಲಿ ಇವತ್ತು ಇದ್ದ ಹೆಚ್ಚಿನ ಎಲ್ಲಾ ಐಟಂ ಅನ್ನು ಇವರಿಗೆ ಕೊಡಿ ಎಂದು ಹೋಟೆಲ್ ನವನಿಗೆ ಹೇಳಿದೆ,ಅದೇ ರೀತಿ ಅವರಿಗೆ ಕೂಡ ನೀವು ಎಲ್ಲವನ್ನೂ ಸಾವಕಾಶದಿಂದ ತಿನ್ನಿ ಆಯ್ತಾ ..ಅಂತ ಸಿಕ್ಕಾಪಟ್ಟೆ ಪ್ರೋತ್ಸಾಹ ಕೂಡ ಕೊಟ್ಟೆ.
ಅವರಿಗೆ ಸ ಬಾರೀ ಖುಷಿಯಾಯಿತು,ಬೇಕಾದವುಗಳನ್ನು ಹೊಟ್ಟೆ ಫುಲ್ ಆಗುವವರೆಗೂ ತಿಂದರು,ಉಳಿದುದರಲ್ಲಿ ಕೆಲವೊಂದನ್ನು ಅವರ ರೂಮಿಗೆ ಪಾರ್ಸೆಲ್ ಕೂಡ ಕಟ್ಟಿಸಿಕೊಂಡರು.ಅದೇ ರೀತಿ ಆ ಹೋಟೆಲ್ ನವನಿಗೆ ಕೂಡ ಇವತ್ತು ಬಾರೀ ಖುಷಿ.ಒಳ್ಳೆಯ ವ್ಯಾಪಾರ ಆಗಿತ್ತಲ್ಲ ಹಾಗಾಗಿ.
ನೋಡಿ ಗೆಳೆಯರೇ...ಹೀಗೆ ನಾವು ಎಲ್ಲರನ್ನು ಖುಷಿಯಾಗಿಡಬೇಕು.
ಆದರೆ ಹೋಟೆಲಿನವ.. ಡೈಲಿ ಇಲ್ಲಿಗೆಯೇ ಬನ್ನಿ ಆಯ್ತಾ..ಅಂತ ಬಿಂಕ ಬಿನ್ನಾಣ ವಯ್ಯಾರದೊಂದಿಗೆ ಆ ಜನಕ್ಕೆ ಸಿಕ್ಕಾಪಟ್ಟೆ ಗಾಳಿ ಹಾಕುತ್ತಿದ್ದನೇ ಹೊರತು,ದಿನಾ ಬರುತ್ತಿದ್ದ ನನ್ನನ್ನು ಮಾತ್ರ ಇವತ್ತು ಸ್ವಲವೂ ಗೆನ್ಪಲಿಲ್ಲ(ತೃಣ ಸಮನವಾಗಿ ಕಂಡ) ಎನ್ನುವುದು ಇಲ್ಲಿ ನಿಜಕ್ಕೂ ಒಂದು ಹೃದಯ ವಿದ್ರಾವಕ ಘಟನೆ ಆಗಿತ್ತು ಪ್ರೆಂಡ್ಸ್.
#ವಿಷಯ_ಎಂತ_ಗೊತ್ತುಂಟಾ
ab
Comments
Post a Comment