Money Heist S05_V1

 #Money_Heist S05_V1 | Netflix 




ದರೋಡೆ ಒಂದು ಆರ್ಟ್ ಎಂದು ಹೇಳುವ ಯಾವುದೇ ದರೋಡೆಕೋರನ ಕಥೆಯು ಕೂಡ ತುಂಬಾನೇ ಇಂಟ್ರೆಸ್ಟಿಂಗ್ ಆಗಿರುತ್ತದೆ.


ಇದು ಹಲವು ದರೋಡೆಕೋರರ ಕಥೆ.


ಆದರೆ ಎಲ್ಲರೂ ಸೇರಿ ಮಾಡುವ ಆ ರಾಬರಿ ಮಾತ್ರ ಒಂದೇ. 


ಆಫ್ ಕೊರ್ಸ್ ದರೋಡೆಯನ್ನು ಇನ್ನಿಲ್ಲದಂತೆ ಪ್ರೀತಿಸುವ ಅತೀ ಬುದ್ದಿವಂತ ದರೋಡೆಕೋರರ ಕಥೆಯೇ ಈ #Money_Heist. "La casa de papel" ಎನ್ನುವುದು ಇದರ ಸ್ಪ್ಯಾನಿಷ್ ಹೆಸರು. 


ಕರೆನ್ಸಿ ಪ್ರಿಂಟ್ ಮಾಡೋ "The Royal Mint of Spain" ಅನ್ನು ಬಹಳ ಚಾಣಾಕ್ಷತನದಿಂದ ಅಷ್ಟೇ ಯಶಸ್ವಿಯಾಗಿ ಕೊಳ್ಳೆ ಹೊಡೆದ ನಂತರ,ಇವರದ್ದೊಂದು ಎರಡನೆಯ ರಾಬರಿ ನಡೆಯುವುದು "The Bank Of Spain" ನಲ್ಲಿ! 


ಇಲ್ಲಿ ಹಣವಿಲ್ಲ... 


ಬದಲಿಗೆ ನೆಲಮಾಳಿಗೆಯಲ್ಲಿ ಟನ್ ಗಟ್ಟಲೆ ಬಂಗಾರದ ಗಟ್ಟಿಗಳಿವೆ. 


ಒಳಗೆ ನುಗ್ಗುವುದು ಸುಲಭ,ರಾಬರಿಯೂ ಸುಲಭವೇ..


ಆದರೆ ಹೊರ ಬರುವುದು? 


ಅದು ಮಾತ್ರ ತುಂಬಾ ತುಂಬಾ ಕಷ್ಟ!! 


ಆದರೆ ಯಾವುದು ಕಷ್ಟವೋ ಅದೇ ಇವರಿಗೆ ಇಷ್ಟ. 


ಏಕೆಂದರೆ ಇವರು ದರೋಡೆಯನ್ನು ಇನ್ನಿಲ್ಲದಂತೆ ಪ್ರೀತಿಸುವವರು.ನೈರೋಬಿ, ಟೊಕಿಯೋ,ಬರ್ಲಿನ್, ರಿಯೋ, ಹೆಲ್ಸಿಂಕಿ ಎಂದು ವಿಶ್ವದ ಮಹಾನಗರಗಳ ಹೆಸರುಗಳನ್ನು ತಮ್ಮ ಹೆಸರಿಗೆ ಸಿಕ್ಕಿಸಿಕೊಂಡು,ಹೆಚ್ಚಿನ ಎಲ್ಲಾ ಎಂಜಿನಿಯರಿಂಗ್ ಕೌಶಲ್ಯಗಳನ್ನೆಲ್ಲಾ ದರೋಡೆಗೆ ಬಳಸಿಕೊಳ್ಳುವ ಇವರಿಗೆ ದರೋಡೆ ಎನ್ನುವುದು ಜಸ್ಟ್ ಆರ್ಟ್ ಹೊರತು ಮತ್ತೇನೂ ಅಲ್ಲ.


4 ನೇ ಸೀಸನ್ ನಲ್ಲಿಯೇ ಇವರುಗಳು Bank of Spain ಗೆ ನುಗ್ಗಿ ಆಗಿದೆ.


ಹೆಚ್ಚು ಕಡಿಮೆ 90 ಟನ್ ಗಳಷ್ಟು ಬಂಗಾರದ ಗಟ್ಟಿಗಳನ್ನು ಕರಗಿಸಿ ಅವುಗಳನ್ನು ಹರಳುಗಳನ್ನಾಗಿ ಮಾಡಿಯೂ ಆಗಿದೆ 


ಆದರೆ ಇನ್ನೂ ಅಲ್ಲಿಂದ ಹೊರ ಬಂದಿರಲಿಲ್ಲ...! 


ಈಗ ಅಷ್ಟೇ 5 ನೇ ಸೀಸನ್ ಹೊರ ಬಂದಿದೆ. 


ದರೋಡೆಕೋರರು ಹೊರ ಬರುತ್ತಾರಾ..? 


ಅಥವಾ ಮೊದಲ ಬಾರಿಗೆ ಸಿಕ್ಕಿಹಾಕಿಕೊಳ್ಳುತ್ತಾರಾ? 


No way... ಪ್ರೋಪೆಸರ್ ಇರುವಾಗ ಅಂತಹ ಸೀನೇ ಇಲ್ಲ ಎಂದು ಹೇಳುತ್ತೀರಾ..? 


ಆ ಕಥೆ ಹೇಳಲಾರೆ..


ನೀವೇ ನೋಡಿ ಸೀಸನ್ 5.


ಈ 5 ನೇ ಸೀಸನ್ 2 Volume ಗಳಲ್ಲಿ ಬಿಡುಗಡೆಯಾಗುತ್ತಿದ್ದು.ಸದ್ಯಕ್ಕೆ ಮೊದಲ Volume ಅಷ್ಟೇ ಹೊರ ಬಂದಿದ್ದು.ಇದರಲ್ಲಿ 5 ಎಪಿಸೋಡ್ ಗಳಿವೆ.


ಅಂದ ಹಾಗೆ ಇದರ ಮೊದಲ 3 ಎಪಿಸೋಡ್ ನಲ್ಲಿ ಮಾಸ್ಟರ್ ಮೈಂಡ್ ಪ್ರೋಪೆಸರ್ ಬಹಳಷ್ಟು ನಿಶ್ಶಬ್ಧ!! 


ಆದರೂ ಕಥೆಯ ತೀವ್ರತೆ,ತೀಕ್ಷ್ಣತೆ.. ಎಂದಿನಂತೆಯೇ ಇದೆ. 


ಅದಕ್ಕೆ ಕಾರಣವೂ ಇದೆ... ನಾಲ್ಕನೇ ಸೀಸನ್ ನಲ್ಲಿ ಪೋಲಿಸರು ಬ್ಯಾಂಕ್ ಆಫ್ ಸ್ಪೇನ್ ಅನ್ನು ಸುತ್ತವರಿದಿದ್ದರೆ,ಈ ಬಾರಿ ಸ್ವತಃ ಮಿಲಿಟರಿಯೇ ದರೋಡೆಕೋರರನ್ನು ಸದೆಬಡಿಯಲು ಬ್ಯಾಂಕ್ ನೊಳಗೆ ನುಗ್ಗಿದೆ... ಮತ್ತು ಬ್ಯಾಂಕ್ ಅಕ್ಷರಶಃ ಸ್ಮಶಾನವಾಗಿ ಬಿಟ್ಟಿದೆ!! 


Martín Berrote ಎಂದಿನಂತೆ  ಸಾಕರ್ ಅನ್ನೇ ಉದಾಹರಣೆಯಾಗಿಟ್ಟುಕೊಂಡು ತನ್ನ ಸಹಚರರಾದ ದರೋಡೆಕೋರರಿಗೆ ಈ ರೀತಿಯಾಗಿ ಹೇಳುತ್ತಾನೆ.. 


" ಫುಟ್ಬಾಲ್ ನಲ್ಲಿ 11 ಜನರಿಗೆ 11 ಜನ ಇರುವಂತೆ,ನಾವು ಕೂಡ ಪಟ್ಟು ಬಿಡದೇ ಆಡಬೇಕು,ಸೋಲುತ್ತೇವೆ ಎಂದು ಗೊತ್ತಿದ್ದರೂ ಕೊನೆಯವರೆಗೂ ಆಡಬೇಕು..." 


ಇದಕ್ಕೆ Denver ಹೇಳುವ ಮಾತು ಬಹಳ ಸೊಗಸಾಗಿದೆ.. 


"ಫುಟ್ಬಾಲ್ ನಲ್ಲಿ  11 ಜನರಿಗೆ 11 ಜನ ಇರುತ್ತಾರೆ ನಿಜ.ಆದರೆ ನಾವು ಇಲ್ಲಿ ಒಳಗೆ 10 ಜನ ಇದ್ದೇವೆ,ಅದೇ ಹೊರಗಡೆ ನಮ್ಮ10 ಜನರಿಗೆ 10,000 ಜನ ಇದ್ದಾರೆ... ನಮ್ಮ ತಂಡವಂತು ಈಗ  Without Coach ಆಡಬೇಕಾಗಿದೆ!! 


ಕೆಲವೊಮ್ಮೆ ಪ್ರೋಪೆಸರ್ ಗಿಂತಲೂ ಜಾಸ್ತಿ ಇಷ್ಟವಾಗುವ ಬರ್ಲಿನ್ ಸತ್ತು ಮಣ್ಣಾದರೂ ಇಲ್ಲಿ ನಡುವೆ ನಡುವೆ ಬಂದು, ಡರೋಡೆಯ ಪಾಠಗಳನ್ನು ಮತ್ತೆ ಮತ್ತೆ ನೆನಪಿಸುತ್ತಾನೆ. 


ಬರ್ಲಿನ್ ಹೇಳುತ್ತಾನೆ,ದರೋಡೆ ಹೇಗೆ  ಮಾಡಬೇಕೆಂದರೆ..


 " ಕಳೆದು ಹೋಗಿದೆ ಅಂತ ಗೊತ್ತಾಗದಿದ್ದರೆ,ಆಗ ಕಳ್ಳತನ ಆಗಿದೆ ಎಂದು ಕೂಡ ಗೊತ್ತೇ ಆಗುವುದಿಲ್ಲ ..." 


December 3 2021 ಕ್ಕೆ ಇದರ 2 ನೇ Volume  ಬರಲಿದೆಯಂತೆ. 


ಟೂ ಮಚ್ ಫನ್ ಅಲ್ಲೂ ಕೂಡ ಇರಲಿದೆ.


ಥ್ರಿಲ್ಲರ್, ಸಸ್ಪೆನ್ಸ್, ರಾಬರಿಯ ಕಥೆಗಳು ಇಷ್ಟ ಆಗುವವರಿಗೆ ಇದು ಕೂಡ ಇಷ್ಟ ಆಗಬಹುದು.


ಎಂದಿನಂತೆ ಇದರಲ್ಲಿ ಯಾರೂ ಸಾಯುವುದಿಲ್ಲವೇ? ಎಂದು ಕೇಳುತ್ತೀರಾ..


" Spoiler Alert " ಒಂದು ಇಲ್ಲದಿದ್ದರೆ ಯಾವುದೇ ಮೂವಿ ಆಗಲಿ,ಸಿರೀಸ್ ಆಗಲಿ ನೋಡುವಾಗ ಸಿಗುವ ಆ ಒಂದು ಮಜಾವೇ ಬೇರೆ ಅಲ್ಲವೇ...!


ಅಂದ ಹಾಗೆ ಪೋಲಿಸರಿಗಿಂತ ಕಳ್ಳರೇ ಅತೀ ಬುದ್ದಿವಂತನಾಗಿ ಬಿಟ್ಟರೆ... ಅಲ್ಲೊಂದು ಸಿಕ್ಕಾಪಟ್ಟೆ ಥ್ರಿಲ್ ಹೇಗೆ ಇಲ್ಲದೇ ಇರಲು ಸಾಧ್ಯ!! 


#Money_Heist_S05_V1 | Netflix 

English Series 

Release - 03/9/2021


#Series 

Ab

Comments

Popular posts from this blog

ಗಗನದ ಸೂರ್ಯ

ಒಂದು ಉಗ್ರ ಪ್ರತಿಭಟನೆ

The Priest.!