Bhramam

 #Bhramam | Prime




" ಅದೊಂದು ದೊಡ್ಡ ಕಥೆ.. ಕೇಳ್ತಿಯಾ..? " ಎಂದು ಶುರುವಲ್ಲಿಯೇ ಕಥೆ ಹೇಳುವ ಶುರು ಮಾಡುವ ಅವನೊಬ್ಬ ಅಂಧ...!


ಕಣ್ಣು ಕಾಣದಿದ್ದರೂ ಅವನು ಬಹಳ ಸೊಗಸಾಗಿ ಪಿಯಾನೊ ನುಡಿಸಬಲ್ಲ.


ಆದರೆ ಅವನು ನಿಜವಾಗಿಯೂ ಕುರುಡನಾ?


ಅಲ್ಲ!


ಅವನು ಕುರುಡನಲ್ಲ...!


ಸಮಾಜದೆದುರು ಬೇಕೆಂದೇ ಕುರುಡನಂತೆ ನಟಿಸುವ ಅವನಿಗೆ ಎರಡೂ ಕಣ್ಣು ಬಹಳ ಚೆನ್ನಾಗಿಯೇ ಕಾಣಿಸುತ್ತದೆ!! 


ಒಂದು ದಿನ ಅವನು ಅಪಾರ್ಟ್ಮೆಂಟ್ ಒಂದರಲ್ಲಿ ಜೋಡಿಯೊಂದರ ವೆಡ್ಡಿಂಗ್ ಅನಿವರ್ಸರಿ ನಿಮಿತ್ತ ಪಿಯಾನೋ ನುಡಿಸಲು ಹೋಗುತ್ತಾನೆ.


ಆದರೆ ಅಲ್ಲಿ ಹೆಂಗಸಿನ ಗಂಡ ಇರುವುದಿಲ್ಲ.


ಆ ಹೆಂಗಸು ಅವನನ್ನು ಒಳಗೆ ಬರಲು ಹೇಳುತ್ತಾಳೆ.


ಗಂಡ ಬರಲು ಇನ್ನೂ ಸಮಯವಿದೆ.. ಎಂದು ಆ ಹೆಂಗಸು ಮೆತ್ತಗೆ ಹೇಳುತ್ತಾಳೆ. 


ಅಲ್ಲಿಯವರೆಗೆ ನಾನು ಪಿಯಾನೋ ನುಡಿಸುತ್ತೇನೆ.. ಎಂದು ಇವನು ಅಲ್ಲಿಯೇ ಇದ್ದ ಪಿಯಾನೋ ನುಡಿಸಲು ಶುರು ಮಾಡಿ ಬಿಡುತ್ತಾನೆ. 


ಕುರುಡನಂತೆ ನಟಿಸಿದರೂ ಕಣ್ಣು ಸರಿಯಾಗಿ ಕಾಣುವ ಇವನು ಪಿಯಾನೋ ನುಡಿಸುತ್ತಲೇ ಮನೆಯೊಳಗೆ ಒಮ್ಮೆ ಹಾಗೇ ದೃಷ್ಟಿ ಹರಿಸುತ್ತಾನೆ. 


ಅಗಲೇ ಅವನ ಕಣ್ಣಲ್ಲಿ ಬೀಳುವುದು.. ಅಲ್ಲಿ ಸತ್ತು ಬಿದ್ದಿದ್ದ ಆ ಮಹಿಳೆಯ ಗಂಡನ ಶವ! 


ಮಾತ್ರವಲ್ಲ ಆ ಕೊಲೆಯನ್ನು ಮಹಿಳೆಯ ಜೊತೆಗೆ ಸೇರಿ ಮಾಡಿರುವ ಅವಳ ಪ್ರಿಯಕರ ಕೂಡ ಅದೇ ರೂಮಿನಲ್ಲಿ ಇರುತ್ತಾನೆ!!


ಶವವನ್ನು,ಮಹಿಳೆಯ ಪ್ರಿಯಕರನನ್ನು ಎಲ್ಲವನ್ನೂ ಕಣ್ಣಾರೆ ನೋಡಿದರೂ..ಏನು ನೋಡದವನಂತೆ ಇವನು ನಟಿಸುತ್ತಾನೆ.ಆ ಮಹಿಳೆ ಹಾಗೂ ಪ್ರಿಯಕರ ಕೂಡ ಇವನು ಕುರುಡ ಏನು ನೋಡಿಲ್ಲ ಎಂದು ನೆಮ್ಮದಿಯ ನಿಟ್ಟುಸಿರು ಬಿಡುತ್ತಾರೆ. 


ಆದರೆ ಈ ಕಣ್ಣು ಕಾಣದಂತೆ ನಟಿಸುವವನಿಗೆ ಸುಮ್ಮನೆ ಇರಲು ಸಾಧ್ಯ ಆಗುವುದಿಲ್ಲ.ಸತ್ತವನು ದೊಡ್ಡ ಸೆಲೆಬೆಟ್ರಿ ಬೇರೆ.ಹೇಗಾದರೂ ಮಾಡಿ ಈ ವಿಷಯವನ್ನು ಪೋಲಿಸರಿಗೆ ಹೇಳಲೇ ಬೇಕು ಎಂದು ಮರುದಿನ ಪೋಲಿಸ್ ಸ್ಟೇಷನ್ ಗೆ ಎದ್ದು ಬಿದ್ದು ಓಡುತ್ತಾನೆ. 


ಅಲ್ಲಿ ಹೋಗಿ ಹೇಳುತ್ತಾನೆ ನಾನು ಒಂದು ಮರ್ಡರ್ ವಿಷಯದ ಬಗ್ಗೆ ಮಾತಾಡಬೇಕು ಎಂದು.


ಅಲ್ಲಿದ್ದ ಪೋಲಿಸ್ ಒಬ್ಬ ಅವನನ್ನು ನೇರವಾಗಿ ಇನ್ಸ್‌ಪೆಕ್ಟರ್ ಬಳಿಯೇ ಕರೆದುಕೊಂಡು ಹೋಗುತ್ತಾನೆ. 


ಆದರೆ ಆ ಇನ್ಸ್‌ಪೆಕ್ಟರ್ ಬೇರೆ ಯಾರೂ ಆಗಿರದೆ ಕೊಲೆ ಮಾಡಿದಂತಹ ಆ ಮಹಿಳೆಯ ಪ್ರಿಯಕರನೇ ಆಗಿರುತ್ತಾನೆ!! 


ಈಗ ಇವನಿಗೆ ಏನು ಹೇಳಬೇಕು ಎಂದು ಗೊತ್ತಾಗುವುದಿಲ್ಲ... ನಮ್ಮ ಮನೆಯ ಬೆಕ್ಕನ್ನು ಯಾರೋ ಕೊಂದಿದ್ದಾರೆ ಎಂದು ಸುಳ್ಳು ಹೇಳಿ ಮೆಲ್ಲಗೆ ಅಲ್ಲಿಂದ ನುಣುಚಿಕೊಳ್ಳುತ್ತಾನೆ! 


ಇನ್ಸ್‌ಪೆಕ್ಟರ್ ಗೆ ಇವನ ಮೇಲೆ ಡೌಟ್ ಬರುತ್ತದೆ... ಇವನಿಗೆ ನಿಜವಾಗಿಯೂ ಕಣ್ಣು ಕಾಣುತ್ತದೆ,ಇವನು ನಿನ್ನೆ ಅಪಾರ್ಟ್‌ಮೆಂಟಿನಲ್ಲಿ ನಡೆದ ಕೊಲೆಯನ್ನು ಖಂಡಿತವಾಗಿಯೂ ನೋಡಿದ್ದಾನೆ.ಅದಕ್ಕೆ ಈಗ ದೂರು ನೀಡಲು ಬಂದಿದ್ದಾನೆ, ಆದರೆ ನನ್ನನ್ನು ನೋಡಿ ಏನೂ ನೋಡದ ಕುರುಡನಂತೆ ಅಭಿನಯಿಸುತ್ತಿದ್ದಾನೆ... ಎಂದು ಇನ್ಸ್‌ಪೆಕ್ಟರ್ ಗೆ ಗೊತ್ತಾಗಿ ಬಿಡುತ್ತದೆ. 


ಆ ಇನ್ಸ್‌ಪೆಕ್ಟರ್ ಮತ್ತು ಮಹಿಳೆ ಇಬ್ಬರೂ ಸೇರಿ ಇವನಿಗೆ ಏನಾದರೂ ಮಾಡಬೇಕು ಇಲ್ಲದಿದ್ದರೆ ನಮ್ಮ ಬಣ್ಣ ಬಯಲಾಗುತ್ತದೆ ಎಂದು ತೀರ್ಮಾನಿಸುತ್ತಾರೆ. 


ಮುಂದೆ ಆ ಮಹಿಳೆ ಅವನನ್ನು ಶಾಶ್ವತವಾಗಿ ಕುರುಡನನ್ನಾಗಿಯೇ  ಮಾಡಿ ಬಿಡುತ್ತಾಳೆ!


ಈಗ ಅವನು ನಿಜವಾಗಿಯೂ ಕುರುಡನೇ ಆಗುತ್ತಾನೆ!


ಕುರುಡನಾದ ಅವನು ಹೇಗೆ ಆ ಇಬ್ಬರಿಗೆ ಶಿಕ್ಷೆ ಸಿಗುವಂತೆ ಮಾಡುತ್ತಾನೆ? 


ಕಥೆಯಲ್ಲಿ ಮುಂದೇನಾಗುತ್ತದೆ??! 


Ravi K. Chandran ಇದನ್ನು ನಿರ್ದೇಶಿಸಿದ್ದು Prithviraj Sukumaran, Unni Mukundan, Mamta Mohandas, Raashi Khanna ಇದರಲ್ಲಿ ಅಭಿನಯಿಸಿದ್ದಾರೆ.ಅಂದ ಹಾಗೆ ಇದು 2018 ರಲ್ಲಿ ಬಂದಂತಹ Ayushmann Khurrana, Tabu, Radhika Apte ಮುಂತಾದವರು ಅಭಿನಯಸಿದ  "Andhadhun" ಎಂಬ ಹಿಂದಿ ಸಿನಿಮಾದ ರಿಮೇಕು. 



ಇದೊಂದು ಕ್ರೈಮ್ ಥ್ರಿಲ್ಲರ್ ಆಗಿದ್ದರೂ ಸಹ ನಡು ನಡುವೆ ಒಂದಷ್ಟು ಬ್ಲ್ಯಾಕ್ ಕಾಮಿಡಿ ಕೂಡ ಇದೆ.ಕಾಮಿಡಿ ಸಿನಿಮಾ ಇಷ್ಟ ಪಡುವವರಿಗೆ,ಹಾಗೂ ಹಿಂದಿಯ Andhadhun ಅನ್ನು ಇನ್ನೂ ನೋಡಿರದಿದ್ದರೆ ಇದು ಕೂಡ ಒಂದಿಷ್ಟು ಇಷ್ಟವಾಗಬಹುದು.ಒಮ್ಮೆ ನೋಡಲು ಅಡ್ಡಿಯಿಲ್ಲ..



#Bhramam | Prime 

Malayalam Movie 

Crime Thriller /Black Comedy 

Release - 07 October 2021


#Movies

ab

Comments

Popular posts from this blog

ಗಗನದ ಸೂರ್ಯ

ಬಿಡುಗಡೆ!

ಭಕ್ತಿಯ ಜೊತೆಗೆ ಭಯವೂ ಇರಲಿ..