ಉಪ್ಪಿಟ್ಟಿಗೆ ಜಯವಾಗಲಿ..
ನಾನು ಉಪ್ಪಿಟ್ಟಿನ ಭಯಂಕರ ದ್ವೇಷಿ ಅಲ್ಲ.ಅದರದ್ದೊಂದು ಡಿಪಿ,ವಾಲ್ ಪೇಪರ್ ಹಾಕಿಕೊಳ್ಳುವಷ್ಟು ಕಟ್ಟರ್ ಅಭಿಮಾನಿಯೂ ನಾನಲ್ಲ.ಆದರೆ ಮಾಡುವ ರೀತಿಯಲ್ಲಿ ಮಾಡಿದರೆ ನಾನೂ ಕೂಡ ಒಂದೆರಡು ಪ್ಲೇಟಿಗೆ ಉಪ್ಪಿಟ್ಟಿಗೆ ದಾಸನೇ,ಮನಸ್ಸಿನಿಂದಲೇ ಆಹೋ..ಒಹೋ..ಎಂದು ಹೇಳುವ ಉಪ್ಪಿಟ್ಟು ಪ್ರಿಯನೇ.ಒಂದೊಳ್ಳೆಯ ಒಗ್ಗರಣೆ,ಸರಿಯಾಗಿ ಹದವಾಗಿ ಬೆಂದು ಅರಳುವ ರವೆ,ಕಣ್ಣಿಗೆ ಆಕರ್ಷಕವಾಗಿ ಕಾಣುವ ಹಸಿ ಮೆಣಸು,ಪಕ್ಕಕ್ಕೆ ಎತ್ತಿ ಇಡಲು ಇರುವ ಕರಿಬೇವು,ದೃಷ್ಟಿ ಬೊಟ್ಟಿನಂತೆ ಮುದ ನೀಡುವ ಸಾಸಿವೆ,ಒಗ್ಗರಣೆಯಲ್ಲಿ ಬಾಡಿ ಬಂಗಾರವಾಗುವ ಉದ್ದಿನ ಬೇಳೆ.. ನೋಡುತ್ತಿದ್ದರೆ ನನಗೆ ಬೇಕು ಇನ್ನೊಂದು ಪ್ಲೇಟು ಉಪ್ಪಿಟ್ಟು.. 😋
ಉಪ್ಪಿಟ್ಟಿಗೆ ಕಾಂಕ್ರೀಟು ಅಂತ ಹೇಳಬಾರದು... ಎಂದು ಜನ ಜಾಗೃತಿ ಮೂಡಿಸುತ್ತಿರುವ,ಆಕ್ರೋಶದ ಹರತಾಳ ಮಾಡುತ್ತಿರುವ ಉಪ್ಪಿಟ್ಟು ಅಭಿಮಾನಿಗಳಿಗೆ ನನ್ನದೊಂದು ಬೆಂಬಲ ಸದಾ ಇದೆ..ಆದರೆ "ಯೆಬೇ ಡೈಲಿ ನಿರ್ದೋಸೆಯಾ.." ಎಂದು ಹೇಳುವವರ ವಿರುದ್ಧ ನಾವು ಆಕ್ರೋಶದ ಧ್ವನಿ ಎತ್ತಿದಾಗ,ನೀವು ಸ ನಮ್ಮೊಂದಿಗೆ ಧ್ವನಿಗೂಡಿಸಬೇಕು..ಹಾಗೂ ನಿರ್ದೋಸೆಗೆ ಕೂಡ ಜೈ ಹೇಳಬೇಕೆಂದು ನಾನು ಈ ಸಂಧರ್ಭದಲ್ಲಿ ವಿನಂತಿಸಿಕೊಳ್ಳುತ್ತಿದ್ದೇನೆ ಉಪ್ಪಿಟ್ಟ್ ಬಂಧುಗಳೇ.ನಾವೆಲ್ಲರೂ ಒಟ್ಟಾದರೆ ನಮ್ಮ ಸುತ್ತ ಮುತ್ತ ಇರುವ ಈ ವಿರೋಧಿಗಳ ಹುಟ್ಟಡಗಿಸಬಹುದು..ಒಗ್ಗಟಿನಲ್ಲಿ ಬಲವಿದೆ...ದಯವಿಟ್ಟು ನಿಮ್ಮ ಮುಂದಿನ ಹೋರಾಟದಲ್ಲಿ ಒಂದೊಳ್ಳೆಯ ಉಪ್ಪಿಟ್ಟೇ ಮಾಡಿ... ನಾವು ಬರುತ್ತೇವೆ... ಚೆನ್ನಾಗಿ ಉಪ್ಪಿಟ್ಟು ತಿಂದು..ಪುರ್ಸೊತ್ತು ಆ..ದ..ರೆ ಹರತಾಳವನ್ನು ಸ ಮಾಡುವ.
ಉಪ್ಪಿಟ್ಟಿಗೆ ಜೈ.. 🤘
#ಸಜ್ಜಿಗೆ..
ab pacchu
Comments
Post a Comment