ಸೀತಾರಾಂ ಬಿನೋಯ್ : Case No.18 | Prime



ಆ ಒಂದು ಪುಟ್ಟ ಹಳ್ಳಿಯಲ್ಲಿ ಕಳ್ಳತನವಾಗುತ್ತದೆ.ಆದರೆ ಅದು ಮೊದಲ ಕಳ್ಳತನವಲ್ಲ.ಅಲ್ಲಿ ನಡೆದ ಒಟ್ಟು ಸರಣಿ ಕಳ್ಳತನದಲ್ಲಿ ಅದು ನಾಲ್ಕನೆಯದ್ದು.ಆದರೆ ಈ ಬಾರಿ ಕಳ್ಳತನವಾಗಿದ್ದು ಇನ್ಸ್‌ಪೆಕ್ಟರ್ ನ ಮನೆಯಲ್ಲಿಯೇ! 


ತನಿಖೆ ಶುರುವಾಗುತ್ತದೆ.


ಒಂದು ಕ್ರಮಬದ್ದವಾದ ಪ್ಯಾಟರ್ನ್ ನಲ್ಲಿಯೇ ಕಳ್ಳತನವಾಗುತ್ತಾ ಹೋಗಿರುತ್ತದೆ.ಅದುವೇ ಆ ಊರಿನ ಪಿನ್ ಕೋಡ್ ನಂಬರ್!


ಪಿನ್ ಕೋಡಿನಲ್ಲಿರುವ ಸಂಖ್ಯೆಗೆ ಅನುಗುಣವಾಗಿ ಒಂದು ಸಂಖ್ಯೆ ಆದ ನಂತರ ಬರುವ ಮತ್ತೊಂದು ಸಂಖ್ಯೆಯನ್ನೇ ಗುರುತಾಗಿ ಇಟ್ಟುಕೊಂಡು,ಆ ಸಂಖ್ಯೆಯಷ್ಟೇ ಕಿಲೋಮೀಟರ್ ದೂರದಲ್ಲಿ ಮುಂದಿನ ಮನೆಯಲ್ಲಿ ಕಳ್ಳತನವಾಗುತ್ತಾ ಹೋಗುತ್ತಿರುವುದು  ತನಿಖೆಯಲ್ಲಿ ಮೇಲ್ನೋಟಕ್ಕೆ ತಿಳಿದು ಬರುತ್ತದೆ. 


ಮೊದಲಿಗೆ ಹೀಗಿರಲು ಸಾಧ್ಯವೇ ಅಂತ ಅನಿಸಿದರೂ ಐದನೇ ಮನೆ ಕೂಡ ಪಿನ್ ಕೋಡ್ ನ ಆ ಐದನೇ ಸಂಖ್ಯೆಯಷ್ಟು ದೂರದಲ್ಲಿಯೇ ಕಳ್ಳತನಕ್ಕೆ ಒಳಗಾಗಿ ಬಿಡುತ್ತದೆ..ಆದರೆ ಅದು ವಿಫಲ ಕೂಡ ಆಗುತ್ತದೆ. 


ಅರ್ಧ ಮೂವಿ ನೋಡುವಾಗ ಏನು ಬರೀ ಮನೆ ಕಳ್ಳರ ಬೆನ್ನು ಹತ್ತುವುದೇ ಇದರ ಕಥೆಯಾ ಎಂದು ಕೊಂಡರೆ... ಆಗ ನಡೆಯುತ್ತದೆ ಮೊದಲ ಕೊಲೆ! ಅದೂ ಕೂಡ ಇನ್ಸ್‌ಪೆಕ್ಟರ್ ನ ಹೆಂಡತಿಯದ್ದೇ ಕೊಲೆ!! 


ಅಲ್ಲಿಂದ ಶುರುವಾಗುವುದೇ ಇದರ ಅಸಲಿ ಕಥೆ!


ಒಂದಲ್ಲ.. ಎರಡಲ್ಲ.. ಒಟ್ಟು ನಾಲ್ಕು ಕೊಲೆಗಳು ಅದಾಗಲೇ ನಡೆದಿರುತ್ತದೆ!!


ಮುಂದೆಯೂ ಕೊಲೆಗಳು ನಡೆಯುತ್ತದೆ!!


ಏಕೆ?


ಅಸಲಿಗೆ ಇದರ ಕಥೆಯಾದರೂ ಏನು? 


ದೇವಿ ಪ್ರಸಾದ್ ಶೆಟ್ಟಿ ನಿರ್ದೇಶನದ ಈ ಮೂವಿಯಲ್ಲಿ ವಿಜಯ್ ರಾಘವೇಂದ್ರ,ಅಕ್ಷತಾ, ಶ್ರೀಹರ್ಷ ನೀನಾಸಂ,ನಾಗರಾಜ್ ಮೊದಲಾದವರ ಅಭಿನಯವಿದೆ. 


ಕೊನೆಯ ಕ್ಷಣದವರೆಗೂ ಥ್ರೀಲ್ ಉಳಿಸಿಕೊಂಡು ಹೋಗುವ ಈ ಮೂವಿಯ ಕಥೆ ಇಷ್ಟವಾಯಿತು.OTT ಯಲ್ಲಿ ಬಂದಂತಹ ಹಲವು ಸಸ್ಪೆನ್ಸ್ ಥ್ರಿಲ್ಲರ್ ಮೂವಿಗಳಂತೆ ಇದೂ ಕೂಡ ನಿಮಗೆ ಅಷ್ಟೇ ಇಷ್ಟವಾಗಬಹುದು.ನೋಡಿರದಿದ್ದರೆ ನೋಡಿ ಚೆನ್ನಾಗಿದೆ..


#ಸೀತಾರಾಮ್_ಬಿನೋಯ್:Case No.18 | Prime 

Kannada Movie 

Murder Mystery 

Year - 2021


#Movies 

Ab

Comments

Popular posts from this blog

ಗಗನದ ಸೂರ್ಯ

ಬಿಡುಗಡೆ!

ಭಕ್ತಿಯ ಜೊತೆಗೆ ಭಯವೂ ಇರಲಿ..