My Name
#My_Name | Netflix
ಅವಳ ತಂದೆ ಗ್ಯಾಂಗ್ಸ್ಟರ್.ಒಂದು ದಿನ ಅವನು ತನ್ನ ಮನೆಯ ಬಾಗಿಲಿನಲ್ಲಿಯೇ ಕೊಲೆಯಾಗಿ ಬಿಡುತ್ತಾನೆ.ಅದು ಕೂಡ ಅವಳ ಕಣ್ಣೆದುರೇ.ಆದರೆ ಕೊಲೆಗಾರ ಯಾರೆಂದು ಅವಳಿಗೆ ಗೊತ್ತಿಲ್ಲ!
ಮುಂದೆ ಅವಳು ಕೂಡ ಗ್ಯಾಂಗಿನ ಮೆಂಬರ್ ಆಗಿ ಬಿಡುತ್ತಾಳೆ.
ತಂದೆಯ ಕೊಲೆಗಾರನನ್ನು ಕೊಲ್ಲುವುದೇ ಅವಳ ಗುರಿಯಾಗಿ ಬಿಡುತ್ತದೆ.
ಅವಳ 'ಹೆಸರು' ಬದಲಾಯಿಸಲಾಗುತ್ತದೆ.
ಒಂದು ದಿನ ಅವಳೇ ಸ್ವತಃ ಪೋಲಿಸ್ ಆಗಿ ಬಿಡುತ್ತಾಳೆ!
ಹಾಗೂ ಕೊಲೆಗಾರನನ್ನು ಬೇಟೆಯಾಡಲು ಹೊರಡುತ್ತಾಳೆ.
ಇಲ್ಲಿ ಕೊಲೆಗಾರ ಯಾರು..? ಗ್ಯಾಂಗ್ಸ್ಟರ್ ಯಾರು..? ನಿಜವಾಗಿಯೂ ಪೋಲಿಸ್ ಇಲ್ಲಿ ಯಾರು.. ? ಹಾಗೂ ಅವಳು ಯಾರು ಮತ್ತು ಅವಳ ಹೆಸರೇನು?
ಇದೊಂದು ಸೌತ್ ಕೊರಿಯನ್ ಸಿರೀಸ್.ಇದರಲ್ಲಿ ಒಟ್ಟು 8 ಎಪಿಸೋಡ್ ಗಳಿದ್ದು ಇದನ್ನು Kim Jin-min ನಿರ್ದೇಶನ ಮಾಡಿದ್ದು Han So-hee ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.ಎಲ್ಲರ ನಟನೆಯೂ ಇಷ್ಟವಾಗುತ್ತದೆ ಇಲ್ಲಿ. ಬ್ಯಾಕ್ಗ್ರೌಂಡ್ ಸ್ಕೋರ್ ಇಂಪಾಗಿದೆ.ಇದೊಂದು ಫಿಮೇಲ್ ಲೀಡ್ ಇರುವ ಸೀರಿಸ್.ಆಕ್ಷ್ಯನ್, ಕ್ರೈಮ್ ಹಾಗೂ ಥ್ರಿಲ್ಲರ್ ಎಲ್ಲವನ್ನೂ ಇದು ಒಳಗೊಂಡಿದೆ.
ತುಂಬಾ ಒಳ್ಳೆಯವನು ತುಂಬಾ ಕೆಟ್ಟವನಂತೆ ಕಾಣುವುದು,ಅದೇ ರೀತಿ ತುಂಬಾ ಕೆಟ್ಟವನು ತುಂಬಾ ಒಳ್ಳೆಯವನಂತೆ ಕಾಣುವುದು,ಪರಸ್ಪರ ದ್ವೇಷಿಸುತ್ತಲೇ ಗೊತ್ತಿಲ್ಲದಂತೆಯೇ ಹತ್ತಿರವಾಗುವುದು,ಹತ್ತಿರವಾಗುತ್ತಲೇ ಮತ್ತಷ್ಟು ದೂರವಾಗಿ ಬಿಡುವುದು ಎಲ್ಲವೂ ಇಲ್ಲಿದೆ.ಖಂಡಿತವಾಗಿಯೂ ಒಮ್ಮೆ ನೋಡಲು ಅಡ್ಡಿ ಇಲ್ಲ.ಸ್ಕ್ವಿಡ್ ಗೇಮ್ ನಿಮಗೆ ಇಷ್ಟವಾಗುವುದಾದರೆ ಇದು ಕೂಡ ಅಷ್ಟೇ ಇಷ್ಟವಾಗಬಹುದು.ಈ ಎರಡೂ ಸಿರೀಸ್ ಗಳ ರೇಟಿಂಗ್ ಕೂಡ ಹೆಚ್ಚು ಕಡಿಮೆ ಒಂದೇ ರೀತಿ ಇದೆ.
#My_Name | Netflix
Korean Drama
Action Crime Thriller
Release - October 15, 2021
#Series
Ab Pacchu
Comments
Post a Comment