No Country for Old men
#No_Country_for_Old_Men | Netflix
ಅವನೊಬ್ಬ ಹಿಟ್ ಮ್ಯಾನ್.ಅವನ ದಾರಿಗೆ ಅಡ್ಡ ಬಂದವರನ್ನೆಲ್ಲಾ ನಿರ್ದಾಕ್ಷಿಣ್ಯವಾಗಿ ಮುಗಿಸುವುದೇ ಅವನ ವೃತ್ತಿ. ಆದರೆ ಅವನಲ್ಲೊಂದು ವಿಚಿತ್ರ ಪ್ರವೃತಿ ಇದೆ. ಅದೇನೆಂದರೆ ಅವನು ಟಾಸ್ ಹಾಕುತ್ತಾನೆ.ಎದುರಾಳಿ ಹೇಳಬೇಕು ಹೆಡ್ ಆರ್ ಟೈಲ್. ಎದುರಿರುವವನು ಟಾಸ್ ಗೆದ್ದರೆ ಬದುಕುತ್ತಾನೆ,ಸೋತರೆ ಇಲ್ಲ!
ಅಂತಹ ಹಿಟ್ ಮ್ಯಾನ್ ನನ್ನೇ ಸತಾಯಿಸುವನು ಕೂಡ ಒಬ್ಬ ಇರುತ್ತಾನೆ.ಡ್ರಗ್ ದಂಧೆಯ ದೊಡ್ಡ ಮೊತ್ತದ ಹಣವೊಂದು ಅವನಿಗೆ ಅನಾಯಾಸವಾಗಿ ಒಂದು ಕಡೆ ಸಿಕ್ಕಿರುತ್ತದೆ.ಅದನ್ನು ಹಿಡಿದುಕೊಂಡು ಹಿಟ್ ಮ್ಯಾನ್ ನಿಂದ ತಪ್ಪಿಸಿಕೊಂಡು ಅವನು ಊರಿಡೀ ಓಡುತ್ತಿರುತ್ತಾನೆ.ಈ ಹಣ ಸಿಕ್ಕಿದವನಿಗೆ ಡ್ರಗ್ ಜಗಳದಲ್ಲಿ ಸಾಯುತ್ತಿದ್ದ ವ್ಯಕ್ತಿಯ ಮೇಲೆ ಕರುಣೆ ಅವಶ್ಯವಾಗಿ ಇರುತ್ತದೆ,ಆದರೆ ತನ್ನ ಹೆಂಡತಿಗೆ ತನ್ನ ಕೆಲಸಗಳಿಂದಾಗಿ ಅಪಾಯ ಬರಬಹುದು ಎಂದು ಗೊತ್ತಿದ್ದರೂ ಒಂದು ಘಳಿಗೆ ದಿವ್ಯ ನಿರ್ಲಕ್ಷ್ಯ ತೋರಿಬಿಡುತ್ತಾನೆ ಆತ!
ಈ ಕಥೆಯ ಆತ್ಮದಂತಹ ಪಾತ್ರ ಅಂದರೆ ಅದು ಒಬ್ಬ ವೃದ್ಧ ಪೋಲಿಸ್ ಅಧಿಕಾರಿ.ಹೌದು ಅವನು ಗುಡ್ ಓಲ್ಡ್ ಡೇಸ್ ನ ಪೋಲಿಸ್. ಅವನಿಗೆ ಹಳೆಯ ಕಾಲದ ಕಥೆಗಳು ಇಷ್ಟ.ಅವನು ಮೆತ್ತಗೆ ಹೇಳುತ್ತಾನೆ " ಹಿಂದೆ ಎಲ್ಲಾ ಈಗಿನಂತೆ ಇಷ್ಟೊಂದು ಕ್ರೈಮ್ ಇರಲಿಲ್ಲ.ನೀವು ಹೇಳಿದರೆ ನಗುತ್ತೀರಾ ಆವಾಗ ಪೋಲಿಸರ ಬಳಿ ಗನ್ ಕೂಡ ಇರಲಿಲ್ಲ.ಆದರೆ ಈಗ ಹಾಗಲ್ಲ,ಕೇಳಿರದ ಹೊಸ ಹೊಸ ಕ್ರೈಮ್.ಅದೂ ಕೂಡ ಎಲ್ಲವೂ ಡೇಂಜರಸ್ ಕ್ರೈಮ್ ಗಳು.ಅಪರಾಧದ ಆಳ ಅಗಲದ ಅರಿವೂ ಕೂಡ ಇರುವುದಿಲ್ಲ.ಕೆಲವೊಮ್ಮೆ ಗೊತ್ತಿರುತ್ತದೆ,ಅಪರಾಧಿಗಳು ಅದೆಷ್ಟು ನಿರ್ದಯಿ ಎಂದರೆ ನಾವು ಪ್ರಾಣ ಕೂಡ ತ್ಯಾಗ ಮಾಡಬೇಕಾಗುತ್ತದೆ.ನಾವು ಹಳೆಯ ಕಾಲದವರು,ಅಸಹಾಯಕರು ಕೂಡ,ಆದರೂ ಹೊಸ ಕ್ರೈಮ್ ಗಳ ಜೊತೆಗೆಯೇ ಇದ್ದೇವೆ,ಈ ಬದಲಾದ ಸಮಾಜ ನಮ್ಮಂತಹ ವೃದ್ಧರಿಗಲ್ಲ! "
Cormac McCarthy ಎಂಬುವವ ಬರೆದ ಇದೇ ಹೆಸರಿನ ನಾವೆಲ್ ಅನ್ನೇ ಈ ಮೂವಿಯ ಕಥೆ ಮಾಡಲಾಗಿದೆ.ಹೆಸರಾಂತ Coen ಬ್ರದರ್ಸ್ ಗಳಾದ Joel Coen, Ethan Coen ಇದನ್ನು ನಿರ್ದೇಶಿಸಿದ್ದು ಹಿರಿಯ ಕಲಾವಿದ Tommy Lee Jones ಮತ್ತು Javier Bardem ಹಾಗೂ Josh Brolin ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.ಇಲ್ಲಿ ಎಲ್ಲರ ನಟನೆಯು ಅಧ್ಭುತವಾಗಿಯೇ ಇದೆ.ವಿಶೇಷತೆ ಎಂದರೆ ಈ ಮೂವಿಯಲ್ಲಿ ಅಂತಹ ಹೆಚ್ಚಿನ ಯಾವುದೇ ಬ್ಯಾಕ್ಗ್ರೌಂಡ್ ಸ್ಕೋರ್ ಇಲ್ಲವೇ ಇಲ್ಲ,ಹಾಗಾಗಿ ಮೌನವೂ ಕೂಡ ಹೆಚ್ಚಿನ ಕಡೆ ಸಂಭಾಷಣೆಯಂತೆ ಕಾಣುತ್ತದೆ ಮತ್ತು ಕಾಡುತ್ತದೆ.
ಇದರ ಕಥೆಗೆ ಬರಬೇಕಾದರೆ ಇದೊಂದು ಡ್ರಗ್,ಮನಿ ಹಾಗೂ ಮರ್ಡರ್ ಗೆ ಸಂಬಂಧಿಸಿದ ಸಾಮಾನ್ಯ Neo Western Crime Thriller ಆದರೂ ಇಲ್ಲಿರುವ ಪಾತ್ರಗಳು ಎರಡು ರೀತಿಯ ವ್ಯಕ್ತಿತ್ವವನ್ನು ಸೂಕ್ಷ್ಮವಾಗಿ ನಮಗೆ ಪ್ರದರ್ಶಿಸುತ್ತಲೇ ಇರುತ್ತದೆ.ಸರಳ ಕಥೆಯನ್ನು ವಿಭಿನ್ನವಾಗಿ ನರೇಟ್ ಮಾಡಿದುದರಿಂದ ಅನಾಲಿಸಿಸ್ ಮಾಡುವುದಕ್ಕಾಗಿ ಒಂದಷ್ಟು ತಲೆ ಕೆರೆದುಕೊಳ್ಳುವುದು ಅವಶ್ಯವಾಗುತ್ತದೆ.ಹಾಗಾಗಿ ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಇದರ ಆಯಾಮಗಳು ಹೊಳೆಯಬಹುದು.
ಇದು ತುಂಬಾನೇ ಹೆಸರು ಮಾಡಿದ ಹಾಗೂ ವಿಶ್ವಾದ್ಯಂತ ಅಪಾರ ಪ್ರಶಂಸನೆಗೆ ಒಳಗಾದ ಸಿನಿಮಾ ಕೂಡ ಹೌದು,ಹಲವಾರು ಆವಾರ್ಡ್ ಗಳನ್ನು ಕೂಡ ಇದು ಬಾಚಿ ತಬ್ಬಿಕೊಂಡಿದೆ.ಆದರೂ ಇದು ಎಲ್ಲರಿಗೂ ದಕ್ಕುವ ಮೂವಿ ಅಲ್ಲ,ಇಷ್ಟವಾಗದೇ ಹೋಗಬಹುದು.ಮೂವಿಯ ಆಳಕ್ಕಿಳಿದು ಬಗೆದು ನೋಡಬೇಕು ಎಂಬ ಹಂಬಲವಿದ್ದರೆ ಖಂಡಿತವಾಗಿಯೂ ವರ್ಚುವಲ್ ಹಾರೆ ಪಿಕ್ಕಾಸುಗಳು ಬೇಕಾಗುತ್ತದೆ.ಆಗ ಬೇರೆಯವರಿಗೆ ಸಿಗದೇ ಇದ್ದದು ನಿಮ್ಮ ಅಗೆತದ ವಿಶ್ಲೇಷಣೆಗೆ ಕೂಡ ಒಂದಷ್ಟು ಸಿಗಬಹುದು.
#No_Country_for_Old_Men | Netflix
English Movie
Neo-Western Crime Thriller
Year - 2007
#Movies
Ab Pacchu
Comments
Post a Comment