Sardar Udham
#Sardar_Udham | Prime
ಒಬ್ಬ ಸೇಲ್ಸ್‌ಮ್ಯಾನ್ ಆಗಿ ಜನರಲ್ ಡಯರ್ ನನ್ನು ಆಂಗ್ಲರ ನೆಲದಲ್ಲಿ ಭೇಟಿ ಮಾಡುವ ಉಧಮ್ ಸಿಂಗ್ ದುಬಾರಿ ಪೆನ್ ಒಂದನ್ನು ಅವನಿಗೆ ಕೊಡುತ್ತಾನೆ.
ಇದರ ಬೆಲೆ ಎಷ್ಟು?. ಡಯರ್ ಕೇಳುತ್ತಾನೆ.
ಉಧಮ್ ಸಿಂಗ್ ಹೇಳುತ್ತಾನೆ... ಫ್ರೀ ಸರ್.. ನಿಮಗೆ.
ಫ್ರೀ..! ನನಗೆ?.. ಡಯರ್ ವಿಚಿತ್ರವಾಗಿ ಕೇಳುತ್ತಾನೆ.
ಹೌದು ಸರ್ ನಿಮಗೆ ಫ್ರೀ,ನನಗೆ ನೀವು ಗೊತ್ತು,ನಾನು ನಿಮ್ಮ ಆಡಳಿದಲ್ಲಿ ಕೆಲಸ ಮಾಡಿದವನು.. ಫ್ಯಾಕ್ಟರಿಯಲ್ಲಿ,ರೈಲ್ವೆ ಯಲ್ಲಿ..ಕೆಲಸ ಮಾಡಿದವನು ನಾನು.. ಇಂಡಿಯಾದಲ್ಲಿ ಸರ್!.. ಎಂದು ಹೇಳುತ್ತಾನೆ ಯುವಕ ಉಧಮ್.
ಅದಕ್ಕೆ ಜನರಲ್ ಡಯರ್ ಈ ಕೆಳಗಿನ ಮಾತುಗಳನ್ನು ಉಧಮ್ ಗೆ ಹೇಳುತ್ತಾನೆ..
- ಓಹ್ ಇಂಡಿಯಾ..! ಕೆಟ್ಟ ಫುಡ್,ಕೆಟ್ಟ ವೆದರ್,ಅದೇ ರೀತಿ ಅಲ್ಲಿಯ ಜನರು..
ಅಲ್ಲಿಯ ಜನರು ಕೂಡ ತುಂಬಾ ಸಾಮಾನ್ಯ ಜನರು,ವೆರಿ ಆರ್ಡಿನರಿ ಪೀಪಲ್ಸ್.
ಅಲ್ಲಿಯ ಜನರಿಗೆ ಇದೊಂದು ಅಭ್ಯಾಸ.. ನಮ್ಮಂತಹ ಆಂಗ್ಲರನ್ನು ಈ ರೀತಿಯಾಗಿ ಏನಾದರೂ ನೀಡಿ ಖುಷಿ ಪಡಿಸುವುದು,ಅವರಿಗೆ ಅದನ್ನು ಬಿಟ್ಟು ಬೇರೆ ಏನೂ ಗೊತ್ತಿಲ್ಲ.. ಅಷ್ಟು ಮಾತ್ರವಲ್ಲ ನಮ್ಮ ವಿರುದ್ಧ ಅವರು ಎಂದೂ ತಿರುಗಿ ಬಿದ್ದೇ ಇಲ್ಲ.
ಆದರೆ ನಾನು ಮಾತ್ರ ಅಲ್ಲಿ ನನ್ನ ಕೆಲಸವನ್ನು ಈ ಬಿಟ್ರಿಷ್ ಸಾಮ್ರಾಜ್ಯಕ್ಕಾಗಿ ಬಹಳ ಅಚ್ಚುಕಟ್ಟಾಗಿ ಮಾಡಿದ್ದೇನೆ ಎಂಬ ನೆಮ್ಮದಿ ನನಗಿದೆ..! ಎಂದು ಹೇಳಿ ಮುಗಿಸುತ್ತಾನೆ ಜಲಿಯನ್ ವಾಲಾ ಭಾಗ್ ಹತ್ಯಾಕಾಂಡದ ಪ್ರಮುಖ ರೂವರಿ ಈ ಜನರಲ್ ಮೈಕಲ್ ಡಯರ್..!
ಬಹುಶಃ ಉಧಮ್ ಗೆ ಆವಾಗಲೇ ಅವನೆದೆಗೊಂದು ಬುಲ್ಲೆಟ್ ಇಳಿಸಬೇಕು ಎಂದು ಅನ್ನಿಸಿದ್ದರೆ ಅದರಲ್ಲಿ ಅಂತಹ ತಪ್ಪು ಏನೂ ಇಲ್ಲ ಬಿಡಿ..
ಉಧಮ್ ಮುಂದೆ ಜನರಲ್ ಡಯರ್ ನ ಮನೆಯಲ್ಲಿಯೇ ಒಂದಿಷ್ಟು ಕೆಲಸ ಬೇಕೆಂದೇ ಮಾಡುತ್ತಾನೆ.ಅವನ ಬೂಟ್ ಫಾಲಿಶ್ ಮಾಡುವಾಗ,ಅವನ ಗ್ಲಾಸಿಗೆ ವೈನ್ ಸುರಿವಾಗ ಉಧಮ್ ಪ್ರತೀ ಬಾರಿಯೂ ಕೇಳುತ್ತಾನೆ.. ಸರ್, ನಿಮಗೆ ಜಲಿಯನ್ ವಾಲಾ ಭಾಗ್ ಘಟನೆಯ ಬಗ್ಗೆ ಒಂಚೂರು ಖೇದ ಇಲ್ಲವೇ.. ಸ್ವಲವೂ ಬೇಜಾರು.. ?
ಡಯರ್ ಗೆ ಎಂದಿಗೂ ಎಳ್ಳಷ್ಟೂ ಪಶ್ಚಾತಾಪ ಎದೆಯಲ್ಲಿ ಹುಟ್ಟಲೇ ಇಲ್ಲ!
ಉಧಮ್ ಕೇಳಿದಾಗಲೆಲ್ಲ... ನಾನು ಮಾಡಿದ್ದೇ ಸರಿ,ಪ್ರತಿರೋಧ ತೋರಿದ ಆ ಭಾರತಿಯರಿಗೆ ಹಾಗೇ ಆಗಬೇಕಿತ್ತು ಎಂದು ಉಡಾಫೆಯಾಗಿ ಉತ್ತರಿಸುತ್ತಿದ್ದ ಈ ಡಯರ್.
ಆವಾಗಲೂ ಉಧಮ್ ಕೈಯಲ್ಲಿ ಪಿಸ್ತೂಲ್ ಏನೋ ಅವಶ್ಯವಾಗಿ ಇತ್ತು.ಮನಸ್ಸು ಮಾಡಿದ್ದರೆ ಡಯರ್ ನ ಮನೆಯಲ್ಲಿಯೇ ಆ ರೂಮಿನೊಳಗೆ ಅವನೆದೆಗೊಂದು ಬುಲ್ಲೆಟ್ ನುಗ್ಗಿಸುವುದು ಉಧಮ್ ಗೆ ಅಂತಹ ಕಷ್ಟದ ವಿಷಯ ಏನು ಆಗಿರಲಿಲ್ಲ.
ಆದರೆ ಅವನು ಹಾಗೆ ಮಾಡಲಿಲ್ಲ.
ಕಾರಣ ಆ ಪಾಪಿಗೆ ಎಲ್ಲರೆದುರೇ ಗುಂಡು ಹೊಡೆದು ನಿರ್ದಾಕ್ಷಿಣ್ಯವಾಗಿ ಸಾಯಿಸಬೇಕು ಮತ್ತು ಅವನ ಸಾವಿನ ಕಾರಣ ಜಗತ್ತಿಗೆ ಗೊತ್ತಾಗಬೇಕು ಎಂದು ಉಧಮ್ ನಿರ್ಧರಿಸಿ ಅದಾಗಲೇ ಬಹಳ ಸಮಯವಾಗಿತ್ತು.
ಉಧಮ್ ಗುಂಡು ಹೊಡೆದ...!
ಕೊನೆಗೂ ಜನರ್ ಡಯರ್ ಗೆ ಗುಂಡು ಹೊಡೆದ!!
ಒಂದಲ್ಲ...
ಬೇರೊಬ್ಬರಿ 6 ಗುಂಡುಗಳನ್ನು ಎಲ್ಲರೆದುರೇ ಡಯರ್ ನ ಎದೆಗಿಳಿಸಿ ಅವನನ್ನು ಹೆಣವಾಗಿಸಿ ಮಲಗಿಸಿ ಬಿಟ್ಟಿದ್ದ ಈ ಹರೆಯದ ಯುವಕ ಉಧಮ್ ಸಿಂಗ್ !!
ಆ ಪ್ರತೀಕಾರಕ್ಕೆ ಒಂದು ಬಲವಾದ ಕಾರಣವಿತ್ತು.
ಯಾರದ್ದೇ ಆಗಲಿ ರಕ್ತ ಕೊತ ಕೊತ ಎಂದು ಕುದಿಯಬೇಕು ಎಂಬಂತಹ ಕಾರಣವೇ ಅದು.
ಜಲಿಯನ್ ವಾಲಾ ಭಾಗ್ ಎಂಬ ರಕ್ತದ ಮಡುವನ್ನು ಕಣ್ಣಾರೆ ಕಂಡವನು ಈ ಹುಡುಗ ಉಧಮ್!
ಈ ಮೂವಿಯಲ್ಲಿ ಕೂಡ ಜಲಿಯನ್ ವಾಲಾ ಭಾಗ್ ದುರಂತವನ್ನು ಎಳೆ ಎಳೆಯಾಗಿ ತೋರಿಸಿದ್ದಾರೆ..
ಆದರೆ ನೋಡಲು ಮಾತ್ರ ತುಂಬಾ ಕಷ್ಟವಾಗುತ್ತದೆ!!
ಅದನ್ನು ನೊಡುವಾಗ ನಮ್ಮೊಳಗೆ ಕೂಡ ಒಂದು ಆಕ್ರಂದನ ಮೊಳಗದಿದ್ದರೆ ಬಹುಶಃ ನಾವು ಭಾರತೀಯರು ಮಾತ್ರವಲ್ಲ.. ಮನುಷ್ಯರು ಕೂಡ ಅಲ್ಲವೇನೋ ಎಂದೇ ಅನ್ನಿಸಿಬಿಡುತ್ತದೆ!
ನಮ್ಮ ಕಣ್ಣಿನಿಂದ ಕಣ್ಣೀರು ಅಲ್ಲ ರಕ್ತ ಜಿನುಗಿದರೂ ಆ ಅಮಯಾಕರ ಬಲಿಧಾನಕ್ಕೆ ಎಂದಿಗೂ ಅದು ಸಾಟಿಯಾಗದು!
ನೋಡುವಾಗ ಎಷ್ಟೇ ತಡೆದುಕೊಂಡರು ಕಣ್ಣು ಕೇಳುವುದಿಲ್ಲ.. ಕೆನ್ನೆ ಒದ್ದೆ ಮಾಡುತ್ತದೆ ಆ ದೃಶ್ಯಗಳು!!!
ನೀವು ಅಸಹಾಯಕ ಆದರೆ ಅದರಲ್ಲಿ ನಿಮ್ಮ ತಪ್ಪು ಕೂಡ ಏನು ಇಲ್ಲ ಬಿಡಿ.ಏಕೆಂದರೆ ಆ ದೃಶ್ಯಗಳೇ ಅಷ್ಟೊಂದು ಭೀಕರವಾಗಿದೆ.. ಹೃದಯ ವಿದ್ರಾವಕವಾಗಿದೆ!!
ಈ ದೇಶದ ಜನರ ತ್ಯಾಗ ದೊಡ್ಡದು.
ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರ ಬಲಿದಾನಕ್ಕೆ ಏನು ಕೊಟ್ಟರೂ,ಏನೇ ಹೇಳಿದರೂ ಯಾವುದೂ ಎಂದಿಗೂ ಅದಕ್ಕೆ ಸರಿ ಸಾಟಿಯಾಗದು.
ನಾವು ಮಾಡಬಹುದಾದ ಒಂದೇ ಕೆಲಸ ಎಂದರೆ ಅವರೆಲ್ಲರ ತ್ಯಾಗ ಬಲಿದಾನಗಳನ್ನು ಕ್ಷಣ ಕ್ಷಣಕ್ಕೂ ನೆನಪು ಮಾಡಿಕೊಳ್ಳುವುದು ಅಷ್ಟೇ.
Shoojit Sircar ನಿರ್ದೇಶನ ಈ ಮೂವಿಯಲ್ಲಿ Vicky Kaushal ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.ವಿಕ್ಕಿ ಕೌಶಲ್ ಅಭಿನಯ ಇಷ್ಟವಾಗುತ್ತದೆ.
ಈ ಮೂವಿಯನ್ನು ನೀವು ನೋಡಲೇಬೇಕು ಎಂದು ನಾನು ಹೇಳುತ್ತೇನೆ.ವಿಕ್ಕಿ ಕೌಶಲ್ ಗಿಂತಲೂ ಹೆಚ್ಚಾಗಿ ಉಧಮ್ ಎಂಬ ದೇಶ ಭಕ್ತನಿಗಾಗಿ ಈ ಮೂವಿ ನೋಡಿ.
ಈ ನೆಲದಲ್ಲಿ ಇಂತಹ ಹಲವಾರು ಹೀರೋಗಳು ಹುಟ್ಟಿದ್ದಾರೆ. ಆದರೆ ಎಂದಿಗೂ ಇತಿಹಾಸದ ಪುಟಗಳಲ್ಲಿ ಭದ್ರವಾದ ಖಾಯಂ ಸ್ಥಾನವೊಂದನ್ನು ಅವರಿಗೆ ಸಿಗಲೇ ಇಲ್ಲ.ದೇಶಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ತೆರೆಯ ಮರೆಯ ಹೀರೋಗಳು ಅವರುಗಳು.ನಾವು ನೀವು ಇಂದು ಬಹಳಷ್ಟು ಸುಖವಾಗಿದ್ದೆವೆ ಎಂದರೆ ಅದಕ್ಕೆ ಒಂದು ಕಾರಣ ಅವರುಗಳು ಕೂಡ ಹೌದು.
ಇಂತಹ ಹೀರೋಗಳ ಕಥೆಯ ಮೂವಿಗಳು ಇನ್ನಷ್ಟು ತೆರೆಯ ಮೇಲೆ ಬರಲಿ ಎಂಬುದೇ ನನ್ನದು ಕೂಡ ಆಶಯ.
ನೀವೂ ನೋಡಿ, ನೋಡುವಾಗ ನಿಮ್ಮ ಮನೆಯ ಮಕ್ಕಳು ಕೂಡ ನಿಮ್ಮ ಜೊತೆಯಲ್ಲಿಯೇ ಇರಲಿ.ಅವರಿಗೂ ಈ ದೇಶದ ಹೀರೋಗಳ ಒಂದಿಷ್ಟು ಪರಿಚಯ ಮಾಡಿಸಿ.
ಉಧಮ್ ಗೆ ಕೊನೆಯಲ್ಲಿ ಏನಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ಕಥೆಯೇ.
ಆದರೆ ಬರೀ ಅಷ್ಟೇ ಇದರ ಕಥೆಯಲ್ಲ.ಉಧಮ್ ನ ಸಾಹಸಕ್ಕಾಗಿ ಅವನದೊಂದು ಸಿದ್ಧತೆ,ಅವನ ಮನಸ್ಥಿತಿ ಎಲ್ಲವನ್ನೂ ತಿಳಿಯುವುದಕ್ಕಾಗಿ ನೀವು ಮೂವಿಯನ್ನು ನೋಡಬೇಕಾಗುತ್ತದೆ.
ಹೌದು ಎಲ್ಲರಿಗೂ ತಿಳಿದಿರುವಂತೆ ಕೊನೆಗೆ ಉಧಮ್ ಗೆ ನೇಣಿಗೆ ಹಾಕಲಾಗುತ್ತದೆ.
ಆದರೆ ಅದಕ್ಕಿಂತ ಮುಂಚೆ ಬ್ರಿಟಿಷ್ ಅಧಿಕಾರಿಗೆ ಉಧಮ್ ಹೀಗೆ ಹೇಳುತ್ತಾನೆ..
- " ನನಗೆ 18 ತುಂಬಿದಾಗ ನನ್ನ ಗುರುಗಳು ಹೇಳಿದ್ದರು,ಮಗು.. ಯೌವನ ಎಂಬುದು ಭಗವಂತ ಕೊಟ್ಟ ಉಡುಗೊರೆ.ಆದರೆ ಅದನ್ನು ಹಾಗೇ ಹೋಗಲು ಬಿಟ್ಟು ಬಿಡುತ್ತಿಯೋ ಅಥವಾ ಅದಕ್ಕೊಂದು ಅರ್ಥ ಬರುವಂತೆ ಮಾಡುತ್ತಿಯೋ ಎಂಬುದು ನಿನ್ನ ಕೈಯಲ್ಲಿಯೇ ಇದೆ.
ನಾನು ಕೇಳುತ್ತೇನೆ..ಹೌದು ಮೇಲೆ ಹೋಗಿ ಅವರನ್ನು ಅವಶ್ಯವಾಗಿ ಕೇಳುತ್ತೇನೆ..ನನ್ನ ಯೌವನಕ್ಕೆ ಈಗ ಏನಾದರೊಂದು ಅರ್ಥ ಸಿಕ್ಕಿದೆಯೇ ಗುರುಗಳೇ ಅಥವಾ ಅದು ಹಾಗೇ ವೇಸ್ಟ್ ಆಗಿ ಹೋಯಿತೇ ಎಂದು! "
#Sardar_Udham | Prime
Hindi Movie
Biographical Historical Drama
Release - 16 October 2021
#Movies
Ab Pacchu
Comments
Post a Comment