Squid Game




#Squid_Game | Netflix


ಕೆಲವರಿಗೆ ಆಟ ಆಡುವುದರಲ್ಲಿ ಸುಖ ಇದೆ,

ಇನ್ನು ಕೆಲವರಿಗೆ ಅದನ್ನು ನೋಡುವುದರಲ್ಲಿ.


ಕೆಲವೊಂದು ಆಟದಲ್ಲಿ ಆಡುವವನು ಹಣ ಗಳಿಸುತ್ತಾನೆ,

ಇನ್ನು ಕೆಲವೊಂದರಲ್ಲಿ ಆಟ ನೋಡುವವನು ಕೂಡ!! 


ಹೆಸರಿಗೆ ತಕ್ಕಂತೆ ಈ ಸಿರೀಸ್ ನಲ್ಲಿ ಆಟ ಇದೆ.


ಒಂದಲ್ಲ ನಾಲ್ಕೈದು ಆಟಗಳಿವೆ.


ಅದೂ ಕೂಡ ಅಂತಿಂಥ ದೊಡ್ಡ ಆಟವೇನೂ ಅಲ್ಲ.


ಜಸ್ಟ್ ಮಕ್ಕಳು ಆಡುವ ಬಾಲ್ಯ ಕಾಲದ ಆಟಗಳು!


ಗೋಲಿಯಾಟ,ಕುಂಟೆ ಬಿಲ್ಲೆಯಂತಹ ಆಟ,ರನ್ ಆಂಡ್ ಸ್ಟ್ಯಾಚ್ಯು ನಂತಹ ಆಟ ಇತ್ಯಾದಿ ಇತ್ಯಾದಿ..


ಆದರೆ ಇಲ್ಲಿ ಆಟ ಮಕ್ಕಳು ಆಡುವುದಿಲ್ಲ! 


ದೊಡ್ಡವರು ಆಡುತ್ತಾರೆ. 


ಆದರೆ ಖಂಡಿತವಾಗಿಯೂ ಮಕ್ಕಳಂತೆಯೇ ಆಡುತ್ತಾರೆ. 


ಅಷ್ಟಾಗಿ ಬಿಟ್ಟರೆ ಹೇಗೆ ಈ ಸಿರೀಸ್,ಇದರಲ್ಲಿನ ಆಟ  ಅಷ್ಟೊಂದು ಇಂಟ್ರೆಸ್ಟಿಂಗ್ ಅನ್ನಿಸುತ್ತದೆಯಾ?


ಕೇಳಬೇಕಾದ ಪ್ರಶ್ನೆ ಇದು. 


ಆದರೆ ಇಂಟ್ರೆಸ್ಟಿಂಗ್ ಇದೆ.


ಇಂಟ್ರೆಸ್ಟಿಂಗ್ ಹುಟ್ಟಿಸುತ್ತಾ ಹೋಗುತ್ತದೆ. 


ಸ್ವಲ್ಪ ಅಲ್ಲ.. ತುಂಬಾ! 





ನೋಡುಗನಿಗೆ ಬೇಕಾದ ಕುತೂಹಲ,ಥ್ರಿಲ್ ಎಲ್ಲವನ್ನೂ ಆಟದ ಫಲಿತಾಂಶ ನಿರ್ಧರಿಸುತ್ತದೆ. 


ಒಬ್ಬ ಗೆದ್ದರೆ ಮತ್ತೊಬ್ಬ ಸೋಲಬೇಕು. 


ಇಲ್ಲಿ ಗೆದ್ದವನಿಗಿಂತಲೂ ಸೋತವನು ನಿಮಗೆ ಹೆಚ್ಚು ಕುತೂಹಲ ಮೂಡಿಸುತ್ತಾನೆ,ಥ್ರಿಲ್ ಕೊಡುತ್ತಾನೆ! 


ಏಕೆ? 


ಏಕೆಂದರೆ ಸೋತವನು ದಂಡ ತೆರಬೇಕಾಗುತ್ತದೆ. 


ಏನು? 


ಪ್ರಾಣ!!! 


ಇದೊಂದು ಕೊರಿಯನ್ ಡ್ರಾಮ,ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಸೌತ್ ಕೊರಿಯನ್ ಸರ್ವೈವಲ್ ಡ್ರಾಮ. Squid game ಇದು ಒಂದು ಕೊರಿಯನ್ ನ ಮಕ್ಕಳ ಆಟ.ಆ ಆಟ ಕೂಡ ಇದರೊಳಗಿನ ಒಂದು ಭಾಗ.ಆಂಗ್ಲ ಭಾಷೆಯಲ್ಲಿ Round Six ಎಂದು ಈ ಸಿರೀಸ್ ಗೆ ಹೆಸರಿಟ್ಟುಕೊಂಡಿದ್ದಾರೆ. Hwang Dong-hyuk ನಿರ್ದೇಶನದ ಈ ಸಿರೀಸ್ ನಲ್ಲಿ Lee Jung-jae ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾನೆ. 



ಮೊದಲಿನಿಂದ ಕೊನೆಯ ಎಪಿಸೋಡ್ ತನಕವೂ ಒಂಚೂರು ರೋಚಕತೆ ಕಡಿಮೆಯಾಗದ ಈ ಸಿರೀಸ್ ನಲ್ಲಿ ಸಸ್ಪೆನ್ಸ್,ಥ್ರಿಲ್, ಆಕ್ಷ್ಯನ್ ಹಾಗೂ ಆಟಗಳನ್ನು ಬಿಟ್ಟು ಕೂಡ ಗಮನ ಹರಿಸಬಹುದಾದ ಒಂದಿಷ್ಟು ಅಂಶಗಳಿವೆ. 


ಮನುಷ್ಯ ಮನುಷ್ಯನಿಗೆ ಸಹಜವಾಗಿ ಸಹಾಯ ಮಾಡುತ್ತಾನೆ.


ಆದರೆ ಎಲ್ಲಿಯವರೆಗೆ? 


ತನ್ನ ಜೀವನಕ್ಕೆ,ತನ್ನ ಜೀವಕ್ಕೆ ಅಪಾಯ ಇಲ್ಲ ಎನ್ನುವವರೆಗೂ ಎಲ್ಲಾ ಮನುಷ್ಯರು ಒಳ್ಳೆಯವರೇ. 


ಎಷ್ಟೇ ಒಳೆಯ ಮನುಷ್ಯ ಕೂಡ ಕೆಲವೊಮ್ಮೆ ಬಣ್ಣ ಬಳಿದುಕೊಂಡೇ ಜೀವಿಸುತ್ತಾನೆ.ಅವನು ಏನೆಂದು ಅವನಿಗಷ್ಟೇ ಗೊತ್ತಿರುತ್ತದೆ.


ಆದರೆ ಅವನ ಅಸಲಿ ಬಣ್ಣ ಹೊರ ಬೀಳುವುದು ಅಂತಹದ್ದೊಂದು ಕಠಿಣ ಸಂದರ್ಭ ಅವನೆದುರು ಬಂದು ನಿಂತಾಗ ಮಾತ್ರ.ಒಂದು ವೇಳೆ ಬರದೇ ಇದ್ದರೆ ಅವನು ಕೊನೆಯವರೆಗೂ ಒಳ್ಳೆಯವನೇ! 


ಇಲ್ಲಿ ಆಟಗಳ ಮೂಲಕ ಅಂತಹ ಘಟನೆಗಳನ್ನು ಮುಖಾಮುಖಿ ಮಾಡಿಸುತ್ತಾರೆ... ಒಳ್ಳೆಯವನು ಒಮ್ಮೆಲೇ ಕೆಟ್ಟವನಾಗುತ್ತಾನೆ,ಅದೇ ಕೆಟ್ಟವಳಂತೆ ಕಾಣುವವಳು ಅದೆಷ್ಟು ಒಳ್ಳೆಯವಳು! 


ಒಳ್ಳೆಯತನ,ಮನುಷ್ಯತ್ವ,ತ್ಯಾಗ .. ಮೂರು ಕೂಡ ಒಂದೆಯಾ ಅಥವಾ ಅದೂ ಕೂಡ ಸಮಯ ಸಂದರ್ಭಕ್ಕೆ ತಕ್ಕಂತೆ ತನ್ನ ವ್ಯಾಖ್ಯಾನ ಬದಲಾಯಿಸಿ ಬಿಡುತ್ತದೆಯೇ?! 


ಜೀವನದಲ್ಲಿ ಏನೂ ಇರದಿದ್ದರೆ ಆಗ ಅದು ತೀರಾ ಶೂನ್ಯದಂತೆ ಕಾಣುತ್ತದೆ... ಒಂದು ವೇಳೆ ಜಗತ್ತಿನ ಎಲ್ಲವೂ ನಮ್ಮ ಬಳಿಯೇ ಇದ್ದು ಬಿಟ್ಟರೂ ಆಗ ಅದು ಎಲ್ಲದಕ್ಕಿಂತಲೂ ಹೆಚ್ಚಿನ ಪರಮ ಬೋರಿಂಗ್!


ಯಾವುದು ಬೆಟರ್.. ಶೂನ್ಯದ ಜೀವನ ಅಥವಾ ಬೋರಿಂಗ್ ಬಾಳು?


ಅದರೆಲ್ಲದರ ನಡುವಿನ ಆಟ ಈ Squid Game! 


ನೀವು ನೋಡಿದಂತೆ ಈ ಸಿರೀಸ್ ನಿಮ್ಮದಾಗುತ್ತದೆ.ಎಲ್ಲರಿಗೂ ಇಷ್ಟವಾಗಬೇಕಿಲ್ಲ,ನನಗೆ ಇಷ್ಟವಾಯಿತು.. 




#Squid_Game | Netflix 

English Series 

Korean Drama(Thriller,Survival)

Release -  17  September 2021.


#Series 

Ab Pacchu

Comments

Popular posts from this blog

ಗಗನದ ಸೂರ್ಯ

ಬಿಡುಗಡೆ!

ಭಕ್ತಿಯ ಜೊತೆಗೆ ಭಯವೂ ಇರಲಿ..