Chhorii

 #Chhorii  | Prime





ಅವಳು ತುಂಬು ಗರ್ಭಿಣಿ ಹಾಗೂ ನಗರದ ಹುಡುಗಿ.


ಒಂದು ದಿನ ಸಿಟಿಯಿಂದ ಗಂಡನೊಡನೆ ಹಳ್ಳಿಯಲ್ಲಿರುವ ಆ ಒಂದು ದೊಡ್ಡ ಕಬ್ಬಿನಗದ್ದೆಯ ನಡುವಿನ ಒಂಟಿ ಮನೆಗೆ ಆಕೆ ಬರುತ್ತಾಳೆ.


ಅಲ್ಲಿಯ ವಿಚಿತ್ರ ಹೆಂಗಸು ಆ ಗರ್ಭಿಣಿ ಹುಡುಗಿಗೊಂದು ಕಥೆ  ಹೇಳುತ್ತಾಳೆ.


ಆ ಕಥೆ ಹೀಗಿದೆ...


" ಒಂದು ಸಣ್ಣ ಹಳ್ಳಿಯಲ್ಲಿ ಒಂದು ದೊಡ್ದ ಮರವಿತ್ತು. 


 ಆ ಮರದಲ್ಲಿ ಒಂದು ಕಾಗೆಗಳ ಸುಖಿ ಪರಿವಾರವೂ ಇತ್ತು. 


ಎಲ್ಲವೂ ಸರಿ ಇತ್ತು ಮತ್ತು ಕಾಗೆಗಳು ಕೂಡ ಆ ಮರದಲ್ಲಿ ಬಹಳ ಸಂತೋಷವಾಗಿದ್ದವು. 


ಒಂದು ದಿನ ಒಂದು ವಿಷಯುಕ್ತ ಹಾವು ಆ ಮರಕ್ಕೆ ಬಳ್ಳಿಯಂತೆ ಹಾಗೇ ಶಾಶ್ವತವಾಗಿ ಸುತ್ತಿ ಹಾಕಿಕೊಂಡು ಬಿಟ್ಟಿತ್ತು. 


ನೋಡು ನೋಡುತ್ತಿದ್ದಂತೆ ಮರದ ಎಲೆಗಳು ಬಾಡಿದವು. 


ಅದರ ಹಣ್ಣುಗಳು ಕೂಡ ಉದುರಿದವು. 


ದಿನ ಕಳೆದಂತೆ ವಿಧವೆಯ ಭವಿಷ್ಯದಂತೆ ಆ ಮರವೂ ಕೂಡ  ಒಣಗತೊಡಗಿತು..! 


ಕಾಗೆ ಪ್ರತೀ ಬಾರಿ ಮೊಟ್ಟೆ ಇಟ್ಟಾಗಲೂ ಆ ವಿಷಕಾರಿ ಹಾವು ಬಂದು ಕಾಗೆಯ ಮೊಟ್ಟೆಗಳನ್ನು ನುಂಗಿ ಹಾಕುತ್ತಿತ್ತು. 


ಕಾಗೆಗೆ ಇದನ್ನು ನೋಡಿ ದಿಕ್ಕು ತೋಚದಂತಾಯಿತು. 


ಇದೇ ಸಂಧರ್ಭದಲ್ಲಿ ಆ ಪಾಳು ಮರಕ್ಕೆ ಒಂದು ಚಂದದ  ಗುಬ್ಬಿಯ ಸುಂದರ ಸಂಸಾರ ಬಂದು ನೆಲೆಸಿತು. 


ಗುಬ್ಬಿ ಆ ಮರದ ಮೇಲೊಂದು ತನ್ನ ಪುಟ್ಟ ಗೂಡು ಕೂಡ ಕಟ್ಟಿಕೊಂಡಿತು.


ಒಂದು ದಿನ ಅದು ಮೊಟ್ಟೆ ಕೂಡ ಇಟ್ಟಿತು. 


ಅದನ್ನು ನೋಡಿದ ಕಾಗೆಗೆ ಒಂದು ಉಪಾಯ ಹೊಳೆಯಿತು. 


ಸಮಯ ಸಂಧರ್ಬ ನೋಡಿಕೊಂಡು ತನ್ನ ಗೂಡಿನಲ್ಲಿದ್ದ ಮೊಟ್ಟೆಗಳನ್ನು ಮೆಲ್ಲಗೆ ಗುಬ್ಬಿಯ ಗೂಡಿನಲ್ಲಿ ಕಾಗೆ ಇಟ್ಟಿತು.


ಅದೇ ರೀತಿ ಗುಬ್ಬಿಯ ಗೂಡಿನಲ್ಲಿದ್ದ ಮೊಟ್ಟೆಗಳನ್ನು ತನ್ನ ಗೂಡಿನಲ್ಲಿ ಇಟ್ಟು ಬಿಟ್ಟಿತು. 


ಎಂದಿನಂತೆ ಹಾವು ಕಾಗೆಯ ಗೂಡಿಗೆ ಮತ್ತೆ ದಾಳಿ ಮಾಡಿತು ಮತ್ತು ಕಾಗೆಯ ಮೊಟ್ಟೆಗಳನ್ನು ನುಂಗಿ ಬಿಟ್ಟಿತು. 


ಸ್ವಲ್ಪ ಸಮಯದ ನಂತರ ಗುಬ್ಬಿಯ ಗೂಡಿನಲ್ಲಿದ್ದ ಕಾಗೆಯ ಮೊಟ್ಟೆಯಿಂದ ಮೊದಲ ಬಾರಿಗೆ ಕಾಗೆಯ ಮರಿಯೊಂದು ಜನ್ಮ ತಾಳಿತು.


ಎಷ್ಟೋ ವರ್ಷಗಳ ನಂತರ ಕಾಗೆಯ ಪರಿವಾರದಲ್ಲಿ ನೆಮ್ಮದಿ ಮನೆ ಮಾಡಿತು. 


ಹಾಗೂ ಆ ಮರದಲ್ಲಿ ಕಾಗೆಯ ಸುಖ ಶಾಂತಿ ನೆಲೆಸಿತು....!  "


ಇಷ್ಟು ಹೇಳಿ ಈ ಕಥೆಯನ್ನು ಇಲ್ಲಿಗೆ ನಿಲ್ಲಿಸುತ್ತಾಳೆ ಆ ವಿಚಿತ್ರ ಹೆಂಗಸು.!! 


ಹಾಗಾದರೆ ಹೆಂಗಸು ಹೇಳಿದ ಮೇಲಿನ ಈ ಕಥೆಗೂ,ನಗರದಿಂದ ಬಂದಂತಹ ಆ ಗರ್ಭಿಣಿ ಹುಡುಗಿಯ ಮುಂದಿನ ಕಥೆಗೂ ಏನಾದರೂ ಸಂಬಂಧ ಇದೆಯೇ??


ನಿಜವಾಗಿಯೂ ಆ ಕಬ್ಬಿನ ಗದ್ದೆಯ ನಡುವೆ ಪಾಳು ಬಿದ್ದಿರುವ ಆ ಮನೆಯಲ್ಲಿ ಗರ್ಭಿಣಿ ಹುಡುಗಿಯ ಕಥೆ ಮುಂದೇನಾಗುತ್ತದೆ?! 





ಈ ಹಾರರ್ ಮೂವಿಯನ್ನು Vishal Furia ನಿರ್ದೇಶಿಸಿದ್ದು Nushrratt Bharuccha ಮತ್ತು Mita Vashisht ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾಳೆ.ಅಂದ ಹಾಗೆ ಇದು 2017 ರಲ್ಲಿ ಬಂದಂತಹ ಮರಾಠಿ ಮೂವಿ Lapachhapi ಯ ರಿಮೇಕ್ ಅಂತೆ.Lapachhapi ನೋಡವರು ಇದನ್ನು ಖಂಡಿತವಾಗಿಯೂ ನೋಡಬಹುದು. 



ಈ ಹಾರರ್ ಕಥೆಯಲ್ಲಿ ಒಂದು ಬೇರೆಯದ್ದೇ ಆದ ಕರಾಳ ಕಥೆ ಹಾಗೂ ಸಮಾಜಿಕ ಕಳಕಳಿಯ ಸಂದೇಶವೂ ಇದೆ.ಅದಕ್ಕಾಗಿಯೇ ಇದನ್ನು ನೀವು ನೋಡಬೇಕು.ಖಂಡಿತವಾಗಿಯೂ ಈ ಮೂವಿ ನಿಮ್ಮನ್ನು ಒಂದಿಷ್ಟು ಹೆದರಿಸಬಲ್ಲದು.ದೊಡ್ಡ ನಟರು ಇರದಿದ್ದರೂ Nushrratt Bharuccha ಮತ್ತು Mita Vashisht ಅಧ್ಬುತ ಅಭಿನಯ ,ವಿಭಿನ್ನ ಸ್ಟೋರಿ ಟೆಲ್ಲಿಂಗ್ ಟೆಕ್ನಿಕ್,ಕಥೆಗೆ ಹೊಂದುವ ಸಿನಿಮಾಟೋಗ್ರಫಿ ಹಾಗೂ ಹಾರರ್ ಮೂವಿಗೆ ಇರಬೇಕಾದ ಬ್ಯಾಕ್ಗ್ರೌಂಡ್ ಸ್ಕೋರ್ಎ ಲ್ಲವೂ ಇಲ್ಲಿ ಚೆನ್ನಾಗಿದೆ.ಇಷ್ಟವಾಯಿತು.Horror Genre ಯನ್ನು ಅತಿಯಾಗಿ ಇಷ್ಟ ಪಡುವವರಿಗೆ ಇದು ಕೂಡ ಇಷ್ಟವಾಗಬಹುದು..



#Chhorii | Prime 

Hindi Movie 

Horror 

Release - November 2021

Comments

Popular posts from this blog

ಗಗನದ ಸೂರ್ಯ

ಬಿಡುಗಡೆ!

ಭಕ್ತಿಯ ಜೊತೆಗೆ ಭಯವೂ ಇರಲಿ..