Doctor

 #Doctor | Netflix





ಇದೊಂದು ಬಹಳ ಮಜವಾದ ಮೂವಿ.ಚಂದದ ಕಾಮಿಡಿ ಇದರಲ್ಲಿ ಉಂಟು.ನೀವು ಕಾಮಿಡಿ ಮೂವಿಗಳನ್ನು ನೋಡಲು  ಇಷ್ಟಪಡುವಿರಾದರೆ ಖಂಡಿತವಾಗಿಯೂ ಇದನ್ನು ಮಿಸ್ ಮಾಡಿಕೊಳ್ಳಬೇಡಿ ಆಯ್ತಾ.ನಕ್ಕು ನಕ್ಕು ಹಾಗೇ ಮನಸ್ಸು ಬಹಳಷ್ಟು ಹಗುರವಾಗಿ ಬಿಡುತ್ತದೆ.ತಕ್ಕ ಮಟ್ಟಿಗೆ ಮೂಡ್ ರಿಫ್ರೆಶ್ ಕೂಡ ಮಾಡಿ ಬಿಡಬಲ್ಲದು.ಇಲ್ಲಿರುವ ಕಚಗುಳಿ ಇಡುವ ಸಂಭಾಷಣೆಗಳು,ಕೆಲವೊಂದು ಪಾತ್ರಗಳು ತುಂಬಾನೇ  ಇಷ್ಟವಾಗುತ್ತದೆ.ಕಥೆ ಸಾಗಿದಂತೆ ಏನೇನೋ ಲೆಕ್ಕಚಾರ ಎಲ್ಲಾ ಮಾಡ್ಲಿಕ್ಕೆ ಹೋಗ್ಬೇಡಿ,ಅದರ ಬದಲು ಸುಮ್ಮನೆ ನೋಡುತ್ತಾ ಹೋಗಿ ಪಾತ್ರಗಳು ನಗಿಸುವಾಗ ಹಾಗೇ ಮನಸ್ಸು ಬಿಚ್ಚಿ ನಕ್ಕು ಬಿಡಿ.ಇಂತಹ ಮೂವಿಗಳನ್ನು ಹೆಚ್ಚಾಗಿ ಹೀಗೆಯೇ ನೋಡುವುದರಿಂದ ಬಹಳಷ್ಟು ಸುಖವಿದೆ. 


ನೆಲ್ಸನ್ ದಿಲೀಪ್ ಕುಮಾರ್ ಇದನ್ನು ನಿರ್ದೇಶಿಸಿದ್ದು ಶಿವಕಾರ್ತಿಕೇಯನ್,ಪ್ರಿಯಾಂಕಾ ಅರುಲ್ ಮೋಹನ್,ಯೋಗಿ ಬಾಬು ಮುಂತಾದವರ ನಟನೆ ಇಲ್ಲಿ ಇದ್ದು,ಎಲ್ಲರೂ ಹೊಟ್ಟೆ ಹುಣ್ಣಾಗಿಸುವ ಅಭಿನಯವನ್ನೇ ಇದರಲ್ಲಿ ಮಾಡಿದ್ದಾರೆ.ನನಗೆ ಕಾಮಿಡಿ,ಡಾರ್ಕ್ ಕಾಮಿಡಿ ಮೂವಿಗಳು ಬಹಳನೇ  ಇಷ್ಟ,ಹಾಗಾಗಿ ಇದು ಇಷ್ಟವಾಯಿತು.ಎಲ್ಲರಿಗೂ ಇಷ್ಟ ಆಗಬೇಕಾಗಿಯೂ ಇಲ್ಲ.ಒಬ್ಬೊಬ್ಬರ ರುಚಿ ಅಭಿರುಚಿ ಒಂದೊಂದು ರೀತಿ.ಆದರೂ ನೋಡಿ,ನಿಮಗೆ ಇಷ್ಟ ಆದರೂ ಆಗಬಹುದು.


#Doctor | Netflix

Tamil Movie

Comedy/Action 

Release - October 2021


Movies 

ab pacchu

Comments

Popular posts from this blog

ಗಗನದ ಸೂರ್ಯ

ಬಿಡುಗಡೆ!

ಭಕ್ತಿಯ ಜೊತೆಗೆ ಭಯವೂ ಇರಲಿ..