Judas and the black messiah

#Judas_and_the_Black_Messiah | Prime



ಇದೊಂದು ಐತಿಹಾಸಿಕ ಘಟನೆ ಆಧಾರಿತ ಮೂವಿ.1960 ರಲ್ಲಿ ಚಿಕಾಗೊದಲ್ಲಿ ಬ್ಲ್ಯಾಕ್ ಪ್ಯಾಂಥರ್ ಪಾರ್ಟಿಯ ಚೇರ್ಮ್ಯಾನ್  ಆಗಿದ್ದ ಫ್ರೆಡ್ ಹ್ಯಾಂಪ್ಟನ್ ನನ್ನು ಅವನ ಪಾರ್ಟಿ ಸದಸ್ಯನನ್ನೇ ಅಂಡರ್ ಕವರ್ ಏಜೆಂಟ್ ರೀತಿ ಬಳಸಿಕೊಂಡು FBI ಹೇಗೆ ಬಲೆ ಬೀಸಿ ಬಲಿ ಪಡೆಯುತ್ತದೆ ಎನ್ನುವುದೇ ಇದರ ಒಂದು ಕಥೆ.


ಇದನ್ನು ಫ್ರೆಡ್ ಹ್ಯಾಂಪ್ಟನ್ ನ ಬಯೋಪಿಕ್ ಎಂದು ಹೇಳಲು ಕೂಡ ಅಡ್ಡಿಯಿಲ್ಲ.ಅಮೇರಿಕಾದಲ್ಲಿ ನಡೆದ ಕರಿಯರ ಬಿಳಿಯರ ವರ್ಣ ಸಂಘರ್ಷ,ಕಪ್ಪು ವರ್ಣದವರ ಪರ ನಿಲ್ಲುವ 'ಬ್ಲ್ಯಾಕ್ ಪ್ಯಾಂಥರ್ ಪಾರ್ಟಿ',ತಮ್ಮ ಹಕ್ಕುಗಳಿಗಾಗಿ ಸದಾ ಸರಕಾರ ಹಾಗೂ FBI ಯನ್ನು ವಿರೋಧಿಸುವ ಈ ಪಾರ್ಟಿಯ ನಿರಂತರ ಯೋಜನೆ ಹಾಗೂ ಚಟುವಟಿಕೆಗಳಿಂದಲೇ ಈ ಮೂವಿ ಆವೃತವಾಗಿದೆ.




Shaka King ನಿರ್ದೇಶನದ ಈ ಮೂವಿಯಲ್ಲಿ Daniel Kaluuya, Lakeith Stanfield ಹಾಗೂ Jesse Plemons ನವರ ಬಹಳ ಸೊಗಸಾದ ಅಭಿನಯವಿದೆ.Daniel Kaluuya ನ ಮಜವಾದ ಮಾತುಗಳು ಕೂಡ ಅಷ್ಟೇ ಇಷ್ಟವಾಗುತ್ತದೆ ಮಾತ್ರವಲ್ಲ ಆತ ತನ್ನದೊಂದು ಈ ಅಭಿನಯಕ್ಕಾಗಿ ವಿಶ್ವದೆಲ್ಲೆಡೆ ಬಹಳಷ್ಟು ಪ್ರಶಂಸನೆಗೆ ಪಾತ್ರನಾಗಿದ್ದಾನೆ ಮತ್ತು ಬೆಸ್ಟ್ ಸಪೋರ್ಟಿಂಗ್ ಆಕ್ಟರ್ ಗಾಗಿ ಅಕಾಡೆಮಿ ಆವಾರ್ಡ್ ಅನ್ನು ಕೂಡ ಗೆದ್ದಿದ್ದಾನೆ. 





ಈ ಮೂವಿ ಕೂಡ ಹೆಚ್ಚಿನ ಜನರ ಮೆಚ್ಚುಗೆಯನ್ನು  ಪಡೆದುಕೊಂಡಿದೆ.The Trial of the chicago 7(Netflix) ನೀವು ನೋಡಿದ್ದರೆ,ಅದು ನಿಮಗೆ ಇಷ್ಟ ಆಗಿದ್ದರೆ ಇದನ್ನು ಕೂಡ ನೋಡಬಹುದು.ಏಕೆಂದರೆ ಈ ಎರಡೂ ಕಥೆಗಳು ಒಂದೇ ಕಾಲಾವಧಿಯಲ್ಲಿ ನಡೆದಂತವುಗಳು ಮಾತ್ರವಲ್ಲ ಒಂದಕ್ಕೊಂದು ಸಂಬಂಧಿಸಿದವುಗಳು. 


#Judas_and_the_Black_Messiah | Prime 

English Movie 

Biographical Drama 

Release - Feb 2021


Movies

Ab Pacchu

Comments

Popular posts from this blog

ಗಗನದ ಸೂರ್ಯ

ಬಿಡುಗಡೆ!

ಭಕ್ತಿಯ ಜೊತೆಗೆ ಭಯವೂ ಇರಲಿ..