Kammatipaadam

 #Kammatipaadam | Hotstar




ಅವರಿಬ್ಬರು ಹುಟ್ಟುತ್ತಾ ಅಣ್ಣ ತಮ್ಮಂದಿರಲ್ಲ.

ಬೆಳೆಯುತ್ತಾ ಒಂದು ರೀತಿಯಲ್ಲಿ ಹೌದು.


ಸ್ನೇಹ ಅವರನ್ನು ಬಹಳ ಚಿಕ್ಕಂದಿನಲ್ಲಿಯೇ ಬೆಸೆದಿತ್ತು.ಕ್ರೈಮು ಮಾತ್ರ ಅವರ ನಡುವಿನ ಆ ಬೆಸುಗೆಯನ್ನು ಮತ್ತಷ್ಟು ಬಲಪಡಿಸಿತ್ತು!


ಸ್ಮಶಾನದೊಳಗೊಂದು ಹೂವು,ಕ್ರೈಮ್ ನೊಳಗೊಂದು ಲವ್ವು ನೋಡಲು ಆಕರ್ಷಕವೇ,ಆದರೆ ಯಾರಿಗೂ ಬೇಡ!!


ಒಟ್ಟೊಟ್ಟಿಗೆ ಇದ್ದವರು ಇದ್ದಕ್ಕಿದ್ದಂತೆ ದೂರ ಆದರೆ ಅಲ್ಲಿಂದಲೇ  ಮತ್ತೊಂದು ಹೊಸ ಕಥೆ ಚಿಗುರಿಕೊಂಡು ಬಿಡುತ್ತದೆ.


ಇಲ್ಲೂ ಅಂತಹದ್ದೇ ಒಂದು ಕಥೆ ಇದೆ. 


ಏನದು? 



Rajeev Ravi ನಿರ್ದೇಶನದ ಈ ಮೂವಿಯಲ್ಲಿ Dulquer Salmaan, Vinayakan, Shine Tom Chacko, Shaun Romy ಮುಂತಾದವರ ಅಭಿನಯವಿದೆ. 


ಹೊಡೆದಾಟ ಬಡಿದಾಟದ ಇರುವ ಇದು ಬರೀ ಗ್ಯಾಂಗ್ಸ್ಟರ್ ಕಥೆಯಲ್ಲ.ರಿಯಲ್ ಎಸ್ಟೇಟ್ ಮಾಫಿಯಾದಲ್ಲೊಂದು ಭೂಮಿಗಾಗಿ ಕೆಳ ವರ್ಗದವರ ಶೋಷಣೆ,ಅವರನ್ನು ಬಳಸಿಕೊಂಡು ಅವರನ್ನೇ  ಹೊಸಕಿ ಹಾಕುವ ಪರಿ,ಚಡ್ಡಿ ದೋಸ್ತಿಗಳಾಗಿ ಬೆಳೆದವರು ಚಾಕು ಚೂರಿ ಹಿಡಿದು ನೆತ್ತರು ಹರಿಸುವಾಗಲೂ ಬಹಳಷ್ಟು ದೋಸ್ತಿಯೇ,ನಡುವಲ್ಲೊಂದು ತೀರಾ ಅನಾಥವಾಗುವ ಪ್ರೀತಿ..ಹೀಗೆ ಬಹಳಷ್ಟು ಕಥೆಗಳನ್ನು ಇದು ಹೇಳುತ್ತಾ ಹೋಗುತ್ತದೆ.ದಕ್ಕಿದಷ್ಟು ನಮ್ಮದು!

80 ರ ದಶಕದ ಕಥೆ ಹೊಂದಿರುವ ಇದು ನಿಮಗೆ ಇಷ್ಟ ಆದರೂ ಆಗಬಹುದು,ಎಂದಿನಂತೆ ಎಲ್ಲರಿಗೂ ಅಲ್ಲ..



#Kammatipaadam | Hotstar 

Malayalam Movie 

Action Drama 

Release - 2016

Comments

Popular posts from this blog

ಗಗನದ ಸೂರ್ಯ

ಬಿಡುಗಡೆ!

ಭಕ್ತಿಯ ಜೊತೆಗೆ ಭಯವೂ ಇರಲಿ..