Peaky Blinders

 #Peaky_Blinders | Netflix




ಅವರೇನು ಸಮಾಜ ಉದ್ಧಾರ ಮಾಡುವುದಕ್ಕಾಗಿ ಗ್ಯಾಂಗ್ ಕಟ್ಟಿಕೊಂಡವರಲ್ಲ.


ಬರ್ಮಿಂಗ್ಹ್ಯಾಮ್ ನ ಬೀದಿಗಳಲ್ಲಿ ಮೈ ತುಂಬಾ ಚಂದದೊಂದು ಸೂಟು,ಕಾಲಿಗೆ ಲೆದರ್ ಬೂಟು,ತಲೆಗೊಂದು ಪ್ಲ್ಯಾಟ್  ಕ್ಯಾಪು,ಕ್ಯಾಪ್ ನೊಳಗೊಂದು ಹರಿತವಾದ ರೇಝರ್ ಬ್ಲೇಡು ಸಿಕ್ಕಿಸಿಕೊಂಡು ಒಂದರ ನಂತರ ಒಂದು ಸ್ಟ್ರೀಟ್ ಪೈಟ್ ಗಳನ್ನು ಮಾಡಿಕೊಂಡು ವಿರೋಧಿಗಳ ನೆತ್ತರ ಹೊಳೆಯನ್ನೇ  ಹರಿಸಿಕೊಂಡು ಬೆಳೆದ ಆ ಫ್ಯಾಮಿಲಿ ಗ್ಯಾಂಗಿನ ಹೆಸರೇ Peaky blinders. 


' By order of the Peaky Plinders' ಎಂದು ಹೇಳುತ್ತಾ  ಅದೇ ಹೆಸರಿನಲ್ಲಿಯೇ ಪುಟ್ಟ ಕಂಪೆನಿಯೊಂದನ್ನು ಕೂಡ ಕಟ್ಟುತ್ತಾ,ಯಾರ ಊಹೆಗೂ ನಿಲುಕದಂತೆ ದೈತ್ಯವಾಗಿ ಬೆಳೆಯುತ್ತಾ ಬೆಳೆಯುತ್ತಾ ಹೋದ ಆ ಗ್ಯಾಂಗಿನ ನಾಯಕನೇ ಥಾಮಸ್ ಶೆಲ್ಬಿ.ಆ ಶೆಲ್ಬಿ ಫ್ಯಾಮಿಲಿಗೆ,ಅವನ ಹಿಂಬಾಲಕರಿಗೆ ಮಾತ್ರ ಅವನು ಯಾವತ್ತೂ ನೆಚ್ಚಿನ ಟಾಮಿ ಶೆಲ್ಬಿ. 


ಮೊದಲ ವರ್ಲ್ಡ್ ವಾರ್ ನಂತರ ಬ್ರಿಟನ್ ಗೆ ಹಿಂದಿರುಗಿದ ಈ ಸೈನಿಕ ಟಾಮಿ ಅವನ ಪ್ರಕಾರ ಅವನು ಮಾಡಿದ್ದು ಪಕ್ಕಾ ಬ್ಯುಸಿನೆಸ್ ಅಷ್ಟೇ..! 


ನೀನು ಏಕೆ ಜನರನ್ನು ಕೊಲ್ಲುತ್ತೀಯಾ ಎಂದು ಕೇಳಿದರೆ ಅವನ ಉತ್ತರ ಇಷ್ಟೇ ಇರುತ್ತಿತ್ತು  'ಆಗ ಜನರು ನನ್ನ ಮಾತು ಕೇಳುತ್ತಾರೆ..!'.


ಹಾಗಂತ ಅವನು ಎಲ್ಲರನ್ನೂ ಕೊಲ್ಲುತ್ತಿರಲಿಲ್ಲ,ಸ್ಟ್ರೀಟ್ ಫೈಟರ್ ಆದರೂ ತೀರಾ ಲೋಕಲ್ ಗೂಂಡಾ ಅವನಲ್ಲ,ತುಂಬಾ ಓದದಿದ್ದರೂ ಬಹಳ ದಡ್ಡನಲ್ಲ,ಬುದ್ದಿವಂತರಲ್ಲಿ ಬುದ್ಧಿವಂತ ಈ ಟಾಮಿ.ಮಾಡುವ ಕೆಟ್ಟ ಕೆಲಸದಲ್ಲೂ ಅವನದ್ದೊಂದು ಬೇರೆಯೇ ಕ್ಲಾಸ್. 


ಐರಿಷ್ ವಿಸ್ಕಿಯಿಂದ ಸ್ಕಾಚ್,ಸಿಗರೇಟಿನಿಂದ ಹವಾನ ಸಿಗಾರ್, ಕುದುರೆಯಿಂದ ಕಾರುಗಳದ್ದೇ ಕಂಪನಿ,ಜೀವನದ ಓಟದಿಂದ ಕುದುರೆ ರೇಸಿನ ಅಂಗಣ,ಬರ್ಮಿಂಗ್ಹ್ಯಾಮ್ ಒಣ ಬೀದಿಯಿಂದ  ಬ್ರಿಟನ್ ಮೆಂಬರ್ ಆಫ್ ಪಾರ್ಲಿಮೆಂಟ್ ಆಗಿ ಹೌಸ್ ಆಫ್ ಕಾಮನ್ಸ್ ಪ್ರತಿನಿಧಿಸಿ Westminster ನಲ್ಲೊಂದು ಬಿಗಿಯಾದ ಭಾಷಣ ಬಿಗಿಯುವವರೆಗೂ,ಅವನ ಡರ್ಟಿ ಬ್ಯುಸಿನೆಸ್ ನಡುವೆ ಅವನು ಮೈಂಟೆನ್ ಮಾಡಿದ್ದು ಮಾತ್ರ ಪಕ್ಕಾ ಕ್ಲಾಸ್ ಜೀವನವನ್ನೇ.ಅದರಲ್ಲಿ ಮಾತ್ರ ಅವನು ಯಾವತ್ತೂ ರಾಜಿ ಆಗಿದ್ದೇ ಇಲ್ಲ,ಆಗಲು ಬಿಡಲೂ ಇಲ್ಲ. 


ತನ್ನ ಬೆಳವಣಿಗೆಯ ಹಾದಿಗೆ ಅಡ್ಡ ಬಂದವರನ್ನು ಸವರುತ್ತಾ,ಫ್ಯಾಮಿಲಿಯನ್ನು ಪೋಷಿಸುತ್ತಾ,ಅವರ ಕೆಂಗಣ್ಣಿಗೂ ಗುರಿಯಾಗುತ್ತಾ,ತನ್ನದೊಂದು  ಬ್ಯುಸಿನೆಸ್ ಅನ್ನು ಇನ್ನಿಲ್ಲದಂತೆ ಬೆಳೆಸುತ್ತಾ ವಿಸ್ತರಿಸುತ್ತಾ  ಮುನ್ನುಗುವ ಈ ಟಾಮಿ ಶೆಲ್ಬಿ ಅವನದ್ದೊಂದು ಆ ನೀಲಿ ಕಣ್ಣು,ವಿಸ್ಕಿಯಷ್ಟೇ ನಶೆ ಏರಿಸುವ ಆ ಒಗರು ಧ್ವನಿ,ಬಹಳ ಅಪರೂಪ ಎನಿಸುವ ದುಬಾರಿ ನಗು ಹಾಗೂ ಅವನ ಚುರುಕು ಬುದ್ಧಿಗಾಗಿ ಯಾರಿಗೆ ಆಗಲಿ ಅವನು ಬಹಳ ಇಷ್ಟವಾಗಿ ಬಿಡುತ್ತಾನೆ.


ಎಷ್ಟು ಗೆಲ್ಲುತ್ತಾನೋ ಅಷ್ಟೇ ಶತ್ರುಗಳನ್ನು ಕೂಡ ಜೊತೆಗೆಯೇ ಹುಟ್ಟಿಸುತ್ತಾ,ಪ್ರೀತಿಯಲ್ಲೂ ನಡು ನಡುವೆ ಮುಳುಗುತ್ತಾ, ಏಳುತ್ತಾ ತಡವರಿಸುತ್ತಾ,ತನ್ನದೊಂದು ಸಾಮ್ರಾಜ್ಯವನ್ನು ಇನ್ನಷ್ಟು ಮತ್ತಷ್ಟು ಭದ್ರ ಪಡಿಸುತ್ತಾ ಹೋಗುವ ಅವನ ಕಥೆ ಇಲ್ಲಿ ನಿಜಕ್ಕೂ ರೋಚಕವೇ. 


ಅಂದ ಹಾಗೆ ಅವನಿನ್ನೂ ಸಂಪೂರ್ಣವಾಗಿ ಗೆದ್ದಿಲ್ಲ.ಅವನಿಲ್ಲಿ   ಗೆಲ್ಲುತ್ತಾನೋ ಸೋಲುತ್ತಾನೆ ಅಥವಾ ಬೀದಿ ಹೆಣವಾಗಿ ಸಾಯುತ್ತಾನೋ ಅದು ಕೂಡ ಗೊತ್ತಿಲ್ಲ. ಏಕೆಂದರೆ ಈ ಸೀರಿಸ್ ಇನ್ನೂ ಮುಗಿದಿಲ್ಲ.



Steven Knight ನಿರ್ಮಾಣದ ಈ ಸೀರಿಸ್ ನಲ್ಲಿ ಟಾಮಿ ಶೆಲ್ಬಿಯಾಗಿ Cillian Murphy ಯದ್ದು ಬಹಳ ಸೊಗಸಾದ  ಅಭಿನಯ ಇಲ್ಲಿ.ಒಂದೊಂದು ಸೀಸನ್ ನಲ್ಲಿ ಒಂದು ಗಂಟೆಯ 6 ಎಪಿಸೋಡ್ ಗಳಿದ್ದು,ಇಲ್ಲಿಯವರೆಗೆ 5 ಸೀಸನ್ ಗಳು ನಡೆದಿವೆ. ಆರನೆಯ ಹಾಗೂ ಕೊನೆಯ ಸೀಸನ್ ಇನ್ನಷ್ಟೇ ಬರಬೇಕಿದೆ.


1890 ರ ಬ್ರಿಟನ್ ನ ನೈಜ ಕಥೆಯನ್ನೇ ಈ ಗ್ಯಾಂಗ್ಸ್ಟರ್ ಸೀರಿಸ್ ಗೆ ಬಳಸಿಕೊಳ್ಳಲಾಗಿದೆ.ಅಂದ ಹಾಗೆ ಇಲ್ಲಿ ಎಲ್ಲರ ನಟನೆಯೂ  ಚೆನ್ನಾಗಿದೆ.ಇದರ ಸಿನಿಮಾಟೋಗ್ರಫಿ ಕೂಡ ಆ ರೆಟ್ರೋ ದಿನಗಳಿಗೆ ನಮ್ಮನ್ನು ಕರೆದೊಯುತ್ತದೆ.ಸಂಭಾಷಣೆಗಳು ಬಹಳಷ್ಟು ಹರಿತವಾಗಿದೆ.ಸಂಗೀತ ಹಿತವಾಗಿದೆ.ಕೆಲವರಿಗೆ ಈ ಸೀರಿಸ್ ಒಂದು ಮಾಸ್ಟರ್ ಪೀಸ್ ಆದರೆ ಇನ್ನು ಕೆಲವರಿಗೆ ಇದು ಬಹಳಷ್ಟು ಆರ್ಟ್ ಆಂಡ್ ಕ್ರಾಫ್ಟ್ .ಒಟ್ಟಿನಲ್ಲಿ ಎಲ್ಲವೂ ಸಮವಾಗಿ ಹದವಾಗಿ ಬ್ಲೆಂಡ್ ಆಗಿರುವ ಈ ಪೀಕಿ ಬ್ಲೆಂಡರ್ಸ್ ಎಂಬ ಕ್ರೈಮ್ ಆಂಡ್ ಹಿಸ್ಟೋರಿಕಲ್ ಸ್ಕಾಚು ನಿಮಗೂ ಇಷ್ಟ ಆದರೂ ಆಗಬಹುದು,ಆದರೆ ಎಲ್ಲರಿಗೂ ಅಲ್ಲ.



ಬ್ಯಾಕ್ಗ್ರೌಂಡ್ ಸ್ಕೋರ್ ಕೂಡ ತುಂಬಾನೇ ಚೆನ್ನಾಗಿದೆ.ಕಮ್ಮಿ ನಗುವ ಟಾಮಿಗಾಗಿಯೇ ಮೆಲುವಾಗಿ ಕೇಳಿ ಬರುವ 'Red Right Hand' ಎಂಬ ಒಂದು ಹಾಡಿದೆ,ಅದನ್ನು ಜೋರಾಗಿ ನಾವುಗಳು ಕೂಡ ಗುನುಗುವಷ್ಟು ಅದು ಚೆನ್ನಾಗಿದೆ ಮತ್ತು ಬಹಳಷ್ಟು ದಿನ ನೆನಪಿನಲ್ಲಿ ಉಳಿಯುತ್ತದೆ... 


" He's a ghost, he's a god


  He's a man, he's a guru


  You're one microscopic cog

  In his catastrophic plan, 


  Designed and directed by

  His red right hand.......     " 



#Peaky_Blinders | Netflix

English Series

Historical fiction/Crime Drama

Release - 2013 - Present

Comments

Popular posts from this blog

ಗಗನದ ಸೂರ್ಯ

ಬಿಡುಗಡೆ!

ಭಕ್ತಿಯ ಜೊತೆಗೆ ಭಯವೂ ಇರಲಿ..