The Game

 #The_Game | Netflix




ಇಲ್ಲಿ ಒಂದು ಆಟವಿದೆ.ನಿಜವಾಗಿಯೂ ಇದು ಆಟವೇ.ಆದರೆ ಹೊತ್ತು ಸರಿದಂತೆ ಇದು ಆಟವೆಂದು ಅನಿಸುವುದಿಲ್ಲ!

ಸೈನ್ಸ್ ಫಿಕ್ಷನೋ ಎಂಬತೆ ನೋಡುವವನೊಂದಿಗೆ ಫ್ಲರ್ಟ್ ಮಾಡಲಿಳಿಯುವ ಇದರ ಕಥೆ ನಿಜ ಹೇಳಬೇಕೆಂದರೆ ರಿಯಾಲಿಟಿಗೆ ಸಂಬಂಧಿಸಿದ್ದೇ ಆಗಿದೆ.

ಅವನೊಬ್ಬ ಇನ್ವೆಸ್ಟ್ ಮೆಂಟ್ ಬ್ಯಾಂಕರ್.ಅವನಿಗೊಬ್ಬ ತಮ್ಮ. ಬ್ಯಾಂಕರ್ ನ 48 ನೇ ಹುಟ್ಟು ಹಬ್ಬಕ್ಕೆಂದು ಅವನ ತಮ್ಮ ವಿಶೇಷವಾದ ಗಿಫ್ಟ್ ವೋಚರ್ ಒಂದನ್ನು ಅವನಿಗೆ ಕೊಡುತ್ತಾನೆ ಮತ್ತು ಹೇಳುತ್ತಾನೆ'ಇದರಿಂದಾಗಿ ನಿನ್ನ ಬದುಕೇ ಬದಲಾಗುತ್ತದೆ..' ಎಂದು.ಆ ಸ್ಪೆಷಲ್ ವೋಚರ್ ಬ್ಯಾಂಕರ್ ನನ್ನು ಗೇಮ್ ಒಂದರಲ್ಲಿ ಭಾಗವಹಿಸುವಂತೆ ಮಾಡುತ್ತದೆ.ಅವನು ಅದನ್ನು ಆಡಲು ಒಪ್ಪುತ್ತಾನೆ ಕೂಡ.

ನಿಜವಾಗಿಯೂ ಬ್ಯಾಂಕರ್ ನ ಬದುಕೇ ಬದಲಾಗುತ್ತಿದೆ.ಅವನು ಎಲ್ಲವನ್ನೂ ಕಳೆದುಕೊಂಡು ಅಕ್ಷರಶಃ ಬೀದಿ ಬಿಕರಿಯಾಗುತ್ತಾನೆ!!

ಆದರೆ ಏಕೆ?

ಏನದು ಗೇಮ್?

ಮತ್ತು ನಿಜವಾಗಿಯೂ ಅದು ಎಷ್ಟೊಂದು ಗೇಮ್?!!



David Fincher ನಿರ್ದೇಶಿಸಿದ ಈ ಮೂವಿಯಲ್ಲಿ Michael Douglas ಹಾಗೂ Sean Penn ಅಭಿನಯಿಸಿದ್ದಾರೆ.

ಇದೊಂದು ಬ್ರೈನ್ ಟೀಸರ್.ಮೂವಿಯ ಕೊನೆಯವರೆಗೂ ಇದು ಸಿಕ್ಕಾಪಟ್ಟೆ ತಲೆ ಕೆರೆಯುವಂತೆ ಮಾಡಿ ಬಿಡುತ್ತದೆ.ಏಕೆಂದರೆ  ಜಸ್ಟ್ ಗೇಮ್ ಒಂದು ಎಕ್ಸ್ಟ್ರೀಮ್ ಗೇಮ್ ಆಗಿ ಕಥೆಯ ತೀವ್ರತೆಯನ್ನು ಕ್ಷಣ ಕ್ಷಣಕ್ಕೂ ಇಲ್ಲಿ ಎಕ್ಸಲರೇಟ್ ಆಗುವಂತೆ ನೋಡಿಕೊಳ್ಳುತ್ತದೆ.ಈ ಮೂವಿ ಹಳೆಯದಾದರೂ David Fincher ನ ಸಸ್ಪೆನ್ಸ್ ಥ್ರಿಲ್ಲರ್ ಗಳನ್ನು ಅತಿಯಾಗಿ ಇಷ್ಟ ಪಡುವವರಿಗೆ ಇದೂ ಕೂಡ ಅಷ್ಟೇ ಇಷ್ಟವಾಗಬಹುದು..



#The_Game | Netflix
English Movie
Thriller /Mystery
Release - 1997

Movies
Ab Pacchu

Comments

Popular posts from this blog

ಗಗನದ ಸೂರ್ಯ

ಬಿಡುಗಡೆ!

ಭಕ್ತಿಯ ಜೊತೆಗೆ ಭಯವೂ ಇರಲಿ..