The Trial of the chicago 7
ಇದೊಂದು ಕೋರ್ಟ್ ಟ್ರಯಲ್ ನ ಕಥೆ.ಒಟ್ಟು 7 ಜನರ ಮೇಲಿನ ನ್ಯಾಯಾಂಗ ವಿಚಾರಣೆಯ ಈ ಮೂವಿಯ ಕಥೆಯು ಬಹುತೇಕ ಕೋರ್ಟ್ ಹಾಲ್ ನಲ್ಲಿಯೇ ನಡೆದು ಬಿಡುತ್ತದೆ.1968 ರಲ್ಲಿ ಚಿಕಾಗೊದಲ್ಲಿ ನಡೆದ ದೊಂಬಿ ಗಲಾಟೆಗಳಿಗೆ ಕಾರಣರಾದವರೆಂದು ಅಮೇರಿಕಾದ ವಿಯೆಟ್ನಾಂ ಯುದ್ಧ ನೀತಿಯ ವಿರುದ್ಧವಾಗಿ ಪ್ರತಿಭಟನೆ ಮಾಡುತ್ತಿದ್ದವರಲ್ಲಿ ಏಳು ಜನರನ್ನು ಬಂಧಿಸಲಾಗುತ್ತದೆ.ಅವರು ನಿಜಕ್ಕೂ ಎಷ್ಟು ತಪ್ಪಿತಸ್ಥರು ಎನ್ನುವುದನ್ನು ಸಾಬೀತು ಪಡಿಸುವುದಕ್ಕಾಗಿಯೇ ಈ ಟ್ರಯಲ್ ನಡೆಸಲಾಗುತ್ತದೆ.ಪೂರ್ವಾಗ್ರಹ ಪೀಡಿತ ಜಡ್ಜ್,ಕೆಲವೊಂದು ತೆರೆ ಮರೆಯ ಸತ್ಯ,ಒಂದಿಷ್ಟು ಹಾಸ್ಯ,ಬಹಳಷ್ಟು ರಹಸ್ಯ ಎಲ್ಲವೂ ಇದರಲ್ಲಿ ಇದೆ.
Aaron Sorkin ಇದನ್ನು ನಿರ್ದೇಶಿಸಿದ್ದು Sacha Baron Cohen, Joseph Gordon-Levitt ಮೊದಲಾದವರ ಅಭಿನಯ ಈ ಚಿತ್ರಕ್ಕಿದೆ.ವಿಶ್ವ ಸಿನಿರಂಗದ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಈ ಮೂವಿ,ಲೀಗಲ್ ಡ್ರಾಮಗಳನ್ನು ಅತಿಯಾಗಿ ಇಷ್ಟ ಪಡುವವರಿಗೆ ಖಂಡಿತವಾಗಿಯೂ ಇಷ್ಟವಾಗಬಹುದು.
#The_Trial_of_the_Chicago_7 | Netflix
English Movie
Historical Legal Drama
Release - September 2020
#Movies
Ab
Comments
Post a Comment