Zodiac

 #Zodiac | Netflix





ಅವನೊಬ್ಬ ಕೊಲೆಗಾರ.ಸೀರಿಯಲ್ ಕಿಲ್ಲರ್ ಎಂದು ಹೇಳಿದರೆ ಹೆಚ್ಚು ಸರಿಯಾಗುತ್ತದೆ.


ಅವನ ಪ್ರಕಾರ ಜಗತ್ತಿನಲ್ಲಿ ಅತ್ಯಂತ ಡೇಂಜರಸ್ ಪ್ರಾಣಿ ಅಂದರೆ ಅದು ಮನುಷ್ಯ ಮಾತ್ರ.ಹಾಗಾಗಿ ಅವನಿಗೆ ಪ್ರಾಣಿಗಳನ್ನು ಬೇಟೆಯಾಡುವುದಕ್ಕಿಂತಲೂ ಹೆಚ್ಚು ಸಂತೋಷ ಮನುಷ್ಯನನ್ನು ಕೊಲ್ಲುವುದರಲ್ಲಿ ಸಿಗುತ್ತದೆ.ಅವನದ್ದೂ ಒಂದು ಆನಂದ;ವಿಕೃತವಾದದ್ದು! 


ಅವನು ಏಕಾಂತದಲ್ಲಿರುವ ಜೋಡಿಗಳನ್ನು,ಒಬ್ಬಂಟಿಯಾಗಿರುವ   ಮನುಷ್ಯರನ್ನು ಕೊಲ್ಲುತ್ತಾನೆ.


ಕೊಂದ ನಂತರ ಆತ ಸುಮ್ಮನೆ ಇರುವುದಿಲ್ಲ.


ನ್ಯೂಸ್ ಪೇಪರ್ ಗೆ ಬಹಳ ಶ್ರದ್ಧೆಯಿಂದ ಲೆಟರ್ ಬರೆಯುತ್ತಾನೆ.ನಾನು ಇವತ್ತು ಯಾರನ್ನು ಕೊಂದೆ,ಎಲ್ಲಿ ಕೊಂದೆ, ಯಾವುದರಿಂದ ಕೊಂದೆ ಇತ್ಯಾದಿ ಇತ್ಯಾದಿ ಸಂಗತಿಗಳನ್ನು ಸವಿವರವಾಗಿ ಬರೆದು ತಿಳಿಸುತ್ತಾನೆ. 


ಜೊತೆಗೆ ರಕ್ತ ಸಿಕ್ತ ಬಟ್ಟೆಯ ಒಂದು ಚೂರು,ನಿಗೂಢ ಅರ್ಥ ಹೇಳುವ ಭಿನ್ನ ವಿಭಿನ್ನ ಚಿಹ್ನೆಗಳಿರುವ ಒಂದು ಕೋಡೆಡ್ ಪತ್ರವನ್ನು ಕೂಡ ಲಗತ್ತಿಸಿಯೇ ಅವನು ಪೇಪರ್ ಸಂಸ್ಥೆಯೊಂದಕ್ಕೆ ಕಳುಹಿಸುತ್ತಾನೆ!


ತನ್ನನ್ನು ತಾನು Zodiac ಎಂದು  ಹೇಳಿಕೊಳ್ಳುವ ಅವನು ತನ್ನನ್ನು ಸಾಧ್ಯ ಆದರೆ ಪತ್ತಿ ಹಚ್ಚಿ ಎಂದು ಈ ರೀತಿಯಾಗಿ ಸವಾಲು ಹಾಕುವುದರ ಜೊತೆಗೆಯೇ,ಪೇಪರ್ ನಲ್ಲಿ ತಾನು ಕಳುಹಿಸಿದ ಪತ್ರವನ್ನು ಪ್ರಕಟಿಸದಿದ್ದರೆ ಇನ್ನೂ 12 ಜನರನ್ನು ಕೊಲ್ಲುತ್ತೇನೆ ಎಂದು ಬೆದರಿಕೆ ಹಾಕುತ್ತಾನೆ.


ಪೇಪರ್ ನವರು ಅದನ್ನು ಅಷ್ಟೇನು ಸೀರಿಯಸ್ ಆಗಿ ತೆಗೆದುಕೊಳ್ಳದೇ,ಕೊಲೆಗಾರ ಕಳುಹಿಸಿದ ಪತ್ರದಲ್ಲಿನ ಕೊಲೆಗಳ ವಿಷಯಗಳ ಬಗ್ಗೆ ಗಂಭೀರವಾಗಿ ಪ್ರಸ್ತಾಪಿಸದೇ ತಮಗೆ ಎಷ್ಟು ಬೇಕೋ ಏನು ಬೇಕೋ ಅಷ್ಟನ್ನು ಮಾತ್ರ ಪ್ರಕಟಿಸುತ್ತಾರೆ!


ಅಷ್ಟೇ.. 


ಕೊಲೆಗಳು ಮತ್ತೆ ಮುಂದುವರಿಯುತ್ತದೆ!!! 


1960,70 ರಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ದಲ್ಲಿ ನಡೆದಂತಹ ನೈಜ ಘಟನೆಗಳೇ ಈ ಮೂವಿಯ ಕಥೆ. 


ಅಂದ ಹಾಗೆ ಇದು ಅಮೇರಿಕಾದ ಅತ್ಯಂತ ಕುಪ್ರಸಿದ್ಧಿಯನ್ನು ಪಡೆದ ಹಾಗೂ ಇಂದಿಗೂ ಬಗೆಹರಿಯದ 

ಕೇಸ್ ಅಂತೆ!


ಇವತ್ತಿಗೆ ಹೆಚ್ಚು ಕಡಿಮೆ 61 ವರ್ಷಗಳೇ ಕಳೆದಿವೆ,ಆದರೆ ಈ ಒಂದು ಕೇಸ್ ಇಂದಿಗೂ ಜೀವಂತವಾಗಿದೆ!! 


ಪೋಲಿಸರಿಗೆ ಏಕೆ ಕೊಲೆಗಾರನನ್ನು ಪತ್ತೆ ಹಚ್ಚಲು ಕಷ್ಟವಾಗುತ್ತದೆ? 


ಅಂದ ಹಾಗೆ ಕಥೆಯಲ್ಲಿ ಮಾತ್ರ ನಡೆದ ಎಲ್ಲವನ್ನೂ ಅಕ್ಕಪಕ್ಕ ಇಟ್ಟುಕೊಂಡೇ ನೋಡುಗನಿಗೆ ತೋರಿಸುತ್ತಾ ಹೋಗುತ್ತಾರೆ. 


ಕೊಲೆಗಾರ ಎಂದು ಈ ಕಥೆ ಸೂಚ್ಯವಾಗಿ ಹೇಳುವ ಹಾಗೂ ನಾವು ನೀವು ತಿಳಿದು ಕೊಳ್ಳಬಹುದಾದ ಆ ಕೊಲೆಗಾರ ಕೂಡ ಈ ಕಥೆಯೊಳಗೆಯೇ ಇದ್ದಾನೆ..! 


ಅವನೂ ಕಾಣಸಿಕೊಳ್ಳುತ್ತಾನೆ..ಒಂದಷ್ಟು ಮಾತು ಕೂಡ  ಕೊಲೆಗಾರನಂತೆಯೇ ಆಡುತ್ತಾನೆ! 


ಆದರೂ ಅವನನ್ನು ಹಿಡಿಯುವುದಿಲ್ಲ! 


ಆದರೆ ಏಕೆ? 


ಅಂದ ಹಾಗೆ ಅವನು ಯಾರು?!!




David Fincher ನಿರ್ದೇಶಿಸಿದ ಈ ಚಿತ್ರದಲ್ಲಿ Jake Gyllenhaal,Mark Ruffalo, Robert Downey Jr. ಮುಂತಾದವರು ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.ಬಹಳಷ್ಟು ಜನ ಮನ್ನಣೆ ಗಳಿಸಿದ ಈ ಚಿತ್ರ ಕೂಡ ಒಮ್ಮೆ ನೋಡಬಹುದಾದ ಮಿಸ್ಟ್ರಿ ಚಿತ್ರವೇ ಆಗಿದೆ. 



#Zodiac | Netflix 

English Movie 

Mystery Thriller 

Year - 2007 


Movies 

Ab

Comments

Popular posts from this blog

ಗಗನದ ಸೂರ್ಯ

ಬಿಡುಗಡೆ!

ಭಕ್ತಿಯ ಜೊತೆಗೆ ಭಯವೂ ಇರಲಿ..