Black Swan

 #Black_Swan  |  Hotstar




ಅವಳು ಬ್ಯಾಲೆಯ ಬಾಲೆ.ಹುಡುಗಿಯೊಬ್ಬಳು ಹಂಸವಾಗುವ ಕಥೆಗೆ ಅವಳೇ ನಾಯಕಿ.ಮುಗ್ಧ,ನಾಜೂಕಿನ ಬಿಳಿಯ ಹಂಸ ಮತ್ತು ಅದಕ್ಕೆ ತದ್ವಿರುದ್ಧ ಸ್ವಭಾವದ ಕಪ್ಪುಹಂಸ ಈ ಎರಡೂ ಪಾತ್ರವಾಗಿ ಅವಳು ನರ್ತಿಸಿದರೆ ಮಾತ್ರ ಅವಳು ಆ ಕಥೆಗೆ  ನಾಯಕಿ,ಇಲ್ಲದಿದ್ದರೆ ಅಲ್ಲ.


ಅವಳಾದರೂ ಸಾದ ಸೀದಾ ಬಿಳಿಯ ಹಂಸದಂತವಳು.ದುಷ್ಟ ಕಪ್ಪು ಹಂಸವಾಗಲು ಅವಳಿಗೆಂದಿಗೂ ಸಾಧ್ಯವಿಲ್ಲ,ಏಕೆಂದರೆ ಅದು ಅವಳಿಗೆ ಗೊತ್ತಿಲ್ಲ.ಆದರೆ ಪಾತ್ರ ಬಿಟ್ಟು ಬಿಡಲು ಕೂಡ ಅವಳಿಗೆ ಮನಸ್ಸಿಲ್ಲ.ಏಕೆಂದರೆ ಅವಳ ಜೀವನದ ಪರಮ ಗುರಿ ಕೂಡ ಅದೊಂದೇ;ಅದೇ ಪ್ರಮುಖ ಪಾತ್ರದಲ್ಲಿ ಮಿಂಚಬೇಕು ಎಂದು. 


ಬಿಳಿಯ ಹಂಸವನ್ನು ಇವಳಿಗಿಂತ ಚೆನ್ನಾಗಿ ಅವಳ ತಂಡದಲ್ಲಿ ಬೇರಾರು ಮಾಡಲು ಸಾಧ್ಯವಿಲ್ಲ,ಅದರಲ್ಲಿ ಎಳ್ಳಷ್ಟು ಸಂದೇಹವಿಲ್ಲ.ಅಷ್ಟು ಚೆನ್ನಾಗಿ ಅದು ಅವಳಿಗೆ ಒಪ್ಪುತ್ತದೆ ಮಾತ್ರವಲ್ಲ ಅದನ್ನವಳು ಬಹಳ ಸೊಗಸಾಗಿಯೇ  ನಿಭಾಯಿಸಬಲ್ಲಳು ಕೂಡ.ಆದರೆ ಕಪ್ಪು ಹಂಸ? ಒಬ್ಬಳು ಇದ್ದಾಳೆ! ಅದೇ ಇವಳಿಗೆ ಕಷ್ಟ.


ಇವಳು ಭ್ರಮೆಗೆ ಬೀಳುತ್ತಾಳೆ.ಏನೇನೋ ಕಲ್ಪಿಸಿಕೊಳ್ಳುತ್ತಾಳೆ. ಪಾತ್ರದಲ್ಲಿ ಪರಿಪೂರ್ಣತೆ ತರಲು ಇನ್ನಿಲ್ಲದಂತೆ ಪ್ರಯತ್ನಿಸುತ್ತಾಳೆ,ಆದರೂ ನಿರಂತರವಾಗಿ ಸೋಲುತ್ತಾಳೆ. ಕೊನೆಗೂ ಬಂದೇ ಬಿಡುತ್ತದೆ ಶೋ ಟೈಂ,ಅದು ಕಿಕ್ಕಿರಿದು ನೆರೆದಿರುವ ಪ್ರೇಕ್ಷಕರೆದುರು ಬಿಳಿ ಹಾಗೂ ಕಪ್ಪು ಹಂಸವಾಗಿ ನಾಯಕಿ ಕುಣಿಯಬೇಕಾದ ದಿನ.


ಹಂಸಗಳ ನಿಜ ಕಥೆಯಲ್ಲಿ ನಾಯಕಿ ಕೊನೆಯಲ್ಲಿ ಅವಳಾಗಿಯೇ ಸಾಯುತ್ತಾಳೆ.ಇಲ್ಲಿ ನಮಗೆ ತೋರಿಸುವ ಕಥೆಯಲ್ಲಿ ಕೊನೆಗೂ ಬಿಳಿ ಹಾಗೂ ಕಪ್ಪು ಹಂಸವಾಗಿ ನರ್ತಿಸುವ ಈ ಬ್ಯಾಲೆಯ ಬಾಲೆ  ಯಾರು? ಮತ್ತು ಇಲ್ಲಿ ಏನಾಗುತ್ತದೆ? ಏನೇನು ಆಗುತ್ತದೆ?! 



Darren Aronofsky ನಿರ್ದೇಶನದ ಈ ಮೂವಿಯಲ್ಲಿ Natalie Portman,Vincent Cassel, Mila Kunis ಅಭಿನಯಿಸಿದ್ದಾರೆ.ಅದರಲ್ಲೂ Natalie Portman ನದ್ದು ಇಲ್ಲಿ ಬಹಳ ಸೊಗಸಾದ ಅಭಿನಯ.ರಷ್ಯಾದ Pyotr Ilyich Tchaikovsky ಯ "Swan Lake" ಆಧಾರಿಸಿ ಈ ಕಥೆ ಮಾಡಲಾಗಿದೆಯಂತೆ. 


ನಿಜಕ್ಕೂ ಇದೊಂದು ಬಹಳ ಸುಂದರವಾದ ಕಥೆ.ನಾಯಕಿಯನ್ನು ಮಾತ್ರ ಭ್ರಮೆಗೆ ತಳ್ಳುವುದಲ್ಲದೇ ನೋಡುಗನನ್ನು ಕೂಡ ಕೊನೆಯವರೆಗೂ ಒಂದಿಷ್ಟು ಗಲಿಬಿಲಿಗೊಳಿಸುವ ಈ ಪೂರ್ತಿ ಮೂವಿ,ಹೆಚ್ಚು ಕಡಿಮೆ ಒಂದು ಮುಕ್ಕಾಲು ಗಂಟೆ ಅಷ್ಟೇ ಇರುವುದು.ನೋಡಿ ನಿಮಗೆ ಇಷ್ಟ ಆದರೂ ಆಗಬಹುದು.


#Black_Swan | Hotstar

English Movie

Psychological Horror

Release - 2010


Movies

Ab





Comments

Popular posts from this blog

ಗಗನದ ಸೂರ್ಯ

ಬಿಡುಗಡೆ!

ಭಕ್ತಿಯ ಜೊತೆಗೆ ಭಯವೂ ಇರಲಿ..