ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು : ಕೊಡುಗೆ ರಾಮಣ್ಣ ರೈ
ಬಾರೀ ಚಂದದ ಮೂವಿ ಇದು.ನೋಡುಗನನ್ನು ಸಹ ಒಂದಿಷ್ಟು ಹೊತ್ತು ಅವನ ಬಾಲ್ಯದ ನೆನಪುಗಳಲ್ಲಿ ಸಂಚರಿಸುವಂತೆ ಮಾಡುವ ಶಕ್ತಿ ಈ ಮೂವಿಗೆ ಖಂಡಿತವಾಗಿಯೂ ಇದೆ.
ನಮ್ಮ ಮನೆ,ನಮ್ಮ ಜಾಗ,ನಮ್ಮ ಗ್ರೌಂಡು ಇದ್ದಂತೆಯೇ ಚಿಕ್ಕಂದಿನಲ್ಲಿ ಎಲ್ಲರಿಗೂ ಅತೀ ಹೆಚ್ಚು ಇಷ್ಟವಾಗುತ್ತಿದ್ದ ಮತ್ತೊಂದು ಸ್ಥಳವೆಂದರೆ ಅದು ಬಹುಶಃ "ನಮ್ಮ ಶಾಲೆ"ಯೇ ಆಗಿರುತ್ತದೆ.ನಮ್ಮ ನಮ್ಮ ಶಾಲೆಯೆಂದರೆ ಅದೆನೋ ಸೆಳೆತ,ಅದೆಂತದೋ ಆಪ್ತತೆ.ಅದರಲ್ಲೂ ಪ್ರಾಥಮಿಕ ಶಾಲೆಯ ನೆನಪುಗಳ ಆ ಸ್ವಾದ,ಎಂದಿಗೂ ಮರೆತು ಹೋಗುವಂತಹದ್ದಲ್ಲ.ಅಲ್ಲಿ ಎಂತೆಂತಹ ಗೆಳೆಯರು,ಅದೆಂತಹ ಕನಸುಗಳು,ಪ್ರತಿಯೊಬ್ಬರ ಇಷ್ಟ ಕಷ್ಟಗಳು ಕೂಡ ಬೇರೆ ಬೇರೆಯೇ,ಆದರೂ ಆ ಮುಗ್ಧತೆಯಲ್ಲಿ ಎಲ್ಲರೂ ಅದೆಷ್ಟು ಒಳ್ಳೆಯವರು.ವಿವರಿಸಲಾಗದ ನೆನಪುಗಳು ಬಾಲ್ಯದ ದಿನಗಳು.ಅದೆಲ್ಲವೂ ಈ ಮೂವಿಯಲ್ಲಿದೆ.
ಕಾಸರಗೋಡು ಭಾಗದಲ್ಲಿರುವ ಒಂದು ಸರ್ಕಾರಿ ಕನ್ನಡ ಶಾಲೆ,ಅದನ್ನು ಮುಚ್ಚಬೇಕಾದ ಪರಿಸ್ಥಿತಿ,ಮಕ್ಕಳ ಹಾಗೂ ಊರವರ ಹೋರಾಟ,ಬಹಳಷ್ಟು ಹಾಸ್ಯ,ಚಂದದ ಸಂಭಾಷಣೆ,ಮುದ್ದಾದ ಮಂಗಳೂರು ಕನ್ನಡ,ಕೊನೆಯಲ್ಲಿ ಒಂದೊಳ್ಳೆಯ ಸಂದೇಶ .ಯಾರಿಗೆ ಆಗಲಿ ಈ ಮೂವಿ ಒಂಚೂರು ಬೋರ್ ಹೊಡೆಸುವುದಿಲ್ಲ.ಒಂಥರಾ ಫೀಲ್ ಗುಡ್ ಮೂವಿ ಇದು.
ರಿಷಬ್ ಶೆಟ್ಟಿ ಇದನ್ನು ನಿರ್ದೇಶಿಸಿದ್ದು ಅನಂತ್ ನಾಗ್,ಪ್ರಮೋದ್ ಶೆಟ್ಟಿ,ಪ್ರಕಾಶ್ ತೂಮಿನಾಡ್ ಹಾಗೂ ಹಲವಾರು ಪುಟ್ಟ ಮಕ್ಕಳು ಇದರಲ್ಲಿ ಬಹಳ ಸೊಗಸಾಗಿ ಅಭಿನಯಿಸಿದ್ದಾರೆ.ಕೊನೆಯಲ್ಲಿ ಬರುವ ಅನಂತ್ ನಾಗ್ ಅಭಿನಯವಂತು ಬಹಳನೇ ಇಷ್ಟವಾಗುತ್ತದೆ.ಇದರ ಎಲ್ಲಾ ಹಾಡುಗಳು,ಕಾಸರಗೋಡು ಪರಿಸರ,ಅದಕ್ಕೊಪ್ಪುವ ಸಿನಿಮಾಟೋಗ್ರಫಿ,ಮಕ್ಕಳ ಮುಗ್ಧತೆ,ಅವರದ್ದೊಂದು ತುಂಟಾಟ,ಆ ಚಿನ್ನದಂತಹ ಬಾಲ್ಯ ನೋಡುತ್ತಾ ನೋಡುತ್ತಾ ನಾವು ಕೂಡ ಇಲ್ಲಿ ಮತ್ತಷ್ಟು ಮಕ್ಕಳೇ ಆಗಿ ಬಿಡುತ್ತೇವೆ.ನೋಡದೆ ಬಾಕಿ ಉಳಿಸಿಕೊಂಡಿದ್ದೆ.ಈಗ ನೋಡಿದೆ.ತುಂಬಾ ಖುಷಿಯಾಯಿತು..
#ಸರ್ಕಾರಿ_ಹಿರಿಯ_ಪ್ರಾಥಮಿಕ_ಶಾಲೆ_ಕಾಸರಗೋಡು_ಕೊಡುಗೆ_ರಾಮಣ್ಣ_ರೈ | SUN NXT
ಕನ್ನಡ ಚಲನಚಿತ್ರ
ಬಿಡುಗಡೆ - 2018
Movies
Ab
Comments
Post a Comment