Kadaseela Biriyani

 #Kadaseela_Biriyani  | Netflix




ಅವರು ಮೂವರು ಸಹೋದರರು.ತಮ್ಮ ತಂದೆಯ ಸಾವಿಗೆ ಕಾರಣನಾದವನನ್ನು ಕೊಂದು ಪ್ರತೀಕಾರ ತೀರಿಸಬೇಕೆಂದು ಆ ಕಾಡಿನ ನಡುವಿನ,ರಬ್ಬರ್ ತೋಟದಿಂದಲೇ ಸುತ್ತುವರಿದಿರುವ ಆ ದೊಡ್ಡದಾದ ಒಂಟಿ ಮನೆಯ ಕಡೆಗೆ ಅವರು ಹೊರಡುತ್ತಾರೆ.ಈ ಒಂದು ಕೊಲೆಗಾಗಿ ಬಹಳಷ್ಟು ಯೋಜನೆ ಹಾಗೂ ಸಿದ್ದತೆಗಳನ್ನು ಅವರು ಬಹಳ ಮೊದಲೇ ಮಾಡಿರುತ್ತಾರೆ,ಆದರೆ ಸರಿಯಾದ ಸಮಯ ಸಂಧರ್ಭಕ್ಕೆ ಕಾಯುತ್ತಿರುತ್ತಾರೆ.ಮೂವರು ಸಹೋದರರಲ್ಲಿ ಕೊನೆಯವನು ಸ್ವಲ್ಪ ಚಿಕ್ಕ ವಯಸ್ಸಿನವನು.ಅವನಿಗೆ ಈ ಪ್ರತಿಕಾರ,ಕೊಲೆಗಳಲ್ಲಿ ಆಸಕ್ತಿ ಇಲ್ಲ,ಜೊತೆಗೆ ಸಿಕ್ಕಾಪಟ್ಟೆ ಹೆದರಿಕೆ ಬೇರೆ.ಆದರೆ ಈ ಮೂವರು ಸಹೋದರರ ತಾಯಿಯ ಬೇಡಿಕೆ,ಕೋರಿಕೆ,ಪ್ರಾರ್ಥನೆ, ಆಕ್ರೋಶ ಎಲ್ಲವೂ ಒಂದೇ,"ನಿಮ್ಮ ತಂದೆಯನ್ನು ಕೊಂದವನನ್ನು ಕೊಂದೇ ನೀವು ಮೂವರು ಮತ್ತೆ ಮನೆಗೆ ಮರಳಬೇಕು.." ಎಂದು.ಕೊನೆಗೂ ಈ ಮೂವರೂ ಸರಿಯಾದ ಸಮಯ ನೋಡಿಕೊಂಡು ಕೊಲೆ ಮಾಡುವುದಕ್ಕಾಗಿ ಹೊರಡುತ್ತಾರೆ.ಆದರೆ ಇವರು ಯೋಚಿಸಿದಕ್ಕಿಂತಲೂ ಬಹಳ ಸುಲಭವಾಗಿಯೇ ಯಾರ ಕೊಲೆ ಆಗಬೇಕಿತ್ತೋ ಅವನ ಕೊಲೆ ಆಗುತ್ತದೆ;ಮೂವರೂ ಸೇರಿ ಒಬ್ಬನಿಗೆ ಚಟ್ಟ ಕಟ್ಟುತ್ತಾರೆ.ಆದರೆ ಬರೀ ಇಷ್ಟು ಆಗಿ ಬಿಟ್ಟರೆ ಕಥೆ ಹೇಗೆ ಇಂಟ್ರೆಸ್ಟಿಂಗ್ ಆಗುತ್ತದೆ?. ಇದ್ದಾನೆ, ಅಲ್ಲೊಬ್ಬ ಅವಶ್ಯವಾಗಿ ಇದ್ದಾನೆ. ಸೈಕೋಗಳಿಗೂ ಹುಚ್ಚು ಹುಡಿಸುವ ಸೈಕೋ ಅವನು.ಈ ಮೂವರು ಸಹೋದರರು ಸೇರಿ ಕೊಲೆ ಮಾಡಿದವನ ಮಗನೇ  ಅವನು.ಅವನದ್ದೊಂದು ಹುಚ್ಚಾಟವೇ ಈ ಕಥೆಗೆ ಬಹಳಷ್ಟು ಕಿಕ್ ಕೊಡುತ್ತಾ ಹೋಗುವುದು. 


ಅಂದ ಹಾಗೆ ಆ "ಕೊನೆಯ ಬಿರಿಯಾನಿ" ತಿನ್ನುವುದಕ್ಕಿಂತ ಮೊದಲು ಈ ಕಥೆಯ ಕೊನೆಯಲ್ಲಿ ಏನಾಗುತ್ತದೆ?!


Nishanth Kalidindi ನಿರ್ದೇಶನದ ಈ ಮೂವಿಯಲ್ಲಿ Vasanth Selvam, Dinesh Pandi,Hakkim Shah ಮತ್ತು Vijay Ram ಅಭಿನಯಿಸಿದ್ದಾರೆ. 


ತಮಿಳು ಹಾಗೂ ಮಲಯಾಳಂ ಸಂಭಾಷಣೆಗಳಿಂದ ಕೂಡಿದ ಈ ಮೂವಿ ಹೆಚ್ಚು ಕಡಿಮೆ ಒಂದೂವರೆ ಗಂಟೆ ಅಷ್ಟೇ ಇರುವುದು.ಹಾಗಾಗಿ ಇನ್ನೂ ಸ್ವಲ್ಪ ಮೂವಿ ಇರಬೇಕಿತ್ತು ಎಂದು ಅನಿಸಿದ್ದು ಮಾತ್ರ ಸುಳ್ಳಲ್ಲ.ಸಿನಿಮಾಟೋಗ್ರಪಿ ಮಲಯಾಳಂ ಮೂವಿಗಳಂತೆಯೇ ಬಹಳಷ್ಟು ಹಸಿರಾಗಿದೆ ಹಾಗೂ ಅಷ್ಟೇ ಚೆನ್ನಾಗಿದೆ.ವಿಜಯ್ ಸೇತುಪತಿಯ ಧ್ವನಿಯಲ್ಲಿಯೇ ಇದರ ಕಥೆಯೊಂದು ಸಾಗುತ್ತದೆ.ಸೇತುಪತಿಯೇ ಹೇಳುವ ಹಾಗೆ ಈ ಕಥೆ ಕಾಮಿಡಿಯೂ ಹೌದು ಅಷ್ಟೇ ಥ್ರಿಲ್ಲರ್ ಕೂಡ ಹೌದು! 




#Kadaseela_Biriyani  | Netflix 

Tamil Movie 

Thriller /Dark Comedy 

Release - 19 November 2021


Movies 

ab

Comments

Popular posts from this blog

ಗಗನದ ಸೂರ್ಯ

ಬಿಡುಗಡೆ!

ಭಕ್ತಿಯ ಜೊತೆಗೆ ಭಯವೂ ಇರಲಿ..