Kurup
#Kurup | Netflix
ಅವನು ಅವನೇ.ತನ್ನ ಅಸ್ತಿತ್ವವೊಂದನ್ನು ಅಳಿಸುವುದಕ್ಕಾಗಿ ಅವನು ಸ್ವತಃ ಅವನ ಕೊಲೆಯನ್ನೇ ಮಾಡಿಸುತ್ತಾನೆ.ಆದರೆ ನಿಜವಾಗಿಯೂ ಸಾಯುವುದು ಕೇವಲ ಅವನ ಹೆಸರಷ್ಟೇ.ಹೊಸತೊಂದು ಹೆಸರಿನಲ್ಲಿ ಅವನು ಮತ್ತೆ ಮತ್ತೆ ಜೀವಂತ.ಅವನು ಒಳ್ಳೆಯವನಾ? ಎಂದು ಕೇಳಿದರೆ ಅವನು ಎಲ್ಲೆಲ್ಲಿ ಕೆಟ್ಟವನಲ್ಲ ಎಂಬುದನ್ನು ಭೂತಗನ್ನಡಿ ಹಿಡಿದೇ ತಡಕಾಡಬೇಕಾಗುತ್ತದೆ.ಅವನು ನಿಜವಾಗಿಯೂ ಅಷ್ಟೊಂದು ಕೆಟ್ಟವನಾ? ಎಂದು ಕೇಳಿದರೆ ಎಷ್ಟು ಕೆಟ್ಟವನು,ಹೇಗೆ ಕೆಟ್ಟವನು ಎಂಬುದನ್ನು ಬಿಡಿಸಿ ಬಿಡಿಸಿಯೇ ವಿವರಿಸಬೇಕಾಗುತ್ತದೆ!
Srinath Rajendran ನಿರ್ದೇಶನದ ಈ ಮೂವಿಯಲ್ಲಿ Dulquer Salmaan,Indrajith Sukumaran, Sobhita Dhulipala ಅಭಿನಯಿಸಿದ್ದಾರೆ.
ಆರಂಭದಲ್ಲಿ ಇಂಡಿಯನ್ ಏರ್ ಫೋರ್ಸ್ ನ ಕಥೆಯೊಂದನ್ನು ಹೇಳಲು ಹೋಗುವ ಇದು,ಆ ನಂತರ ಹೇಳುವ ಕಥೆಯೇ ಬೇರೆ.ಏರ್ ಫೋರ್ಸ್ ಕಥೆ ನಿಜವಾಗಿಯೂ ಇದಕ್ಕೆ ಬೇಕಿತ್ತಾ ಎಂದು ಅನ್ನಿಸಿಬಿಡುತ್ತದೆ.ನನಗಂತು ಬೇಡ ಎಂದೇ ಅನ್ನಿಸಿತು.ಒಂದು ರಹಸ್ಯ ಕೊಲೆಯ ಹಿಂದಿರುವ ಬಹಳಷ್ಟು ಅಸಲಿ ಕಥೆಗಳೇ ಇದರ ಕಥೆ.ಹಾಡುಗಳು ಚೆನ್ನಾಗಿದೆ. " Dingiri Dingale" ಹಾಡು ಕೇಳಲು ಒಂಥರಾ ಮಜವಾಗಿದೆ.ಎಲ್ಲರಿಗೂ ಇಷ್ಟವಾಗಲಿಕ್ಕಿಲ್ಲ,ಆದರೆ ಕ್ರೈಮ್ ಥ್ರಿಲ್ಲರ್ ಗಳನ್ನು ಬಹುವಾಗಿ ಇಷ್ಟ ಪಡುವವರಿಗೆ ಇದು ಕೂಡ ಇಷ್ಟವಾಗಬಹುದು.
#Kurup | Netflix
Malayalam Movie
Crime Thriller
Release - 12 November 2021
Movies
Ab
Comments
Post a Comment