Money Heist - Season 5 volume 2

 #Money_Heist S05_V2  | Netflix




Bank of Spain ನ ನೆಲಮಾಳಿಗೆಯಲ್ಲಿರುವ ಆ ಬಂಗಾರದ ಗಟ್ಟಿಗಳ ಒಟ್ಟು ತೂಕ ಸರಿ ಸುಮಾರು 90 ಟನ್ನುಗಳು.


ಒಂದು ಗಟ್ಟಿಯನ್ನು ಬಿಡದೇ ಕೊಳ್ಳೆ ಹೊಡೆಯಬೇಕು,ಜೊತೆಗೆ ಸಿಕ್ಕಿಯೂ ಬೀಳಬಾರದು ಎನ್ನುವುದು ಇಲ್ಲಿ ಬಹಳಷ್ಟು ರಿಸ್ಕಿಯ ಜೊತೆಗೆ ಸಾವಿಗೊಂದು ನೇರ ಆಹ್ವಾನವನ್ನು ಕಳುಹಿಸಿದಂತೆಯೇ ಸರಿ. 


ಆ ಬ್ಯಾಂಕಿಗೆ ಹೋಗುವುದೆನೋ ಸುಲಭ,ಆದರೆ ಹಿಂದಿರುಗುವುದು ಅದರಲ್ಲೂ ರಾಬರಿಯಂತಹ ಉಸಾಬರಿಗೆ ಕೈ ಹಾಕಿ ಜೀವಂತವಾಗಿ ಹಿಂದಿರುಗುವುದು ತುಂಬಾ ಅಂದರೆ ತುಂಬಾನೇ ಕಷ್ಟ.


ಒಳಗೆ ಹೋದರೂ ದರೋಡೆ ಮಾಡಿದರೂ ಬಂಗಾರದ ಗಟ್ಟಿಗಳನ್ನು ಅದರಲ್ಲೂ ಅಷ್ಟೊಂದು ಬಂಗಾರವನ್ನು ಹೊರ ತರಲು ಸಾಧ್ಯವೇ ಇಲ್ಲ.ಏಕೆಂದರೆ ಮುಖ್ಯ ದ್ವಾರ ಬಿಟ್ಟರೆ ಹೊರ ಬರಲು ಅಲ್ಲಿ ಅನ್ಯ ಮಾರ್ಗಗಳಿಲ್ಲ. 


ಆದರೆ ಇಲ್ಲಿಯ ಕಳ್ಳರು ಬುದ್ಧಿವಂತರು ಮಾತ್ರ ಅಲ್ಲ,ಅವರು ಒಂದು ರೀತಿಯಲ್ಲಿ ಕಲಾವಿದರೇ ಹೌದು;ಏಕೆಂದರೆ ಡರೋಡೆ ಎನ್ನುವುದು ಅವರಿಗೆ ಬಹಳಷ್ಟು ಆರ್ಟ್.


ಅಪ್ಲಿಕೇಷನ್ಸ್ ಆಫ್ ಸೈನ್ಸ್ ಆಂಡ್ ಇಂಜಿನಿಯರಿಂಗ್ ಇರುವುದೇ ತಮ್ಮದೊಂದು ಆರ್ಟ್ ಗೆ ಚಂದದ ಬಣ್ಣ ಬಳಿಯಲು ಎಂದು ತಿಳಿದವರು ಈ ಕಿಲಾಡಿ ಕಳ್ಳರು ಅವರುಗಳು. 


ದೋಚಬೇಕು,ಯಾವುದನ್ನು ಯಾರಿಂದಲೂ ಎಂದೂ ದೋಚಲು ಸಾಧ್ಯವೇ ಇಲ್ಲವೋ,ದೋಚಿದರೆ ಅದನ್ನೇ ದೋಚಬೇಕು ಅದರಲ್ಲೂ ಯಶಸ್ವಿಯಾಗಿ ದೋಚಬೇಕು ಎನ್ನುವುದೇ ಅವರ ಜೀವನದ ಮೂಲ ಮಂತ್ರ,ಕದಿಯುವ ಪಾಠ ಬಹಳ ಶ್ರದ್ಧೆಯಿಂದ ಹೇಳಿ ಕೊಡುವ 'ಪ್ರೋಫೆಸರ್' ಇಲ್ಲಿ ಅವರುಗಳು ನೆಚ್ಚಿನ ಗುರುಗಳು,ಸತ್ತು ಹೋಗಿರುವ 'ಬರ್ಲಿನ್' ಈ ಕಥೆಯ ಆತ್ಮ. 



ದರೋಡೆಕೋರರು ಸಾಕಷ್ಟು ಪ್ಲ್ಯಾನ್ ಮಾಡಿಯೇ ಬ್ಯಾಂಕ್ ಗೆ ನುಗ್ಗುತ್ತಾರೆ.ಅವರು ಬ್ಯಾಂಕ್ ಗೆ ನುಗ್ಗಿದೊಡನೆಯೇ ಬ್ಯಾಂಕ್ ಸುತ್ತಲೂ ಪೋಲಿಸ್,ಆರ್ಮಿ ಹಾಗೂ ಸ್ಪೆಷಲ್ ಪೊರ್ಸ್ ನದ್ದೊಂದು ಭಯಂಕರ ಸರ್ಪಗಾವಲು ಹಾಗೇ ಹೊರಗಡೆ ಸಿದ್ಧವಾಗಿ ಬಿಡುತ್ತದೆ.ಟ್ಯಾಂಕರ್ ಗಳು ಕೂಡ ಬಂದು ನಿಂತು ಬಿಡುತ್ತದೆ!


ಆದರೆ ಆರ್ಮಿಯು ಕೂಡ ಇಲ್ಲಿ ನೇರವಾಗಿ ಬ್ಯಾಂಕಿನೊಳಗೆ ನುಗ್ಗುವಂತಿಲ್ಲ.ದರೋಡೆಕೋರರ ಒತ್ತೆಯಾಳುಗಾಳಾಗಿ ಬ್ಯಾಂಕಿನ ಒಳಗೆ ಸಾಮಾನ್ಯ ಜನರು ಕೂಡ ಇದ್ದಾರೆ.


ಹೊರಗಿನ ಸೈನಿಕರು ಕೂಡ ತಾಳ್ಮೆಯಿಂದ ಕಾಯಬೇಕು,ಅದೇ ರೀತಿ ಒಳಗಿನ ಕಳ್ಳರು ಕೂಡ ಅಷ್ಟೇ ತಾಳ್ಮೆಯಿಂದ ಕಾಯಬೇಕು;ಒಬ್ಬರಿಗೆ ಸರಿಯಾದ ಸಮಯಕ್ಕೆ ಒಳನುಗ್ಗಿ ದರೋಡೆಕೋರರನ್ನು ಹೊಡೆಯಬೇಕು,ಮತ್ತೊಬ್ಬರಿಗೆ ಸರಿಯಾದ ಸಮಯಕ್ಕೆ ಅಲ್ಲಿಂದ ಬಂಗಾರ ಗಟ್ಟಿಯೊಂದಿಗೆ ಯಶಸ್ವಿಯಾಗಿ ಪರಾರಿಯಾಗಬೇಕು!! 


ದರೋಡೆಕೋರರ ಕೈಚಳಕದಿಂದ ಬ್ಯಾಂಕ್ ನೊಳಗೆಯೇ ಅಷ್ಟೂ ಬಂಗಾರದ ಗಟ್ಟಿಗಳು ಕರಗುತ್ತದೆ,ಕರಗಿ ಬಂಗಾರದ  ಹರಳುಗಳಾಗುತ್ತದೆ..! 


ಇದಿಷ್ಟು ಅದಾಗಲೇ Season 5-Volume 1 ರಲ್ಲಿ ನಡೆದು ಹೋದ ಕಥೆ ಮತ್ತು ಎಲ್ಲರಿಗೂ ಗೊತ್ತಿರುವಂತಹದ್ದೇ. 


ಈಗ ಬಂದಿರುವುದು Volume 2, ಮತ್ತೆ 5 ಎಪಿಸೋಡ್ ಗಳು ಹಾಗೂ ಈ Money Heist ಸೀರಿಸ್ ನ ಕಟ್ಟ ಕಡೆಯ ಎಪಿಸೋಡ್ ಗಳು. 


ಸದ್ಯಕ್ಕೆ ಎಲ್ಲರಿಗೆ ಇರುವ ಕುತೂಹಲ ಇಷ್ಟೇ.ಬಂಗಾರ ಹೊರಗೆ ಬರುತ್ತಾ? ಅಷ್ಟೊಂದು ಸಾವಿರ ಜನ ಪೋಲಿಸ್ ಹೊರಗಡೆ ಇದ್ದರೂ ದರೋಡೆಕೋರರು ಅಲ್ಲಿಂದ ಬಚಾವ್ ಆಗಿ ನಿಜವಾಗಿಯೂ ಹೊರ ಬರುತ್ತಾರಾ? 


ಇದೆರಡನ್ನು ಹೇಳಿ ಬಿಟ್ಟರೆ ಮತ್ತೇನು ಹೇಳಲು ಇಲ್ಲಿ ಉಳಿಯುವುದೇ ಇಲ್ಲ,ಹಾಗಾಗಿ ಎಂದಿನಂತೆ ಅದನ್ನು ಹೇಳುವುದಿಲ್ಲ.ಅದೆಲ್ಲವನ್ನೂ ನೀವೇ ನೋಡಿ ಆಸ್ವಾದಿಸಿ.



ಎಲ್ಲಾ ಸೀರಿಸ್ ಗೂ ಅದರದ್ದೇ ಆದ ಒಂದು ಸಪರೇಟು ಅಭಿಮಾನಿ ಬಳಗ ಸಹಜವಾಗಿಯೇ ಇರುತ್ತದೆ.ಒಬ್ಬೊಬ್ಬರ ರುಚಿ ಅಭಿರುಚಿಗಳು ಕೂಡ ಬಹಳಷ್ಟು ಭಿನ್ನವೇ ಬಿಡಿ.ಹಾಗಾಗಿಯೇ ಜನರುಗಳ ಅಭಿರುಚಿಗೆ ತಕ್ಕಂತೆ ಈ ಮೂವಿ ಆಗಲಿ ಸಿರೀಸ್ ಗಳಾಗಲಿ ಅವರವರಿಗೆ ಇಷ್ಟವಾಗುತ್ತಾ ಹೋಗುತ್ತದೆ.


ಈ Money Heist ಗೂ ಅದರದ್ದೇ ಆದ ಒಂದು ಅಪಾರವಾದ ಅಭಿಮಾನಿ ಬಳಗ ಇದೆ ಅನ್ನುವುದು ಕೂಡ ಅಷ್ಟೇ ಸತ್ಯವೇ.ನಿರಂತರವಾಗಿ ವರ್ಷಗಟ್ಟಲೆ ಸೀರಿಸ್ ನೋಡುವ ಹುಚ್ಚು ಇಲ್ಲದವರು ಕೂಡ ಅದರಲ್ಲೂ ಇಂಡಿಯಾದಲ್ಲಿ ಇತ್ತಿಚಿನ ದಿನಗಳಲ್ಲಿ ಅತಿಯಾಗಿ ನೋಡಿ ಇಷ್ಟ ಪಟ್ಟ ಸೀರಿಸ್ ಎಂದರೆ ಅದು ಬಹುಶಃ ಈ Money Heist ಎಂದು ಹೇಳಿದರೂ  ತಪ್ಪಾಗಲಿಕ್ಕಿಲ್ಲ.'Bella ciao' ಎಂಬ ಒಂದೇ ಶಬ್ದ ಗೊತ್ತಿದ್ದರೂ ಸಹ ಬಹಳ ಇಷ್ಟಪಟ್ಟು ಆ ಹಾಡಿನ ರಾಗವನ್ನು ಹಾಗೇ  ಗುನುಗುವವರು ಇದ್ದಾರೆ.



ನಿಜಕ್ಕೂ Money Heist ಗಿಂತ ಅದೆಷ್ಟೋ ಒಳ್ಳೆಯ ಸೀರಿಸ್, ಕ್ಲಾಸ್ ಸೀರಿಸ್ ಗಳು,ಮಾಸ್ಟರ್ ಪೀಸ್ ಗಳು ಹಲವಾರು ಇದೆ.ಆದರೂ ಜನರಿಗೆ ಈ ಒಂದು ಸೀರಿಸ್ ಮಾತ್ರ ಅದು ಹೇಗೋ ಭಯಂಕರ ಇಷ್ಟವಾಗಿ ಬಿಟ್ಟಿತು.ನಮ್ಮ ಇಂಡಿಯಾದಲ್ಲಿಯೇ ಬಹುಶಃ ಜೈಪುರ ಇರಬೇಕು ಅಂತ ಕಾಣುತ್ತದೆ ಅಲ್ಲಿಯ ಒಂದು ಕಂಪನಿ Season 5 ಯ Volume 1 ರಿಲೀಸ್ ಆಗುವ ದಿನ ಅದನ್ನು ಮೊದಲ ದಿನ  ನೋಡುವುದಕ್ಕಾಗಿಯೇ ತನ್ನ ಕಂಪೆನಿಯ ಕೆಲಸಗಾರರಿಗೆ ರಜಾ ವನ್ನೇ ನೀಡಿತ್ತು ಎಂಬ ಸುದ್ದಿಯನ್ನು ಸಹ ನಾವೆಲ್ಲರೂ ಕೇಳಿದ್ದೇವೆ.


Money Heist ಎಂದರೆ ಏಕೆ ಇಷ್ಟೊಂದು ಕ್ರೇಜ್ ಜನರಿಗೆ?


ಬಹುಶಃ ಪೋಲಿಸರಿಗೆ ಚಳ್ಳೆಹಣ್ಣು ತಿನ್ನಿಸುವ ಕಳ್ಳರ ಕಥೆಗಳು  ಜನರಿಗೆ ಹೆಚ್ಚು ಇಷ್ಟವಾಗುತ್ತದೆ ಎಂದು ಕಾಣುತ್ತದೆ.ಕಾಲ ಬದಲಾಗಿದೆ,ಕಳ್ಳರೂ ಬದಲಾಗಿದೆ,ಕಳ್ಳರೇ ಹೀರೋಗಳಾಗುತ್ತಾರೆ ಅದೇ ರೀತಿ ಕಥೆ ಹೇಳುವ ರೀತಿಯಲ್ಲಿ ಕೂಡ ಸಾಕಷ್ಟು ಬದಲಾವಣೆ ಆಗಿದೆ.


ಈ ಕಳ್ಳರು ಬರೀ ಬುದ್ಧಿವಂತರಲ್ಲ.ನೋಡುಗನಿಗೆ ಬಹಳಷ್ಟು ಒಳ್ಳೆಯವರು ಎಂದು ಕೂಡ ಅನ್ನಿಸಿಬಿಡುತ್ತಾರೆ;ಕಥೆಯ ಒಳಗೆ ಕೂಡ,ಅದೇ ರೀತಿ ಕಥೆಯ ಹೊರಗಡೆ ಕೂಡ.ಏಕೆಂದರೆ ಇದರ Script ಇರುವುದೇ ಹಾಗೆ.ಹಾಗಾಗಿ ನೋಡುಗ ಇಲ್ಲಿ ಕಳ್ಳರ ಗೆಲುವಿಗಾಗಿ ಸಿಕ್ಕಾಪಟ್ಟೆ ಪ್ರಾರ್ಥಿಸುತ್ತಾನೆ,ಪೋಲಿಸರೇ ಸೋಲಲಿ ಎಂದು ಬಯಸುತ್ತಾನೆ,ಯಶಸ್ವಿಯಾಗಿ ಎಲ್ಲವನ್ನೂ ದೋಚಿ ಜೈ ಎಂದು ಅವರುಗಳು ನಗು ನಗುತ್ತಾ  ಪರಾರಿಯಾಗಲಿ ಎಂದೇ ನೋಡುಗ ಮನಸಾರೆ ಹಾರೈಸುತ್ತಾನೆ.ನಿಜ ಹೇಳಬೇಕೆಂದರೆ ಇಲ್ಲಿ ನಿಜವಾದ ಗೆಲುವು ಕಳ್ಳರದ್ದು ಅಲ್ಲ ಪೋಲಿಸರದ್ದೂ ಅಲ್ಲ,ಅದು ಈ ಕಥೆಯ Script ನದ್ದು.


ಕೇವಲ Money Heist ಒಂದಕ್ಕಾಗಿಯೇ ಬಕ ಪಕ್ಷಿಗಳಂತೆ ಕಾದು ಕುಳಿತಿರುವ ಅದರ ಅಭಿಮಾನಿಗಳಿಗೆ ಈ Volume 3 ಖಂಡಿತವಾಗಿಯೂ ಒಂಚೂರು ನಿರಾಸೆ ಮೂಡಿಸುವುದಿಲ್ಲ.ಕಥೆ ಎಂದಿನಂತೆ ರೋಚಕವಾಗಿಯೇ ಇದೆ.


ಈ ಬಾರಿಯ ಕಥೆ ಏನೆಂದು ಹೇಳದಿದ್ದರೂ ಕೆಲವೊಂದನ್ನಷ್ಟೇ ಇಲ್ಲಿ ಹೇಳುತ್ತೇನೆ. 


ಈ ಬಾರಿಯೂ ಬರ್ಲಿನ್ ನ ನಶೆಯ ಮಾತು ಇದೆ.ಅವನು ಈ ಸೀರಿಸ್ ನ ಆತ್ಮದಂತೆ ನಡುವೆ ನಡುವೆ ಎಂದಿನಂತೆ ಮಾತಾಡುತ್ತಲೇ ಇರುತ್ತಾನೆ. 


ಅವನ ಮಗ ಕೂಡ ಕಥೆಯಲ್ಲಿ ಕೈಚಳಕ ತೋರಿಸುತ್ತಾನೆ! 


ಹಿಂದಿನ ಕಥೆಯಲ್ಲಿ ಒತ್ತೆಯಾಳುಗಳಾಗಿ ಜನರು ಇದ್ದರು,ಆದರೆ ಈ ಬಾರಿ ಆ ಜಾಗದಲ್ಲಿ ಬಂಗಾರವೇ ಇದೆ!!


ಹಿಂದೆ  ಸ್ಪೈನ್ ನ ಆರ್ಮಿ,ಏರ್ ಫೋರ್ಸ್ ಗಳು ಅಷ್ಟೇ ಕಥೆಯಲ್ಲಿ ಕಾಣಿಸಿಕೊಂಡಿದ್ದವು,ಆದರೆ ಈ ಬಾರಿ ಇಲ್ಲಿ ಸ್ವಲ್ಪ ಹೊತ್ತು ನೇವಿಯೂ ಕಾಣಿಸಲಿದೆ!!


ಹಿಂದೆ ಕಳ್ಳರಿಗೆ ಪೋಲಿಸರು ಮಾತ್ರ ಎದುರಾಗಿದ್ದರು,ಆದರೆ ಇಲ್ಲಿ  ಇನ್ನೊಂದು ಕಳ್ಳರ ಗುಂಪು ಕೂಡ ನಮ್ಮನ್ನು ಏಮಾರಿಸಲು ಸಿದ್ದವಾಗಿ ನಿಂತಿದೆ!! ಆದರೆ ಯಾರನ್ನು ಏಮಾರಿಸಲು? 


ಬಂಗಾರ ಗಟ್ಟಿಗಳನ್ನು ಕರಗಿಸಿ ಹರಳುಗಳನ್ನಾಗಿ ಅದಾಗಲೇ ಮಾಡಿದ್ದಾರೆ ಎಂದು ನಿಮಗೂ ಗೊತ್ತು,ಆದರೆ ಇಲ್ಲಿ ಮತ್ತೊಮ್ಮೆ ಅಷ್ಟೂ ಬಂಗಾರವನ್ನು ಕರಗಿಸಲಾಗುತ್ತದೆ!


ಆದರೆ ಏಕೆ?


ಅದಕ್ಕಾಗಿ ಹಾಗೂ ದರೋಡೆಕೋರರಿಗೆ ಕೊನೆಗೆ ಏನಾಗುತ್ತದೆ ಎಂಬುದನ್ನು ತಿಳಿಯುವುದಕ್ಕಾಗಿ ನೀವು ಈ ಸೀರಿಸ್ ಅನ್ನೇ ನೋಡಬೇಕಾಗುತ್ತದೆ. 





2017 ರಲ್ಲಿ ಬಂದಂತಹ ಈ ಸೀರಿಸ್ ಸದ್ಯಕ್ಕೆ ಮುಕ್ತಾಯ ಕಂಡಿದೆ.ಅಂದರೆ ಹೆಚ್ಚು ಕಡಿಮೆ 4 ವರ್ಷಗಳು. 


ಸೀರಿಸ್ ಇಷ್ಟ ಇಲ್ಲದವರಿಗೂ ಇತ್ತೀಚಿನ ದಿನಗಳಲ್ಲಿ ಸೀರಿಸ್ ಮೇಲೆ ಹೆಚ್ಚಿನ ಆಸಕ್ತಿ ಬರುವಂತೆ ಮಾಡಿದ್ದು ಇದೇ  ಸೀರಿಸ್ ಎಂದು ಹೇಳಲು ಯಾವುದೇ ಅಡ್ಡಿ ಇಲ್ಲ.ಇದನ್ನು ನೋಡಿಯೇ ಮತ್ತಷ್ಟು ಬೇರೆ ಬೇರೆ ಸೀರಿಸ್ ಗಳ ಕಡೆಗೆ ಕುತೂಹಲ ಬೆಳೆಸಿದವರು ಕೂಡ ಹಲವಾರು ಜನ ಇದ್ದಾರೆ. 


ಸದ್ಯಕ್ಕೆ ಇದಕ್ಕೆ ತೆರೆ ಎಳೆಯಲಾಗಿದೆ,ಪ್ರೋಫೆಸರ್ ಗೆ ಮತ್ತೊಮ್ಮೆ ಮತ್ತೊಂದು ದೊಡ್ಡ ಕೊಳ್ಳೆ ಹೊಡೆಯುವ ಮನಸ್ಸು ಬಂದರೆ, ಬರ್ಲಿನ್ ಗೂ ಇದೊಂದು ಕನಸು ಇತ್ತು ಎಂದು ಈ ಸೀರಿಸ್ ತಂಡಕ್ಕೆ ಅನಿಸಿದರೆ.. ಯಾರಿಗೆ ಗೊತ್ತು,ಈ ಸೀರಿಸ್ ಮತ್ತೊಮ್ಮೆ ಜೀವ ಆದರೂ ಆಗಬಹುದು..!! 


ಹಲವರ ನೆಚ್ಚಿನ 'Bella ciao ' ಹಾಡಿನೊಂದಿಗೆ ಮತ್ತದೇ ಆರಂಭದ ಟೈಟಲ್ ಸಾಂಗ್ ಕೂಡ ಮೆಲುವಾಗಿ ಕೇಳಿ ಬರಬಹುದು.. 


" If I stay with you, if I'm choosing wrong

  I don't care at all

  If I'm losing now, but I'm winning late

  That's all I want


   I don't care at all

   I am lost

   I don't care at all

   Lost my time, my life is going on..." 




#Money_Heist_S05_V2  | Netflix 

Spanish/English Series

Heist/Crime/Thriller 

Release - Dec 03 -2021


#Series 

Ab

Comments

Popular posts from this blog

ಗಗನದ ಸೂರ್ಯ

ಬಿಡುಗಡೆ!

ಭಕ್ತಿಯ ಜೊತೆಗೆ ಭಯವೂ ಇರಲಿ..