Birdman
#Birdman | [ ]
ಅವನೊಬ್ಬ ನಟ.ಒಂದು ಕಾಲದಲ್ಲಿ " Birdman" ನಂತಹ ಸೂಪರ್ ಹೀರೊ ಮೂವಿಗಳಲ್ಲಿ ಮಿಂಚಿ ಮೆರೆದ ಅವನಿಗೆ ಮತ್ತೊಮ್ಮೆ ಖ್ಯಾತಿಗೆ ಬರುವ ವಿಪರೀತ ಹಂಬಲ.ಅಂತಹ ಅವನು ಈ ಬಾರಿ ನಾಟಕ ಒಂದನ್ನು ಮಾಡುವ ಸಾಹಸ ಮಾಡುತ್ತಾನೆ.Raymond Carver ನ ಕಥಾ ಸಂಕಲನದಲ್ಲಿರುವ ಒಂದು ಸಣ್ಣಕಥೆಯಾದ "What We Talk About When We Talk About Love" ಅನ್ನೇ ಸ್ಟೇಜ್ ಮೇಲೆ ತರಲು ಅವನು ಪ್ರಯತ್ನಿಸುತ್ತಾನೆ.ಆ ಸಣ್ಣಕಥೆಯಂತೆಯೇ ಈ ಮೂವಿಯ ಕಥೆಯಲ್ಲಿ ಕೂಡ ಅಲ್ಲಲ್ಲಿ ಪ್ರೀತಿ ಪ್ರೇಮಕ್ಕೆ ಸಂಬಂಧಿಸಿದ ಒಂದಿಷ್ಟು ನಿದರ್ಶನಗಳಿವೆ,ಬಹಳಷ್ಟು ಅದರದ್ದೇ ಆದ ಮಾತುಗಳು ಕೂಡ ಇವೆ.ಅಂದ ಹಾಗೆ ಡ್ರಾಮಾದ ಪ್ರಿವ್ಯೂವ್ ನಿಂದ ಹಿಡಿದು ಅದರದ್ದೊಂದು ರಿಯಲ್ ಶೋ ನಡೆಯುವವರೆಗಿನ ಘಟನೆಗಳೇ ಈ ಮೂವಿಯ ಒಟ್ಟಾರೆ ಕಥೆ.ಡ್ರಾಮ ಹಾಗೂ ಮೂವಿಯ ಕಥೆ ಇಲ್ಲಿ ಒಟ್ಟೊಟ್ಟಿಗೆ ಸಾಗುತ್ತದೆ.ಇದರಲ್ಲಿ 10% ಡ್ರಾಮದ ಕಥೆ ಇದ್ದರೆ,ಉಳಿದ 90% ಡ್ರಾಮಕ್ಕಾಗಿ ನಡೆಯುವ ತೆರೆಯ ಹಿಂದಿನ ಕಥೆಗಳು ಇವೆ.ಇದರ ಬಹುತೇಕ ದೃಶ್ಯಗಳು ನಾಟಕ ನಡೆಯುವ ಥಿಯೇಟರ್ ನ ಇಂಡೋರ್ ನಲ್ಲಿಯೇ ನಡೆಯುತ್ತದೆ.
ಡ್ರಾಮ ಮಾಡಲು ಹೊರಡುವ ಸಿನಿಮಾದ ನಟನೊಳಗಿನ ಸಿನಿಮಾದ ಬರ್ಡ್ ಮ್ಯಾನ್,ಪ್ರತೀ ಕ್ಷಣವೂ ಅವನೊಂದಿಗೆ ಮಾತಾಡುತ್ತಲೇ ಇರುತ್ತಾನೆ.ಈ ಡ್ರಾಮ ಎಲ್ಲಾ ನಿನಗಲ್ಲ,ನೀನು ಮತ್ತೊಮ್ಮೆ ಬರ್ಡ್ ಮ್ಯಾನ್ ಆಗಿ ಸಿನಿಮಾದಲ್ಲಿ ನಟಿಸು,ಹಕ್ಕಿಯಂತೆ ಬಹಳಷ್ಟು ಹಾರಾಡು ಎಂದು ಅವನನ್ನು ಒಳಗೊಳಗೆ ಉತ್ತೇಜಿಸುತ್ತಲೇ ಇರುತ್ತಾನೆ ಬರ್ಡ್ ಮ್ಯಾನ್.ಈ ಮೂವಿಗೊಂದು ಚಂದದ ಉಪ ಶೀರ್ಷಿಕೆಯೂ ಇದೆ " The Unexpected Virtue of Ignorance" ಅಂತ.ಅದು ಮೂವಿ ನೋಡುತ್ತಾ ನೋಡುತ್ತಾ ಕಥೆಯ ಅಂತ್ಯಕ್ಕೆ ತಲುಪಿದಾಗ ನೋಡುಗನಿಗೆಯೇ ಬಹಳ ಚೆನ್ನಾಗಿ ಅರಿವಾಗುತ್ತದೆ.ಕೊನೆಗೂ ನಾಯಕ ನಟನ ಈ ನಾಟಕ ಏನಾಗುತ್ತದೆ? ಎನ್ನುವುದೇ ಈ ಮೂವಿಯ ಕಥೆ.
Alejandro G. Iñárritu ನಿರ್ದೇಶನದ ಈ ಮೂವಿಯಲ್ಲಿ Michael Keaton, Zach Galifianakis, Edward Norton, Emma Stone ಮುಂತಾದವರ ಅಭಿನಯವಿದೆ.
ಈ ಮೂವಿ ಸಿಂಗಲ್ ಶಾಟ್ ಮೂವಿ.ಹೇಗೆ ನಮ್ಮ ನಿಜ ಜೀವನ ಬದುಕಿನ ಕಥೆಗೆ ಯಾವುದೇ ಎಡಿಟಿಂಗ್ ಇರುವುದಿಲ್ಲವೋ,ಅದೇ ರೀತಿಯ ಫೀಲ್ ಕೊಡುವುದಕ್ಕಾಗಿ ಈ ಮೂವಿಯ ಕಥೆ ಹಾಗೂ ಮೂವಿಯೊಳಗಿನ ಡ್ರಾಮದ ಕಥೆಯ ನಡುವೆ,ತೆರೆಯ ಮೇಲೆ ಕಾಣುವ ದೃಶ್ಯಗಳಲ್ಲಿ ಯಾವುದೇ ಸಿನಿಮೀಯ ಕಟ್,ಎಡಿಟಿಂಗ್ ಇರದಂತೆ(ಹೆಚ್ಚಾಗಿ ಇರದಂತೆ)Continuous ಶಾಟ್ ಗಳ ಮೂಲಕವೇ ಇದರ ಸಿನಿಮಾಟೋಗ್ರಫಿ ಮಾಡಲಾಗಿದೆ.ಇದರಲ್ಲಿರುವ ಎಲ್ಲಾ ಶಾಟ್ ಗಳು ಬಹುತೇಕ ಲಾಂಗ್ ಟೇಕ್ ಗಳೇ ಆಗಿವೆ.ಹಾಗಿದ್ದರೂ ಸಹ ಕೇವಲ '16 ವಿಸಿಬಲ್ ಕಟ್ ' ಮಾತ್ರ ಈ ಸಂಪೂರ್ಣ ಚಿತ್ರದಲ್ಲಿ ಇರುವುದಂತೆ.ಫಿಕ್ಷನ್ ಹಾಗೂ ರಿಯಾಲಿಟಿ ಈ ಎರಡರ ನಡುವಿನ ಥಿನ್ ಲೈನ್ ಅನ್ನು ಇಲ್ಲಿ ಸಾಧ್ಯವಾದಷ್ಟು ಅಳಿಸಿ ಹಾಕಲಾಗಿದೆ.
ಅಂದ ಹಾಗೆ ಈ ಮೂವಿ ಅಮೇಜಾನ್ ಪ್ರೈಮ್ ನಲ್ಲಿ ಇದೆ. Best Director, Best Original Screenplay ಹಾಗೂ Best Cinematography ಗಾಗಿ ಇದು ಅಕಾಡೆಮಿ ಆವಾರ್ಡ್ ಗಳನ್ನು ಕೂಡ ಗೆದ್ದುಕೊಂಡಿದೆ.ಈ ಮೂವಿಯಲ್ಲಿ ಬರುವ ನಾಟಕವಾದ "What We Talk About When We Talk About Love" ಎಂಬ ಸಣ್ಣ ಕಥೆಯನ್ನು ಸಾಧ್ಯವಾದರೆ ಓದಿಯೇ ಈ ಮೂವಿಯನ್ನು ನೀವು ನೋಡಿ.Raymond Carver ಬರೆದಿರುವ ಆ ಪುಟ್ಟ ಕಥೆ ಕೂಡ ಅಷ್ಟೇ ಚೆನ್ನಾಗಿದೆ.
ನಾಟಕ ನಡೆಯುವ ಸಮಯದಲ್ಲಿ ನಾಯಕ ಸಿಗರೇಟು ಸೇದುವುದಕ್ಕಾಗಿ ಥಿಯೇಟರ್ ನ ಹಿಂಬದಿಯ ಬಾಗಿಲಿನಿಂದ ಹೊರಗೆ ಬಂದಾಗ,ಆಕಸ್ಮಿಕವಾಗಿ ಒಳಗಿನಿಂದಲೇ ಡೋರ್ ಲಾಕ್ ಆಗಿ,ಅವನ ಬಟ್ಟೆ ಕೂಡ ಆ ಡೋರ್ ನಲ್ಲಿಯೇ ಸಿಕ್ಕಿ ಹಾಕಿಕೊಂಡಾಗ,ನಾಟಕದಲ್ಲಿ ಪಾತ್ರ ಮುಂದುವರಿಸುವುದಕ್ಕಾಗಿ ನಾಯಕ ಬರೀ ಚಡ್ಡಿಯಲ್ಲಿಯೇ ಥಿಯೇಟರ್ ನ ಹೊರ ಭಾಗದ ನ್ಯೂಯಾರ್ಕ್ ನ ಟೈಮ್ ಸ್ಕ್ವೇರ್ ಬೀದಿ ಸುತ್ತಿ,ನಾಟಕ ನಡೆಯುವಂತಹ ಆ ಬ್ರಾಡ್ವೇ ಥಿಯೇಟರ್ ನ ಮುಂಬಾಗದಿಂದಲೇ ಪ್ರೇಕ್ಷಕರ ನಡುವೆ ನಡೆಯುತ್ತಾ ಬಂದು,ಸ್ಟೇಜ್ ಹತ್ತಿ ಹಾಗೇ ನಾಟಕ ಮುಂದುವರಿಸುವುದು ಹಾಗೂ ನಾಟಕದ ಆತ್ಮಹತ್ಯೆಯ ಸನ್ನಿವೇಶದಲ್ಲಿ ನಿಜ ಗನ್ ಅನ್ನೇ ಬಳಸಿಕೊಂಡು ನಾಯಕ ಸ್ವತಃ ತನ್ನನ್ನು ತಾನು ಸುಟ್ಟು ಕೊಳ್ಳುವುದು ಈ ಚಿತ್ರದ ಪ್ರಮುಖ ಹೈಲೈಟ್ಟುಗಳು.ಪ್ರೀತಿ, ಸತ್ಯ,ನಿರ್ಲಕ್ಷ್ಯ ಈ ಮೂವಿಯೊಳಗಿನ ಸೈಕಾಲಜಿಗಳು.ಸೊಗಸಾದ ಸಂಭಾಷಣೆಯೇ ಇದರ ನಿಜವಾದ ಆತ್ಮ ಎಂಬಂತೆ ಕಾಣುತ್ತದೆ.ಹಲವರಿಗೆ ಇಂದಿಗೂ ಇದೊಂದು ಮಾಸ್ಟರ್ ಪೀಸ್ ಸಿನಿಮಾ,ಇನ್ನು ಕೆಲವರಿಗೆ ಇದು ಏನೂ ಅಲ್ಲ.ಎಲ್ಲವೂ ಅವರವರ ಭಾವಕ್ಕೆ.ನೋಡಿ ನಿಮಗೆ ಇಷ್ಟ ಆದರೂ ಆಗಬಹುದು ಬರ್ಡ್ ಮ್ಯಾನ್.
#Birdman | Prime
English Movie
Black Comedy/Drama Film
Release - 2014
Movies
Ab
Comments
Post a Comment