ಡಿಮ್ & ಡಿಪ್ಪು
- ಸಮಯ ಸಂದರ್ಭ
ಕಾರು ಯಾವಾಗ ರೋಡಿಗಿಳಿದರೂ
ಕತ್ತಲೆಯಲ್ಲಷ್ಟೇ ಡಿಮ್ & ಡಿಪ್ಪು
ಇಡ್ಲಿ ವಡೆ ಈಗೀಗ ಪ್ಲೇಟಿಗಿಳಿದರೆ
ಬೆಳಿಗ್ಗೆಯೂ ಡಿಪ್ಪು ರಾತ್ರಿಯೂ ಡಿಪ್ಪು
* * * * * * * * * * * * * * * * * * * * * *
- ನೆನಪು
ನನಗೆ ಸೇಬು ಇಷ್ಟವಿಲ್ಲ
ಕಚ್ಚಿ ತಿನ್ನುವುದು ಇನ್ನೂ ಇಷ್ಟವಿಲ್ಲ
ಸೇಬುಗಲ್ಲದ ಹುಡುಗಿ ಸಿಗಬಾರದಿತ್ತಲ್ಲ!
ಸೇಬು ಬದಲು ಸೀಬೆ ತಿನ್ನಬಹುದಲ್ಲ?
ಸೀಬೆಯೋ ಅದಂತು ಮೊದಲೇ ಇಷ್ಟವಿಲ್ಲ
ಅವಳ ನಲ್ಲನಂತೆಯೇ ಅದರ ಒರಟು ಗಲ್ಲ
* * * * * * * * * * * * * * * * * * * * * *
- ಬೆಲೆ ಏರಿಕೆ
ಹಿಂದೆ ಬರೀ ಹತ್ತು
ಈಗಾಗಿದೆ ಇಪ್ಪತ್ತು
ಆಗಾಗ ಕುಡಿಯುತ್ತಿದ್ದೆ
ನಾನು ಸೋಡಾ ಶರಬತ್ತು
* * * * * * * * * * * * * * * * * * * * * *
- ವಿರಹ
ಅವಳೇ ಎಲ್ಲಾ ಅಲ್ಲ
ಪ್ರೀತಿಯೇಕೆ
ಇದನ್ನೊಂದು ಕಲಿಸುವುದೇ ಇಲ್ಲ?
* * * * * * * * * * * * * * * * * * * * * *
- ಪ್ರೇರಣೆ
ನಾನಾಗಬೇಕು ಸಿ ಎಮ್ಮು
ನೋಡುವಾಗಲಷ್ಟೇ ಅನಿಸುವುದು
ಎತ್ತರದ ಹಕ್ಕಿ ಆ ಎಮ್ಮು
* * * * * * * * * * * * * * * * * * * * * *
- ಪ್ರಾಮುಖ್ಯತೆ
ಪಟದ ಇಡ್ಲಿ ವಡೆ ಆದರೆ
ನೋಡಲು ವೆರಿ ಡಿಲೀಷಿಯಸ್
ಹನಿಗವನದೊಳಗಿನ ಇಡ್ಲಿ ವಡೆ
ಆದಂತೆಯೇ ವೆರಿ ಸೀರಿಯಸ್
* * * * * * * * * * * * * * * * * * * * * *
#ಹಿತವಾಗಿ_ಹದವಾಗಿ
ab pacchu
moodubidire
Comments
Post a Comment