Hamilton
#Hamilton | Hotstar
ಇದನ್ನು ಮೂವಿ ಎಂದು ಹೇಳಿದರೆ ತಪ್ಪಾಗುತ್ತದೆ.ಏಕೆಂದರೆ ಹೆಸರಿಗೆ ಮೂವಿ ಆದರೂ ಇದರೊಳಗೆ ಇರುವುದು ಮಾತ್ರ ಶುದ್ಧವಾದ ಒಂದು ನಾಟಕ.ಗೀತಾ ನಾಟಕ ಎಂದರೆ ಇನ್ನೂ ಹೆಚ್ಚು ಸರಿಯಾಗುತ್ತದೆ.ಕಲಾವಿದರು ನೃತ್ಯಿಸುತ್ತಾ,ಅಭಿನಯಿಸುತ್ತಾ ಹಾಡುಗಳ ಮೂಲಕವೇ ಇಲ್ಲಿ ಒಬ್ಬೊಬ್ಬರಾಗಿ ಕಥೆ ಹೇಳುತ್ತಾ ಹೋಗುತ್ತಾರೆ.ಅಂದ ಹಾಗೇ ಸುಮಾರು 2 ಗಂಟೆ 40 ನಿಮಿಷಗಳ ಈ ಇಡೀ ಮೂವಿಯನ್ನು ಬರೀ ಒಂದೇ ಜಾಗದಲ್ಲಿಯೇ ಚಿತ್ರಿಸಲಾಗಿದೆ.ಅದೇ ಮೂವಿಯೊಳಗೆ ನಾಟಕ ನಡೆಯುವಂತಹ ಆ ಒಂದು ರಂಗ ಮಂದಿರವೇ ಈ ಮೂವಿಯ ಏಕೈಕ ವಿಶಾಲ ಕ್ಯಾನ್ವಾಸ್.ಈ ಇಡೀ ಚಿತ್ರದಲ್ಲಿ ತೋರಿಸುವುದು ಕೇವಲ ನಾಟಕ ಒಂದನ್ನೇ ಹೊರತು ಬೇರೆ ಏನನ್ನೂ ಅಲ್ಲ,ಜೊತೆಗೆ ನಾಟಕದ ನಡು ನಡುವೆ ಕರತಾಡನ ಮಾಡಲು ಮುಖವೇ ತೋರಿಸದ ಬಹಳಷ್ಟು ಪ್ರೇಕ್ಷಕರು ಕೂಡ ಇಲ್ಲಿ ಇದ್ದಾರೆ.
ಕಥೆಯ ಬಗ್ಗೆ ಹೆಚ್ಚೇನು ಹೇಳಲು ಹೋಗುವುದಿಲ್ಲ. ಕೆರಿಬಿಯನ್ ದ್ವೀಪದಿಂದ ನ್ಯೂಯಾರ್ಕ್ ಗೆ 1776 ರಲ್ಲಿ ವಲಸೆ ಬರುವ ಅಲೆಕ್ಸಾಂಡರ್ ಹ್ಯಾಮಿಲ್ಟನ್ ಎಂಬ ಅನಾಥನೊಬ್ಬನ,ಅಮೇರಿಕಾದ ಯುದ್ಧ ಪೂರ್ವ ಹಾಗೂ ಯುದ್ಧ ನಂತರದ ಪರಿಸ್ಥಿತಿಗಳೇ ಈ ಮೂವಿಯ ಕಥೆ.
Thomas Kail ಇದನ್ನು ನಿರ್ದೇಶಿಸಿದ್ದು, Daveed Diggs, Lin-Manuel Miranda, Renée Elise Goldsberry ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.Alexander Hamiltonನ ಬಯೋಗ್ರಪಿಯಿಂದ ಪ್ರೇರಿತವಾದ ಮೂವಿ ಇದಂತೆ.ಆದರೆ ಕೊನೆಯವರೆಗೂ ಇದು ಮೂವಿ ಎಂದು ಅನಿಸುವುದೇ ಇಲ್ಲ.ತುಂಬಿದ ಪ್ರೇಕ್ಷಕರ ನಡುವೆ ನಾವು ಕೂಡ ಕುಳಿತುಕೊಂಡು ಯಾವುದೋ ಒಂದು ಚಂದದ ನಾಟಕ ನೋಡಿ,ಬಹಳಷ್ಟು ಸಲ ಕರತಾಡನ ಮಾಡಿ ಕೊನೆಯಲ್ಲಿ ಎದ್ದು ಬಂದಂತಹ ಫೀಲ್ ಕೊಡುತ್ತದೆ ಇದು.ವಿಭಿನ್ನವಾದ ಮೂವಿ ಎಕ್ಸ್ಪೀರಿಯನ್ಸ್ ಗಾಗಿ ಇದನ್ನೊಮ್ಮೆ ನೀವು ನೋಡಲೇಬೇಕು.ಆದರೆ ಇದು ಬಹಳ ಸುಲಭಕ್ಕೆ ಗಂಟಲೊಳಗೆ ಇಳಿಯುವ ತುತ್ತು ಖಂಡಿತವಾಗಿಯೂ ಅಲ್ಲವೇ ಅಲ್ಲ.ತಾಳ್ಮೆ,ಸಹನೆ ಹಾಗೂ ಸಂಯಮ ಈ ಚಿತ್ರಕ್ಕಂತು ಬಹಳಷ್ಟು ಬೇಕು.ಹಾಗಾಗಿ ಬಹುತೇಕ ಜನರಿಗೆ ಇದು ಇಷ್ಟ ಆಗದೆಯೂ ಹೋಗಬಹುದು.ಆದರೂ ವಿಶ್ವ ಸಿನಿರಂಗದಲ್ಲಿ ಮಾತ್ರ ಇದು ಅಪಾರ ಜನ ಮೆಚ್ಚುಗೆ ಗಳಿಸಿದ ಚಿತ್ರವಂತೆ.
#Hamilton | Hotstar
English Movie
Musical Drama/Historical Fiction
Release - 2020
Movies
Ab
Comments
Post a Comment