Minnal Murali
#Minnal_Murali | [ ]
ಇದೊಂದು ಸೂಪರ್ ಹೀರೋ ಮೂವಿ.ಹಾಗಂತ ಭಯಂಕರ ಸೀರಿಯಸ್ ಪಿಚ್ಚರ್ ಏನು ಇದಲ್ಲ.ಇದರಲ್ಲಿ ಬಹಳಷ್ಟು ಗಮ್ಮತ್ ಇದೆ,ಹಾಗಾಗಿಯೇ ನೋಡಲು ಸಿಕ್ಕಾಪಟ್ಟೆ ಮಜವಾಗುತ್ತದೆ.
ಇದರಲ್ಲಿ ಸೂಪರ್ ಪವರ್ ಇರುವ ಇಬ್ಬರು ಇದ್ದಾರೆ.ಇಬ್ಬರಿಗೂ ಖಡಕ್ ಆದ ಸಿಡಿಲೊಂದು ಬಡಿದು ಅಂತಹದ್ದೊಂದು ಅತ್ಯದ್ಭುತ ಸೂಪರ್ ಪವರ್ ಈ ಇಬ್ಬರಿಗೂ ಒಲಿದಿರುತ್ತದೆ.ಇಬ್ಬರಲ್ಲಿ ಒಬ್ಬ ದುಷ್ಟ ಹಾಗೂ ಕೇಡಿ ಆಗಿದ್ದರೆ,ಮತ್ತೊಬ್ಬ ಸಮಾಜದ ಜನರನ್ನು ಬೆಂಕಿಯಿಂದ ಹಾಗೂ ಎಲ್ಲಾ ರೀತಿಯ ಆಪತ್ತಿನಿಂದ ರಕ್ಷಿಸುವ ಶಿಷ್ಟ ಜನರ ಆಪದ್ಬಾಂಧವ ಆಗಿರುತ್ತಾನೆ.
ಅತಿಮಾನುಷ ಪವರ್ ತೋರಿಸುವ ಸಂದರ್ಭದಲ್ಲಿ ಕಥೆಯ ಕೇಡಿ ಮುಂಡು(ಲುಂಗಿ)ಕಟ್ಟಿಕೊಂಡು ಯಾರಿಗೂ ಮುಖ ಕಾಣದಂತೆ ತಲೆಗೊಂದು ನೀರುಳ್ಳಿ ಗೋಣಿ ಹಾಕಿಕೊಂಡಿದ್ದರೆ,ಸಿನಿಮಾದ ಹೀರೋ ಮುಂಡು ಕಟ್ಟಿಕೊಂಡು ತಲೆಗೂ ಮುಂಡನ್ನೇ ಗಟ್ಟಿಯಾಗಿ ಸುತ್ತಿಕೊಂಡಿರುತ್ತಾನೆ.ಹೀರೋ ಕೊನೆಯಲ್ಲಿ ಮಾತ್ರ ಕೇಡಿಯನ್ನು ಹಣ್ಣುಗಾಯಿ ನೀರುಗಾಯಿ ಮಾಡುವಾಗ ಚಂದದೊಂದು ಸೂಪರ್ ಹೀರೊ ಕಾಸ್ಟ್ಯೂಮ್ ಹಾಕಿಕೊಂಡು ಬಂದು ಇನ್ನಿಲ್ಲದಂತೆ ಜಿಗ್ಗ ಕಾಣುತ್ತಾನೆ.ನನಗೆ ಅದು ಡ್ರೆಸ್ ಸಂತೆಯ ಕಾಸ್ಟ್ಯೂಮ್ ನಂತೆ ಕಾಣದೆ ಬಹಳ ಚಂದವಾಗಿ ಕಂಡಿತು ಹಾಗೂ ಇಷ್ಟವಾಯಿತು.
ಇಲ್ಲಿಯ ಕೇಡಿ ನಿಜವಾಗಿಯೂ ತುಂಬಾ ಪಾಪದ ಜನ.ಹೋಟೆಲ್ ನಲ್ಲಿ ಚಹಾ ಮಾಡುತ್ತಾ,ಸಮಯ ಸಿಕ್ಕಿದಾಗಲೆಲ್ಲ ಪುಂಖಾನುಪುಂಖವಾಗಿ ಉಗಿಬಂಡಿಯಂತೆ ಬೀಡಿ ಸೇದಿ ಪುಗೆ(ಹೊಗೆ) ಬಿಡುವ ಒಬ್ಬ ಅಮಯಾಕ ಜನ ಅವನು.ಆದರೆ ಅವನೊಳಗೆ ಒಬ್ಬ ಅಂದಕಾಲತ್ತಿಲ್ ಸಮಯದ ಭಗ್ನ ಪ್ರೇಮಿ ಜೀವಂತವಾಗಿ ಇರುತ್ತಾನೆ.ಅವನು ಅವನದ್ದೊಂದು ಕೈ ತಪ್ಪಿ ಹೋದ ಪ್ರೇಮವನ್ನು ಮತ್ತೆ ಪಡೆಯಲು ಹೋಗುವಾಗ ಆಗುವ ಪಜೀತಿಗಳೇ,ಕೈ ಮೀರಿದ ಪರಿಸ್ಥಿತಿಗಳೇ ಅವನನ್ನು ಊರಿನ ದುಷ್ಟ ಪ್ರಜೆಯನ್ನಾಗಿ ಮಾಡುತ್ತದೆ.ಪಾಪ ಅವನಿಗೆ ಸಿಡಿಲು ಬಡಿದು ಈ ಸೂಪರ್ ಪವರ್ ಒಂದು ಸಿಗದೇ ಹೋಗಿದ್ದರೆ ಅವನು ಎಂದಿನಂತೆ ಬಿಡಿ ಸೇದುತ್ತಾ,ಪುಗೆ ಬಿಡುತ್ತಾ ಪಾಪದ ನರಮಾನಿ ಆಗಿಯೇ ಇರುತ್ತಿದ್ದ,ಖಂಡಿತಾ ಈ ನೀರುಳ್ಳಿ ಗೋಣಿ ಕಾಸ್ಟ್ಯೂಮ್ ನ ಕೇಡಿ ಅವನು ಆಗುತ್ತಿರಲಿಲ್ಲ.ಈ ಕೇಡಿ ಹಾಗೂ ಹೀರೋ ನಡುವಿನ ಕಥೆಯೇ ಈ Minnal Murali. ಏತಕ್ಕಾಗಿ ಈ ತರಹದ್ದೊಂದು ಹೆಸರು ಮೂವಿಗಿದೆ? ಇದರ ನಿಜವಾದ ಕಥೆ ಏನು? ಎಂಬುದನ್ನು ನೀವು ಮೂವಿಯಲ್ಲೇ ನೋಡಬೇಕು ಹಾಗೂ ನೋಡಿ ಎಂಜಾಯ್ ಮಾಡಬೇಕು. .
Basil Joseph ಇದನ್ನು ನಿರ್ದೇಶಿಸಿದ್ದು,Tovino Thomas, Guru Somasundaram, Aju Kurian Varghese ಮುಂತಾದವರು ಇದರಲ್ಲಿ ಅಭಿನಯಿಸಿದ್ದಾರೆ,ಅಂದ ಹಾಗೆ ಇದು Netflix ನಲ್ಲಿದೆ.Tovino Thomas ಹಾಗೂ Guru Somasundaram ಇಬ್ಬರ ಅಭಿನಯವೂ ತುಂಬಾ ಸೊಗಸಾಗಿದೆ,ಇಬ್ಬರೂ ನಿಮಗೂ ಒಟ್ಟೊಟ್ಟಿಗೆ ಇಷ್ಟವಾಗಬಹುದು ಎಂದು ನನ್ನ ಅನಿಸಿಕೆ.
ನೀವು ಬಾಲಿವುಡ್ ಸೂಪರ್ ಹೀರೋ ಗಳನ್ನು ಅಪ್ಪಿ ಮುದ್ದಾಡುತ್ತೀರಿ ಎಂದಾದರೆ ಇದು ಮನರಂಜನೆಯಲ್ಲಿ ಯಾವ ರೇಂಜಿಗಿಂತಲೂ ಅವುಗಳಿಗಿಂತ ಸ್ವಲ್ಪವೂ ಕಡಿಮೆ ಇಲ್ಲ.ಈ ದೇಸಿ ಸೂಪರ್ ಹೀರೋ ಮೂವಿ Minnal Murali ಮೊದಲು ಸಿಕ್ಕಾಪಟ್ಟೆ ನಗಿಸುತ್ತದೆ,ಕೊನೆ ಕೊನೆಗೆ ಮಾತ್ರ ಕಥೆ ಗಂಭೀರವಾಗುತ್ತ ಹೋಗುತ್ತದೆ.ಸಂಭಾಷಣೆಗಳು ಸಿಕ್ಕಾಪಟ್ಟೆ ಕಚಗುಳಿ ಇಡುತ್ತದೆ.ಪುಟ್ಟ ಬಾಲಕ ಹೇಳುತ್ತಾನೆ ಸ್ಪೈಡರ್ ಮ್ಯಾನ್ ಜೇಡ ಕಚ್ಚಿ ಸ್ಪೈಡರ್ ಮ್ಯಾನ್ ಆದದ್ದು ಅಂತೆ,ಆದರೆ ಈ ಬ್ಯಾಟ್ ಮ್ಯಾನ್ ಎಲ್ಲೋ ಕ್ರಿಕೆಟ್ ಆಡುವಾಗ ಯಾರೋ ಬ್ಯಾಟಿನಲ್ಲಿ ಅವನಿಗೆ ಸಮಾ ಮಂಡೆ ಬಡಿದಾಗ ಅವನು ಬ್ಯಾಟು ಮ್ಯಾನ್ ಆಗಿ ಬದಲಾಗಿದ್ದು ಅಂತೆ.
ಹೀರೋ ಇಲ್ಲಿ ಹೆಚ್ಚಾಗಿ ಸೈಕಲ್ ನಲ್ಲಿಯೇ ಓಡಾಡುವುದು ಮತ್ತು ಅವನು ಜಾಸ್ತಿಯಾಗಿ ಬ್ರ್ಯಾಂಡೆಡ್ ಉಡುಪುಗಳನ್ನೇ ಧರಿಸಿ ಆ ಹಳ್ಳಿಯಲ್ಲಿ ಗತ್ತಿನಿಂದ ತಿರುಗಾಡುತ್ತಾ ಇರುತ್ತಾನೆ.ಅವನು ಹಾಕಿಕೊಂಡಿರುವ ಟೀ ಶರ್ಟ್ ಈ Adibas ಕಂಪನೆಯಿದ್ದು.ಅವನ ಪ್ರಕಾರ ಮಾರ್ಕೆಟ್ ನಲ್ಲಿ ಈಗ ಎಲ್ಲಾ ಬ್ರ್ಯಾಂಡ್ ಗಳನ್ನು ನಕಲಿ ಮಾಡುತ್ತಾರಂತೆ,ನಿಜವಾಗಿಯೂ ಈಗ ಇರುವ Adidas ಕಂಪನೆಯ ಒರಿಜಿನಲ್ ಹೆಸರೇ ಈ Adibas ಅಂತೆ.
ಒಟ್ರಾಸಿ ಬ್ರಿಲಿಯಂಟ್ ಪೋಲಿಸ್ ಗಳು ಇಲ್ಲಿ ಸಿಕ್ಕಾಪಟ್ಟೆ ನಗಿಸುತ್ತಾರೆ.Aju Kurian Varghese ನ ಮರ್ಲ್ ಎಂದಿನಂತೆ ಇಲ್ಲೂ ಇದೆ ಮತ್ತು ಇಷ್ಟವಾಗುತ್ತದೆ.ಒಟ್ಟಿನಲ್ಲಿ ನನಗೆ ಇದು ತುಂಬಾ ಇಷ್ಟವಾಯಿತು.ಹಾಗೇ ನಕ್ಕು ಹಗುರವಾಗಲು ಒಂದೊಳ್ಳೆಯ ಸಿನೆಮಾ ಇದು.Tovino Thomas ಇದರಲ್ಲಿ ಇನ್ನಷ್ಟು ಚಂದ ಕಾಣುತ್ತಾನೆ ಇಲ್ಲಿ.ನಿರ್ದೇಶನ ಹಾಗೂ ಸ್ಕ್ರಿಪ್ಟ್ ವರ್ಕ್ ಸಹ ಅಷ್ಟೇ ಚೆನ್ನಾಗಿದೆ.ಸಂಗೀತ ಕೂಡ ಇಂಪಾಗಿದೆ.ಕೇಡಿಯ ಲವ್ ಸ್ಟೋರಿಗೆ ಕೊಟ್ಟ ಬ್ಯಾಕ್ಗ್ರೌಂಡ್ ಸ್ಕೋರ್ ಅಂತು ಮನಸ್ಸನ್ನು ಮೆಲ್ಲಗೆ ತಟ್ಟುತ್ತದೆ,ಅವನಿಗೊಂದು ನಮ್ಮ ಹೃದಯದಲ್ಲಿ ಅನುಕಂಪದ ಅಲೆ ಹಾಗೆ ಮೇಲೆ ಏಳುವಂತೆ ಮಾಡುತ್ತದೆ.ಸೂಪರ್ ಹೀರೋ ಮೂವಿ ಮಾಡಲು ಹೋಗಿ ಮೂವಿಯೇ ಹಾಸ್ಯಾಸ್ಪದ ಆಗಿದೆ ಅಂತ ನನಗಂತು ಎಲ್ಲೂ ಅನಿಸಲಿಲ್ಲ.ಬದಲಿಗೆ ಕಾಮಿಡಿಯನ್ನು ಸೇರಿಸಿಕೊಂಡೇ ಈ ಮೂವಿ ಮಾಡಿದ್ದರಿಂದ ಮೂವಿ ಎಲ್ಲಿಯೂ ಸ್ವಲ್ಪವೂ ಬೋರ್ ಹೊಡಿಸದೇ ಹಾಗೇ ಇಷ್ಟವಾಗುತ್ತಾ ಹೋಗುತ್ತದೆ.ನೋಡಿ ನಿಮಗೂ ಇಷ್ಟವಾಗಬಹುದು ಮುಂಡು ಸುತ್ತಿಕೊಂಡು ಪೆಟ್ಟ್ ಲಡಾಯಿ ಮಾಡುವ Minnal Murali ಹಾಗೂ ಒರಿಜಿನಲ್ Minnal Murali...
#Minnal_Murali | [ ]
Malayalam Movie
Super Hero Film
Release - December 2021
Movies
Ab Pacchu
Comments
Post a Comment