ಲೇಝಿ ಎಲಿಗೇನ್ಸ್ ನ ಹಿಟ್ ಮ್ಯಾನ್ ಶರ್ಮ..
" ಲೇಝಿ ಎಲಿಗೇನ್ಸ್ ನ ಹಿಟ್ ಮ್ಯಾನ್ ಶರ್ಮ.."
ಟೀಮ್ ಇಂಡಿಯಾ ಇಂಗ್ಲೆಂಡ್ ಪ್ರವಾಸದಲ್ಲಿದ್ದಾಗ ಆಗ ಕಾಮೆಂಟರಿ ತಂಡದಲ್ಲಿದ್ದ ದಿನೇಶ್ ಕಾರ್ತಿಕ್,ರೋಹಿತ್ ಶರ್ಮನ ಜೊತೆ ನಡೆಸಿದ ಸಂದರ್ಶನವೊಂದರಲ್ಲಿ ಈ ಪ್ರಶ್ನೆಯನ್ನು ಕೇಳಿದ್ದ,"ರೋಹಿತ್ ನಿನ್ನ ಆಟ Lazy Elegance ನಿಂದ ಕೂಡಿದೆ ಎಂದು ಜನರು ಹೇಳುತ್ತಲೇ ಇರುತ್ತಾರೆ,ಇದರ ಬಗ್ಗೆ ನಿನ್ನ ಅಭಿಪ್ರಾಯ ಏನು? ".
ಇದಕ್ಕೆ ರೋಹಿತ್ ನ ಉತ್ತರ ಹೀಗಿತ್ತು "ನನಗಿದು ಅರ್ಥವೇ ಆಗುವುದಿಲ್ಲ,ಕೇಳಲು ಈ ಮಾತು ಚಂದ ಅನಿಸಬಹುದು ಇಲ್ಲವೇ ಮೆಚ್ಚುಗೆಯೂ ಇರಬಹುದೋ ಏನೋ ನನಗದು ಗೊತ್ತಿಲ್ಲ,ಬಹುಶಃ ನೋಡಲು ಮೇಲ್ನೋಟಕ್ಕೆ ಹಾಗೆ ಕಾಣಬಹುದು ಅಷ್ಟೇ,ಆದರೆ ಯಾವುದೇ ಆಟದಲ್ಲಿ ಆಟಗಾರನೊಬ್ಬ ತೀರಾ Lazy Elegance ಹೊಂದಿರುವುದು ಅದು ಯಾವತ್ತಿಗೂ ಸಾಧ್ಯವಾಗದು ಮಾತೇ ಆಗಿರುತ್ತದೆ.ಅದರಲ್ಲೂ ಕ್ರಿಕೆಟ್ ನಂತಹ ಆಟದಲ್ಲಿ(ವಿಶೇಷವಾಗಿ ವಿದೇಶಿ ಪಿಚ್ ಗಳಲ್ಲಿ ಆಡುವಾಗ)145 Km/h ಕ್ಕಿಂತಲೂ ಅಧಿಕ ವೇಗದಲ್ಲಿ ವೇಗದ ಬೌಲರ್ ಒಬ್ಬ ಬೌನ್ಸರ್ ಎಸೆದಾಗ ನಿಂತಲ್ಲೇ ನಿಂತುಕೊಂಡು(ಸ್ಪ್ಲಿಟ್ ಸೆಕೆಂಡ್ ನಲ್ಲಿ ಫ್ರಂಟ್ ಪುಟ್ ನಿಂದಲೇ ನೇರವಾಗಿ ಫುಲ್ ಶಾಟ್ ರೋಹಿತ್ ಹೊಡೆಯಬಲ್ಲ) ಹೊಡೆಯಲು ಈ Lazy Elegance ನಿಂದ ಹೇಗೆ ಸಾಧ್ಯ ನೀವೇ ಹೇಳಿ? ಒಂದು ವೇಳೆ ಅಂತಹ Lazy ಇದ್ದರೆ ಬಾಲ್ ನೇರವಾಗಿ ಬಂದು ತಲೆಗೆ ಬಡಿಯುತ್ತದೆಯೇ ಹೊರತು ಇನ್ನೇನು ಆಗಲು ಸಾಧ್ಯವಿಲ್ಲ.ಆದರೂ ನಾನು ಆಟ ಶುರು ಮಾಡಿದಾಗಿನಿಂದಲೂ ಜನರು ನನ್ನನ್ನು Lazy Elegance ನ ಆಟಗಾರ Lazy Elegance ನ ಆಟಗಾರ ಎಂದೇ ಹೇಳುತ್ತಾರೆ,ಇದನ್ನೆಲ್ಲ ಹೆಚ್ಚಾಗಿ ನಾನು ತಲೆಗೆ ತೆಗೆದುಕೊಳ್ಳುವುದಿಲ್ಲ,ಜಸ್ಟ್ ಆಟವನ್ನು ಎಂಜಾಯ್ ಮಾಡುತ್ತೇನೆ ಅಷ್ಟೇ.ಏಕೆಂದರೆ ನನ್ನ ಪ್ರಕಾರ ಈ ರೀತಿಯಾಗಿ ಇರಲು ಸಾಧ್ಯವಿಲ್ಲ".ಇದು ವಿಶ್ವ ಕ್ರಿಕೆಟ್ ನಲ್ಲಿ ಇಂದು ನೀರು ಕುಡಿದಷ್ಟು ಸಲೀಸಾಗಿ ಫುಲ್ ಶಾಟ್ ಹೊಡೆಯುವ ರೋಹಿತ್ ಶರ್ಮ Lazy Elegance ಬಗ್ಗೆ ಹೇಳಿದ ಮಾತುಗಳಾಗಿದ್ದವು.
Lazy Elegance ಬಗ್ಗೆ ಈ ರೀತಿ ಉತ್ತರಿಸಿದ್ದ ರೋಹಿತ್ ಶರ್ಮ ದಿನೇಶ್ ಕಾರ್ತಿಕ್ ಮುಂದೆ ತಾನೇ ಇನ್ನೊಂದು ಪ್ರಶ್ನೆಯನ್ನು ಇರಿಸಿದ್ದ." ನೋಡಿ,ಕೆಲವರು(ಹೆಚ್ಚಾಗಿ ಈ ಕ್ರಿಕೆಟ್ ಪಂಡಿತರು,ತಜ್ಞರು,ಕಾಮೆಂಟೇಟರ್ ಹಾಗೂ ವಿಶ್ಲೇಷಕರು)ರೋಹಿತ್ ಬಳಿ ಆಟವಾಡುವಾಗ ಎಕ್ಸ್ಟ್ರಾ ಟೈಮ್ ಇರುತ್ತದೆ,ಹಾಗಾಗಿ ಅವನು ಇಷ್ಟು ಸುಲಭವಾಗಿ ಈ ಎಲ್ಲಾ ಶಾಟ್ ಗಳನ್ನು ಇತರರಿಗಿಂತ ಎಫರ್ಟ್ ಲೆಸ್ ಆಗಿ ಹೊಡೆದು ಬಿಡುತ್ತಾನೆ ಎಂದೆಲ್ಲಾ ಹೇಳುತ್ತಾರೆ,ನಾನು ಕೂಡ ಈ ಮಾತುಗಳನ್ನು ಬಹಳಷ್ಟು ಸಲ ಕೇಳಿಸಿಕೊಂಡಿದ್ದೇನೆ.... "
ಅಷ್ಟನ್ನು ಹೇಳಿ ಮುಗಿಸಿದ ರೋಹಿತ್ ತನ್ನ ಎಂದಿನ ಶೈಲಿಯಲ್ಲಿ ನಗುತ್ತಲೇ ಮತ್ತೆ ತನ್ನ ಮಾತು ಮುಂದುವರಿಸಿದ್ದ.." ನೋಡಿ ಜಗತ್ತಿನಲ್ಲಿ ಎಲ್ಲರಿಗೂ ಎಷ್ಟು ಸಮಯವಿದೆಯೋ ನನಗೂ ಅಷ್ಟೇ ಸಮಯವಿದೆ.ಇಲ್ಲಿ ಯಾರಿಗೇ ಆಗಲಿ ಹೆಚ್ಚು ಸಮಯವಾಗಲಿ ಇಲ್ಲವೇ ಕಡಿಮೆ ಸಮಯವಾಗಲಿ ಟೆಕ್ನಿಕಲಿ ಇರಲು ಸಾಧ್ಯವೇ ಇಲ್ಲ.ಒಬ್ಬೊಬ್ಬರದ್ದು ಒಂದೊಂದು ಶೈಲಿಯ ಆಟವಿರುತ್ತದೆ ಅಷ್ಟೇ.ನಾವು ಕೆಲವೊಮ್ಮೆ ಬಾಲ್ ಗಿಂತ ಮೊದಲೇ ಆಟವಾಡಿರಬಹುದು,ಇನ್ನು ಕೆಲವೊಮ್ಮೆ ಅದು ಸ್ವಲ್ಪವೇ ಸ್ವಲ್ಪ ಲೇಟ್ ಆಗಿ ಬಿಡಬಹುದು.ನಿಜ ಹೇಳಬೇಕೆಂದರೆ ಆಟಗಾರನೊಬ್ಬ ಆಟವಾಡುವಾಗ ಕ್ವಿಕ್ ಆಗಿದ್ದರಷ್ಟೆ ಅಲ್ಲವೇ,ಈ ರೀತಿಯಾಗಿ ಎಫರ್ಟ್ ಲೆಸ್ ಆಗಿ ಸರಿಯಾದ ಸಮಯಕ್ಕೆ ಸರಿಯಾದ ಹೊಡೆತಗಳನ್ನು ಬಾರಿಸಲು ಸಾಧ್ಯವಾಗುವುದು?.." ಎಂದು ನಗುನಗುತ್ತಲೇ ಇನ್ನೂ ಒಂದು ಪ್ರಶ್ನೆಯನ್ನು ಕಾರ್ತಿಕ್ ಗೆನೇ ಕೇಳಿದ್ದ ರೋಹಿತ್ ಶರ್ಮ.ರೋಹಿತ್ ನ ಈ ಕ್ವಿಕ್ ಆಗಿ ಆಟವಾಡುವ ಬಗೆಗಿನ ಉತ್ತರ Lazy Elegance ಗೆ ಆತ ಮೊದಲೇ ನೀಡಿದ್ದ ಉತ್ತರಕ್ಕೆ ಮತ್ತಷ್ಟು ಬೆಳಕು ಚೆಲ್ಲಿತ್ತು ಹಾಗೂ ತಾನೇಕೆ ಅಷ್ಟೊಂದು Lazy ಆಟಗಾರ ಅಲ್ಲ ಎನ್ನುವುದನ್ನು ಸಾಬೀತು ಪಡಿಸಿತ್ತು.
ರೋಹಿತ್ ಹಾಗೆಯೇ,ಅವನ ಮಾತುಗಳಂತೆಯೇ ಅವನು.ಪ್ರೆಸ್ ಮುಂದೆ ಮಾತಾಡಲು ಕುಳಿತುಕೊಂಡಾಗ ಕೂಡ ಅವನು ಕೆಲವೊಮ್ಮೆ ತೀರಾ ಅಮಾಯಕನಂತೆ ಮಾತಾಡುತ್ತಾನೆ,ತುಂಬಾ ಪೆಕ್ರನಂತೆ ಕಾಣಿಸುತ್ತಾನೆ,ನಡು ನಡುವೆ ತಡವರಿಸುತ್ತಾನೆ.ಪ್ರಶ್ನೆ ಕೇಳಿದವನಿಗೆಯೇ ಮರು ಪ್ರಶ್ನೆ ಎಸೆದು ನಗಿಸುತ್ತಾನೆ,ಅವನೂ ಎಲ್ಲಾ ಹಲ್ಲು ಬಿಟ್ಟು ಹಾಗೇ ಒಮ್ಮೆ ನಕ್ಕು ಬಿಡುತ್ತಾನೆ.ಅವೆಲ್ಲಾ ಏನೇ ಇದ್ದರೂ ಅವನು ಮಾತ್ರ ಮೈದಾನದಲ್ಲಿ ಅವನ ಲಹರಿಯಲ್ಲಿಯೇ ಸದಾ ಆಡುತ್ತಾನೆ,ಅವನು ಆಡಿದಾಗಲೆಲ್ಲ ಕ್ರಿಕೆಟ್ ಪ್ರೇಮಿಗಳ ಕಣ್ಣಿಗಂತು ಬಹಳಷ್ಟು ಕ್ರಿಕೆಟ್ ಹಬ್ಬವೇ ಹೌದು.
ರೋಹಿತ್ ನನ್ನು ಇಂದಿಗೂ ತುಂಬಾ ಜನ ಅವನು ಭಯಂಕರ ಸ್ಲೋ,ಅವನು ಡುಮ್ಮ,ಫಿಟ್ ನೆಸ್ ಇಲ್ಲ,ಅವನೊಬ್ಬ ವಡಾ ಪಾವ್,ಅವನಿಗೆ ಸಿಕ್ಕಾಪಟ್ಟೆ ವಯಸ್ಸಾಗಿದೆ,ಅವನು ಕ್ಯಾಪ್ಟನ್ ಮೆಟೀರಿಯಲ್ಲೇ ಅಲ್ಲ ಎಂದೆಲ್ಲಾ ಹೇಳಿ ಕೊಂಕು ನುಡಿಯುವವರನ್ನು ನಾವು ಅಲ್ಲಲ್ಲಿ ಕಾಣುತ್ತಲೇ ಇರುತ್ತೇವೆ.ಆವಗಾಲೆಲ್ಲ ವೇಗವಾಗಿ,ಎಫರ್ಟ್ ಲೆಸ್ ಆಗಿ ಮತ್ತು ಅಷ್ಟೇ ಕ್ವಿಕ್ ಆಗಿ ಫುಲ್ ಶಾಟ್ ಹೊಡೆಯುವ ರೋಹಿತ್ ನ ಮೇಲಿನ ಮನದಾಳದ ಮಾತುಗಳೇ ನನಗಂತು ಅತಿಯಾಗಿ ನೆನಪಾಗಿ ಬಿಡುವುದು.
ರೋಹಿತ್ ನನ್ನು ಹೊರತು ಪಡಿಸಿ ಕ್ರಿಕೆಟ್ ಬಗ್ಗೆಯೇ ಹೇಳಬೇಕೆಂದು ಅನಿಸುವ ಇನ್ನೊಂದು ಮಾತು ಯಾವುದೆಂದರೆ, ನಮ್ಮ ನೆಚ್ಚಿನ ಆಟಗಾರನ ಮೇಲೆ ನಮ್ಮ ಅಭಿಮಾನ ವ್ಯಕ್ತ ಪಡಿಸುವಾಗ,ಮತ್ತೊಬ್ಬ ಆಟಗಾರ ಕೀಳು ಎಂದು ಹೇಳಿ ಇಲ್ಲವೇ ತೀರಾ ವೈಯಕ್ತಿಕವಾಗಿ ವ್ಯಂಗ್ಯ ನುಡಿದು ವ್ಯಕ್ತಪಡಿಸುವ ನಮ್ಮದೊಂದು ಪೂರ್ವಾಗ್ರಹ ಪೀಡಿತ ಅಭಿಪ್ರಾಯವೇ ಯಾವತ್ತೂ ಕೀಳು ಮಟ್ಟದಾಗಿರುತ್ತದೆಯೇ ಹೊರತು ಯಾವುದೇ ಆಟಗಾರ ನಮ್ಮದೊಂದು ಅಂತಹ ಅಭಿಪ್ರಾಯದಿಂದ ಕೀಳಾಗಲು ಸಾಧ್ಯವಿಲ್ಲ.
ಯಾರೇ ಆಡಲಿ,ಅವರ ಆಟಕ್ಕೊಂದು ಮೆಚ್ಚುಗೆಯ ಹೂವು ನಮ್ಮಲ್ಲಿ ಹಾಗೇ ಅರಳಿ ಬಿಡಬೇಕು.ಇಲ್ಲದಿದ್ದರೆ ನಿಜವಾದ ಆಟದ ಸುಖ ಎಂದಿಗೂ ನಮ್ಮದಾಗುವುದಿಲ್ಲ.ನಮ್ಮೊಳಗೊಂದು ಬರೀ ದ್ವೇಷವೊಂದನ್ನೇ ನಾವೇ ಸ್ವತಃ ಚಿಗುರಿಸಿ ಹಾಗೇ ಅದನ್ನು ಮತ್ತಷ್ಟು ಇನ್ನಷ್ಟು ಪಂದ್ಯದಿಂದ ಪಂದ್ಯಕ್ಕೆ ಬೆಳೆಸುತ್ತಲೇ ಹೋಗುವುದಾದರೆ ಕ್ರಿಕೆಟ್ ಆಗಲಿ ಯಾವುದೇ ಆಟವಾಗಲಿ ನಾವು ನಿಜವಾಗಿಯೂ ಏತಕ್ಕಾಗಿ ನೋಡಬೇಕು..!
ರೋಹಿತ್ ನ ಇಂದಿನ ಆ ಸ್ಟ್ರೈಟ್ ಡ್ರೈವ್ ಬೌಂಡರಿ,ಬ್ಯಾಕ್ ಫುಟ್ ಪಂಚ್ ಬೌಂಡರಿ ಹಾಗೂ ಆ ಒಂದು ಅತೀ ಸರಳವೆನಿಸುವ ಫುಲ್ ಶಾಟ್ ಸಿಕ್ಸರ್ ಕೂಡ ಎಂದಿನಂತೆ ಇಂದು ಸಹ ಬಹಳಷ್ಟು ಸೊಗಸಾಗಿಯೇ ಇತ್ತು.51 ಎಸೆತಗಳಲ್ಲಿ 10 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 60 ರನ್ ಗಳು ಅವನ ಬ್ಯಾಟ್ ನಿಂದ ಹರಿದು ಬಂದಿತ್ತು.ಬೌಲಿಂಗ್ ನಲ್ಲಿ ಚಾಹಲ್ ನ 4 ವಿಕೆಟ್ ಹಾಗೂ ವಾಷಿಂಗ್ಟನ್ ಸುಂದರ್ ನ 3 ವಿಕೆಟ್ ವೆಸ್ಟ್ ಇಂಡೀಸ್ ಅನ್ನು ಇಂದು ತುಂಬಾನೇ ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕಿ ಬಿಟ್ಟಿತ್ತು.ಹಾಗಾಗಿ ಮೊದಲ ಪಂದ್ಯದ ಗೆಲುವು ನಮ್ಮದೇ ಆಯಿತು..
Ind Vs West Indies
1st ODI - Ahmedabad
West Indies - 176/10(43.5 Over)
India - 178/4(28 Over)
MOM - Yuzvendra Chahal
India Won by 6 Wickets
Cricket
ab
Comments
Post a Comment