ಸೇಬುಗಲ್ಲದ ಹುಡುಗಿ
" ನೀಲಮೇಘ " ( ಸೇಬುಗಲ್ಲದ ಹುಡುಗಿ..) ಅದು ಸಂಜೆಯ ಸಮಯ.ಬಹಳ ದೂರದಿಂದ ನೋಡುವಾಗ ಸೇತುವೆಯ ಮೇಲೆ ಯಾರೋ ಇರುವಂತೆ ಕಂಡಿತು ನನಗೆ.ಇನ್ನಷ್ಟು ಹತ್ತಿರಕ್ಕೆ ಹೋದಾಗ ನನ್ನ ಆ ಊಹೆ ನೂರಕ್ಕೆ ನೂರು ನಿಜವೇ ಆಗಿತ್ತು. ಸೇತುವೆಯ ನಡುವಲ್ಲಿ ಅದರ ಒಂದು ಬದಿಯ ಎತ್ತರದ ಆ ಕಟ್ಟೆಯನ್ನು ಹತ್ತಿ ಅದರ ಮೇಲೆಯೇ ಕುಳಿತುಕೊಂಡು ಕೆಳಗೆ ರಭಸದಿಂದ ಹರಿಯುವ ನೀರನ್ನೇ ತದೇಕಚಿತ್ತದಿಂದ ನೋಡುತ್ತಾ ಕುಳಿತಿದ್ದಳು ಒಬ್ಬಳು ಹುಡುಗಿ. ಖಂಡಿತವಾಗಿಯೂ ಅವಳು ಮೀನು ಹಿಡಿಯಲು ಬಂದವಳಲ್ಲ ಎಂದು ನನಗೆ ಅನಿಸಿತು.ಏಕೆಂದರೆ ಅವಳ ಕೈಯಲ್ಲಿ ಯಾವುದೇ ಮೀನು ಹಿಡಿಯುವ ಗಾಳವಿರಲಿಲ್ಲ,ಮಾತ್ರವಲ್ಲ ಅವಳ ಪಕ್ಕದಲ್ಲಿ ಹಿಡಿದ ಮೀನುಗಳನ್ನು ಹಾಕುವುದಕ್ಕಾಗಿ ಯಾವುದೇ ತೊಟ್ಟೆಯೂ ಇರಲಿಲ್ಲ. ಅವಳು ಗಾಳಿ ಸೇವನೆಗೆ ಏನಾದರೂ ..? ಇಲ್ಲ..ಇಲ್ಲ.. ಅದಕ್ಕೂ ಕೂಡ ಅವಳು ಬಂದವಳಲ್ಲ ಎಂದೇ ನನಗೆ ಅನಿಸಿತು.ಅದರ ಬದಲು ಯಾಕೆ ಅವಳು ಸಿಗರೇಟು ಸೇದಲೆಂದೇ ಅಲ್ಲಿ ಕುಳಿತಿರಬಾರದು? ಅವಳು ಪಕ್ಕದಲ್ಲಿಯೇ ಯಾಕೆ ತಣ್ಣನೆಯ ಬಿಯರ್ ಬಾಟಲಿ ಕೂಡ ಇಟ್ಟುಕೊಂಡಿರಬಾರದು?..ಎಂದೇ ನನಗೆ ಬಲವಾಗಿ ಅನಿಸಿ...