ಬೆಟ್ಟದ ಹೆಜ್ಜೆಗಳು | ದಿನೇಶ್ ಹೊಳ್ಳ

ಬೆಟ್ಟದ ಹೆಜ್ಜೆಗಳು | ದಿನೇಶ್ ಹೊಳ್ಳ " ಎಲೆಗಳೆಡೆಯಲವಿತಿದೆ ಹಣ್ಣು ಹಣ್ಣಿನೊಳಗವಿತಿದೆ ನಾಳೆಯ ಮರ ನಿನ್ನೆಯ ಚಿಗುರು ನಾಳೆಯ ಬಾಗಿಲು ನಡುವೆ ಒಂದಿಷ್ಟು ಹೆಜ್ಜೆಗಳು...." ಎಂದು ಕಾವ್ಯಾತ್ಮಕವಾಗಿಯು ಜೊತೆಗೆಯೇ ಬಹಳಷ್ಟು ಮಾರ್ಮಿಕವಾಗಿಯೂ ಹೇಳುವ ಲೇಖಕರು ಇಲ್ಲಿ ತಾವು ಸದಾ ಹೆಜ್ಜೆ ಹಾಕುವ ಬೆಟ್ಟದ ದಾರಿಯಲ್ಲಿ ನೇರವಾಗಿ ಕಂಡಿದ್ದನ್ನು, ಒಂದಿಷ್ಟು ಕಲ್ಪಿಸಿಕೊಂಡಿದ್ದನ್ನು, ಸುತ್ತಲಿನ ಜಗತ್ತಿನಲ್ಲಿ ತಮಗೆ ಅನುದಿನವೂ ಕಾಡುವಂತಹದ್ದನ್ನು, ಸತತವಾಗಿ ಸತಾಯಿಸಿದ್ದನ್ನು, ಹೀಗೆ ಎಲ್ಲವನ್ನೂ ಒಟ್ಟು ಸೇರಿಸಿ ಅವುಗಳಿಗೊಂದು ಕತೆಯ ರೂಪ ಕೊಟ್ಟು, 'ಬೆಟ್ಟದ ಹೆಜ್ಜೆಗಳು' ಎಂಬ ಕಥಾ ಸಂಕಲನವನ್ನಾಗಿಸಿದ್ದಾರೆ. ಮುನ್ನುಡಿ, ಬೆನ್ನುಡಿ ಎಂಬ ಯಾವುದೇ ಕನ್ನಡಿಯಿಲ್ಲದೆ ಬಹಳಷ್ಟು ವರ್ಷಗಳ ಹಿಂದೆಯೇ ಚಾರ್ಮಾಡಿ ಘಾಟಿಯ ಬೆಟ್ಟವೊಂದರ ಹಸಿರ ತಂಪಲ್ಲಿ ಬಿಡುಗಡೆಗೊಂಡ ಎಂಟು ಪುಟ್ಟ ಪುಟ್ಟ ಕತೆಗಳ ಗೊಂಚಲು ಈ ಬೆಟ್ಟದ ಹೆಜ್ಜೆಗಳು. ಇದರ ಕತೆಗಳು ಕೂಡ ಬಹಳಷ್ಟು ಸಣ್ಣವೇ, ಒಂದು ಪೇಜಿನಲ್ಲಿಯೇ ಮುಗಿದು ಹೋಗುವಂತಹ ಕತೆಗಳು ಕೂಡ ಇದರಲ್ಲಿದೆ. ಹೆಚ್ಚು ಕಡಿಮೆ ಅರ್ಧ ಮುಕ್ಕಾಲು ಗಂಟೆಯೊಳಗೆಯೇ ಇಡೀ ಪುಸ್ತಕವನ್ನು ರಪ್ಪನೆ ಓದಿ ಮುಗಿಸಿ ಬಿಡಬಹುದು. ಸೇರು ಉಪ್ಪಿಟ್ಟು ಜೊತೆಗೆ ಚೊಂಬು ಕಾಫಿ ಇದ್ದರೆ ಚಂದ ಎಂಬಂತೆ ಎಲ್ಲವನ್ನೂ ಪುಷ್ಕಳವಾಗಿಯೇ ಬಾರಿಸುವವರಿಗೆ ಮಾತ್...