Posts

Minnal Murali

Image
 #Minnal_Murali  |  [       ] ಇದೊಂದು ಸೂಪರ್ ಹೀರೋ ಮೂವಿ.ಹಾಗಂತ ಭಯಂಕರ ಸೀರಿಯಸ್ ಪಿಚ್ಚರ್ ಏನು ಇದಲ್ಲ.ಇದರಲ್ಲಿ ಬಹಳಷ್ಟು ಗಮ್ಮತ್ ಇದೆ,ಹಾಗಾಗಿಯೇ ನೋಡಲು ಸಿಕ್ಕಾಪಟ್ಟೆ ಮಜವಾಗುತ್ತದೆ.  ಇದರಲ್ಲಿ ಸೂಪರ್ ಪವರ್ ಇರುವ ಇಬ್ಬರು ಇದ್ದಾರೆ.ಇಬ್ಬರಿಗೂ ಖಡಕ್ ಆದ ಸಿಡಿಲೊಂದು ಬಡಿದು ಅಂತಹದ್ದೊಂದು ಅತ್ಯದ್ಭುತ ಸೂಪರ್ ಪವರ್ ಈ ಇಬ್ಬರಿಗೂ ಒಲಿದಿರುತ್ತದೆ.ಇಬ್ಬರಲ್ಲಿ ಒಬ್ಬ ದುಷ್ಟ ಹಾಗೂ ಕೇಡಿ ಆಗಿದ್ದರೆ,ಮತ್ತೊಬ್ಬ ಸಮಾಜದ ಜನರನ್ನು ಬೆಂಕಿಯಿಂದ ಹಾಗೂ ಎಲ್ಲಾ ರೀತಿಯ ಆಪತ್ತಿನಿಂದ ರಕ್ಷಿಸುವ ಶಿಷ್ಟ ಜನರ ಆಪದ್ಬಾಂಧವ ಆಗಿರುತ್ತಾನೆ.  ಅತಿಮಾನುಷ ಪವರ್ ತೋರಿಸುವ ಸಂದರ್ಭದಲ್ಲಿ ಕಥೆಯ ಕೇಡಿ ಮುಂಡು(ಲುಂಗಿ)ಕಟ್ಟಿಕೊಂಡು ಯಾರಿಗೂ ಮುಖ ಕಾಣದಂತೆ ತಲೆಗೊಂದು ನೀರುಳ್ಳಿ ಗೋಣಿ ಹಾಕಿಕೊಂಡಿದ್ದರೆ,ಸಿನಿಮಾದ ಹೀರೋ ಮುಂಡು ಕಟ್ಟಿಕೊಂಡು ತಲೆಗೂ ಮುಂಡನ್ನೇ ಗಟ್ಟಿಯಾಗಿ ಸುತ್ತಿಕೊಂಡಿರುತ್ತಾನೆ.ಹೀರೋ ಕೊನೆಯಲ್ಲಿ ಮಾತ್ರ ಕೇಡಿಯನ್ನು ಹಣ್ಣುಗಾಯಿ ನೀರುಗಾಯಿ ಮಾಡುವಾಗ ಚಂದದೊಂದು ಸೂಪರ್ ಹೀರೊ ಕಾಸ್ಟ್ಯೂಮ್ ಹಾಕಿಕೊಂಡು ಬಂದು ಇನ್ನಿಲ್ಲದಂತೆ ಜಿಗ್ಗ ಕಾಣುತ್ತಾನೆ.ನನಗೆ ಅದು ಡ್ರೆಸ್ ಸಂತೆಯ ಕಾಸ್ಟ್ಯೂಮ್ ನಂತೆ ಕಾಣದೆ ಬಹಳ ಚಂದವಾಗಿ ಕಂಡಿತು ಹಾಗೂ ಇಷ್ಟವಾಯಿತು.  ಇಲ್ಲಿಯ ಕೇಡಿ ನಿಜವಾಗಿಯೂ ತುಂಬಾ ಪಾಪದ ಜನ.ಹೋಟೆಲ್ ನಲ್ಲಿ ಚಹಾ ಮಾಡುತ್ತಾ,ಸಮಯ ಸಿಕ್ಕಿದಾಗಲೆಲ್ಲ ಪುಂಖಾನುಪುಂಖವಾಗಿ ಉಗಿಬಂಡಿಯ...

Pushpa : The Rise

Image
 #Pushpa: The Rise  | [       ] ಇದು ನೋಡಲೆಬಾರದು ಎನ್ನುವಂತಹ ಶಾಪಗ್ರಸ್ತ ಮೂವಿ ಏನಲ್ಲ.ನನಗೆ ಇದು ಭಯಂಕರ ಇಷ್ಟವೂ ಆಗಲಿಲ್ಲ,ಯೆಬೇ.. ಎನ್ನುವಷ್ಟು ಕಂಡಾಬಟ್ಟೆ ಕಷ್ಟವೂ ಆಗಲಿಲ್ಲ.ಖಂಡಿತವಾಗಿಯೂ ಒಂದು ಬಾರಿ ನೋಡುವಂತಿದೆ.ಹಾಗಾಗಿ ಎಲ್ಲವನ್ನೂ ಒಟ್ರಾಸಿ ಮಿಶ್ರ ಮಾಡಿ ಮಾಡಿದಂತಹ,ತುದಿ ಮೊದಲಿಲ್ಲದ ಸಜ್ಜಿಗೆ ಬಜಿಲ್ ಚಿತ್ರ ಇದು ಎಂದು ನಾನು ಸಾರಾಸಗಟಾಗಿ ಹೇಳಲಾರೆ.  ಹೌದು,ಒಂದಷ್ಟು ಇಷ್ಟ ಆಗುವಂತಹದ್ದೂ ಇದೆ,ಅದೇ ರೀತಿ ಕಿರಿ ಕಿರಿ ಆಗುವಂತಹದ್ದೂ ಕೂಡ ಇಲ್ಲಿ ಅವಶ್ಯವಾಗಿಯೇ ಇದೆ. ಸುನೀಲ್ (ಶ್ರೀನು) "ಸ್ವಲ್ಪ ಹೊತ್ತು ಮೊದಲೇ ಪೋನ್ ಮಾಡಿದಿದ್ದರೆ.." ಎಂದು ರಾಜಕಾರಣಿಗೆ ಹೇಳುವ ಆ ಒಂದು ಸನ್ನಿವೇಶ ಇಷ್ಟ ಆಯಿತು,ಕಥೆಯಲ್ಲಿ ಮುಂದೆ ಆ ಸನ್ನಿವೇಶಕ್ಕೊಂದು ಪುಷ್ಪನ ಕೌಂಟರ್ ಕೂಡ ಅಷ್ಟೇ ಇಷ್ಟವಾಯಿತು.ಬ್ಯುಸಿನೆಸ್ ನಲ್ಲಿ ಜಾಸ್ತಿ ರೇಟು ಕೇಳಿದವನ ಕೊಲೆ ಕಣ್ಣೆದುರೇ ಆದರೂ,ಪುಷ್ಪ ಈಗ ಏನು ಮಾಡಬಲ್ಲ ಎನ್ನುವುದನ್ನು ಮೊದಲೇ ಯಾರಾದರೂ ಸಹ ಸರಿಯಾಗಿಯೇ ಊಹಿಸಬಹುದಾದರೂ,ಪುಷ್ಪ ಇಲ್ಲಿ ಅದನ್ನೇ ಮಾಡಿದಾಗ ಖುಷಿಯಾಗಿದ್ದು ನಿಜ.ಕೆಲವೊಮ್ಮೆ ಮೊದಲೇ ಗೊತ್ತಾಗಿ ಬಿಡುವಂತದ್ದು ಮೂವಿಯಲ್ಲಿ ನಡೆದರೆ ಆ ಸನ್ನಿವೇಶ ನಿಜವಾಗಿಯೂ ನೀರಸ ಆಗುವುದಿದೆ,ಆದರೆ ಇಲ್ಲಿ ಈ ದೃಶ್ಯದಲ್ಲಿ ಮಾತ್ರ ಆ ರೀತಿ ಆಗಲಿಲ್ಲ.ಕೆಲವೊಂದು ಕಡೆ ಸಂಭಾಷಣೆಗಳು ಹರಿತವಾಗಿದೆ,ಅದೇ ರೀತಿ ಚಪ್ಪೆ ಅನಿಸುವ ಸಂಭಾಷಣೆಗಳು ಕೂಡ ಬಹಳಷ್ಟು ಇದರಲ್ಲಿ ತುಂ...

The Girl with The dragon Tattoo

Image
 #The_Girl_with_the_Dragon_Tattoo   |  [       ] ಬೆನ್ನ ಮೇಲೊಂದು ಚಂದದ ಡ್ರ್ಯಾಗನ್ ಟ್ಯಾಟೂ ಹಾಕಿಸಿಕೊಂಡಿರುವ ಅವಳ ಬದುಕು ಮಾತ್ರ ಅವಳ ಆ ಟ್ಯಾಟೂವಿನಷ್ಟು ಚಂದ ಅಲ್ಲ;ಉಹೂಂ ಅಲ್ಲವೇ ಅಲ್ಲ.  ಮೇಲ್ನೋಟಕ್ಕೆ ತಂಪು ಪಾನೀಯದಂತೆ ತಣ್ಣಗೆ ಕಾಣುವ ಅವಳ ಒಳಗೊಂದು ಬೆಂಕಿ ಉಗುಳುವ ಡ್ರ್ಯಾಗನ್ ನಂತೆಯೇ,ಉರಿಯುವ ಉಲ್ಕೆಯೊಂದು ಸಹ ಅವಶ್ಯವಾಗಿ ಇದೆ.ಸಮಯ ಬಂದಾಗಲೇ ಆ ಉಲ್ಕೆ ಈ ಕಥೆಯಲ್ಲಿ ಅಲ್ಲಲ್ಲಿ ಅಪ್ಪಳಿಸುತ್ತಲೇ ಹೋಗುತ್ತದೆ;ಹೌದು ಬಹಳಷ್ಟು ತೀವ್ರವಾಗಿ.ಈ ಕಥೆಯಲ್ಲಿ ಅವಳು ಇದ್ದಾಳೆ.ಆದರೆ ಇದರೊಳಗಿನ ಪ್ರಧಾನ ಕಥೆ ಮಾತ್ರ ಅವಳದಲ್ಲ.ಆ ಅವನದ್ದೂ ಕೂಡ ಅಲ್ಲ. ಅದೊಂದು 40 ವರ್ಷಗಳಷ್ಟು ಹಳೆಯದಾದ ಮುರುಕಲು ಕೇಸು.16 ವರ್ಷದ ಹುಡುಗಿಯೊಬ್ಬಳು 40 ವರ್ಷದ ಹಿಂದೆ ಇದ್ದಕ್ಕಿದ್ದಂತೆ ಕಣ್ಮರೆಯಾಗಿ ಹೋಗಿರುವ ಮುಸುಕು ಮುಸುಕಾದ  ಕಥೆ.ಆ ಹುಡುಗಿ ಎಲ್ಲಿಗೆ ಹೋದಳು?ಏನಾದಳು? ಕೊಲೆ ಆದಳೇ?ಕೊಲೆ ಆಗಿದ್ದರೆ ಯಾರು ಮಾಡಿದ್ದು? ಪ್ರತೀ ವರ್ಷವೂ ತಪ್ಪದೇ ಹೂವನ್ನು ಒತ್ತಿ ಮಾಡಿದ ಆ ಒಂದು ಪೋಟೋ ಫ್ರೇಮು ಕಳುಹಿಸುವುದು ಯಾರು?.. ಎನ್ನುವ ರಹಸ್ಯವನ್ನು ಬೇಧಿಸಲು ಆ ಟ್ಯಾಟೂ ಹುಡುಗಿ ಹಾಗೂ ಆ ಪತ್ರಕರ್ತ ಹೊರಡುವುದೇ ಈ ಮೂವಿಯದ್ದೊಂದು ಒಟ್ಟಾರೆ ಕಥೆ. David Fincher ಈ ಮೂವಿಯನ್ನು ನಿರ್ದೇಶನ ಮಾಡಿದ್ದಾನೆ. ಸ್ವೀಡಿಶ್ ಕಾದಂಬರಿಕಾರ Stieg Larsson ನ ಕಾದಂಬರಿ ಆಧಾರಿಸಿ ಈ ಮೂವಿ ಮಾಡಲಾಗಿದೆ. Dani...

ಡ್ರಾಮಾ ಕಂಪನಿ

Image
 #ಡ್ರಾಮಾ_ಕಂಪನಿ   |  ರಾಜೇಶ್ ಶೆಟ್ಟಿ ಬಹಳ ಸರಳವಾಗಿ ಹೇಳಿದರೂ ಮೊದಲ ಸಾಲಿನಿಂದಲೇ ಓದುಗನಲ್ಲಿ ಕುತೂಹಲವನ್ನು ಕೆರಳಿಸುತ್ತಾ,ಕಥೆಯ ವಿಷಯಗಳನ್ನು ಮೆಲ್ಲ ಮೆಲ್ಲಗೆ ಅರಳಿಸುತ್ತಾ ಹೋಗುವ ಕಥೆಗಾರ ನನಗೆ  ಇಷ್ಟ. ರಾಜೇಶ್ ಶೆಟ್ರ ಕತೆಗಳು ಹಾಗೆಯೇ ಇರುವುದು.ಅವರು ಓಡಾಡಿದ,ಉಸಿರಾಡಿದ ಹೆಚ್ಚಿನ ಊರಿನ ಹವೆಯ ಪರಿಚಯ ನನಗೂ ಚೆನ್ನಾಗಿಯೇ ಇದೆ.ಹಾಗಾಗಿ ನಮ್ಮದೇ ಜಿಲ್ಲೆಯವರು ಎಂಬ ಪ್ರೀತಿಯ ಜೊತೆ ಜೊತೆಗೆ ಊರ ಕಥೆಗಳನ್ನು ಅವರು ಹೇಗೆ ಬರೆದಿರಬಹುದು ಎಂಬ ಸಹಜ ಕುತೂಹಲ ನನ್ನಲ್ಲಿ   ತೀವ್ರವಾಗಿಯೇ ಇತ್ತು.ನಿಜ ಹೇಳಬೇಕೆಂದರೆ ಬರೀ ಊರ ಕತೆಗಳನ್ನು ಮಾತ್ರವಲ್ಲ ಅವರು ಬೆಂದಕಾಳೂರಿನ ಕತೆಗಳನ್ನು ಕೂಡ ಅಷ್ಟೇ ಸೊಗಸಾಗಿ ಬರೆದು,ಸಿಹಿಯಾದ ರುಚಿಯಾದ ಕ್ಯಾರೆಟ್ ಹಲ್ವದ ಮೇಲೆ ಒಂದು ಸ್ಕೂಪ್ ತಣ್ಣನೆಯ ಐಸ್ಕ್ರೀಂ ಇಟ್ಟಂತೆ ಎರಡೂರಿನ ಕಥೆಗಳನ್ನು ಒಟ್ಟೊಟ್ಟಿಗೆ ನಮ್ಮ ಮುಂದಿಟ್ಟು,ಇದರಲ್ಲಿ ನಿಮಗ್ಯಾವುದು ಇಷ್ಟವೋ ಅದನ್ನೇ ಭರ್ಜರಿಯಾಗಿ ಸವಿಯಿರಿ ಎಂದು ಓದುಗನಿಗೆ ಉಣಬಡಿಸಿದ್ದಾರೆ.ನನಗೆ ಗಾಜರ್ ಕ ಹಲ್ವವೂ ಇಷ್ಟವಾಯಿತು,ಈ ವೆನಿಲ್ಲದ್ದು ಕೆ ಐಸ್‌ಕ್ರೀಂ ಕೂಡ ಅಷ್ಟೇ ಇಷ್ಟವಾಯಿತು.ಅಂದಹಾಗೆ ಈ ಪುಸ್ತಕದ ಕಥೆಗಳ ಬಗ್ಗೆ ನಾನು ತುಂಬಾ ಹೇಳಬೇಕು,ಆದರೆ ಎಲ್ಲಾ ಹೇಳಿ ಬಿಟ್ಟರೆ ನೀವು ಆಮೇಲೆ ಪುಸ್ತಕ ಓದುವುದಿಲ್ಲ.ಈ ಚಂದದ ಪುಸ್ತಕ ನೀವೂ ಓದಬೇಕು,ಹಾಗಾಗಿ ಎಲ್ಲಾ ಹನ್ನೆರಡು ಕತೆಗಳ ಬಗ್ಗೆಯೂ ಜಸ್ಟ್ ಇಷ್ಟಿಷ್ಟೇ ಹೇಳುತ್ತಾ ಹೋಗುತ್ತ...

Birdman

Image
 #Birdman  | [          ]  ಅವನೊಬ್ಬ ನಟ.ಒಂದು ಕಾಲದಲ್ಲಿ " Birdman" ನಂತಹ ಸೂಪರ್ ಹೀರೊ ಮೂವಿಗಳಲ್ಲಿ ಮಿಂಚಿ ಮೆರೆದ ಅವನಿಗೆ ಮತ್ತೊಮ್ಮೆ ಖ್ಯಾತಿಗೆ ಬರುವ ವಿಪರೀತ ಹಂಬಲ.ಅಂತಹ ಅವನು ಈ ಬಾರಿ ನಾಟಕ ಒಂದನ್ನು ಮಾಡುವ ಸಾಹಸ ಮಾಡುತ್ತಾನೆ.Raymond Carver ನ ಕಥಾ ಸಂಕಲನದಲ್ಲಿರುವ ಒಂದು ಸಣ್ಣಕಥೆಯಾದ "What We Talk About When We Talk About Love" ಅನ್ನೇ ಸ್ಟೇಜ್ ಮೇಲೆ ತರಲು ಅವನು ಪ್ರಯತ್ನಿಸುತ್ತಾನೆ.ಆ ಸಣ್ಣಕಥೆಯಂತೆಯೇ ಈ ಮೂವಿಯ ಕಥೆಯಲ್ಲಿ ಕೂಡ ಅಲ್ಲಲ್ಲಿ ಪ್ರೀತಿ ಪ್ರೇಮಕ್ಕೆ ಸಂಬಂಧಿಸಿದ ಒಂದಿಷ್ಟು ನಿದರ್ಶನಗಳಿವೆ,ಬಹಳಷ್ಟು ಅದರದ್ದೇ ಆದ ಮಾತುಗಳು ಕೂಡ ಇವೆ.ಅಂದ ಹಾಗೆ ಡ್ರಾಮಾದ ಪ್ರಿವ್ಯೂವ್ ನಿಂದ ಹಿಡಿದು ಅದರದ್ದೊಂದು ರಿಯಲ್ ಶೋ ನಡೆಯುವವರೆಗಿನ ಘಟನೆಗಳೇ ಈ ಮೂವಿಯ ಒಟ್ಟಾರೆ ಕಥೆ.ಡ್ರಾಮ ಹಾಗೂ ಮೂವಿಯ ಕಥೆ ಇಲ್ಲಿ ಒಟ್ಟೊಟ್ಟಿಗೆ ಸಾಗುತ್ತದೆ.ಇದರಲ್ಲಿ 10% ಡ್ರಾಮದ ಕಥೆ ಇದ್ದರೆ,ಉಳಿದ  90% ಡ್ರಾಮಕ್ಕಾಗಿ ನಡೆಯುವ ತೆರೆಯ ಹಿಂದಿನ ಕಥೆಗಳು ಇವೆ.ಇದರ ಬಹುತೇಕ ದೃಶ್ಯಗಳು ನಾಟಕ ನಡೆಯುವ ಥಿಯೇಟರ್ ನ ಇಂಡೋರ್ ನಲ್ಲಿಯೇ ನಡೆಯುತ್ತದೆ.  ಡ್ರಾಮ ಮಾಡಲು ಹೊರಡುವ ಸಿನಿಮಾದ ನಟನೊಳಗಿನ ಸಿನಿಮಾದ ಬರ್ಡ್ ಮ್ಯಾನ್,ಪ್ರತೀ ಕ್ಷಣವೂ ಅವನೊಂದಿಗೆ  ಮಾತಾಡುತ್ತಲೇ ಇರುತ್ತಾನೆ.ಈ ಡ್ರಾಮ ಎಲ್ಲಾ ನಿನಗಲ್ಲ,ನೀನು ಮತ್ತೊಮ್ಮೆ ಬರ್ಡ್ ಮ್ಯಾನ್ ಆಗಿ ಸಿನಿಮಾದಲ್ಲಿ ನಟಿಸು,...

Bhimante Vazhi

Image
 #Bheemante_Vazhi  | Prime ಇದು ಅಂತಹ ಭಯಂಕರ ಪಿಚ್ಚರ್ ಏನೂ ಅಲ್ಲ.ಆದರೂ ಇದು  ಸಿಕ್ಕಾಪಟ್ಟೆ ಮಜವಾಗಿದೆ.ಹಾಗೇ ನಕ್ಕು ಒಂದಿಷ್ಟು ಹಗುರವಾಗಲು ಹೇಳಿ ಮಾಡಿಸಿದ ಮೂವಿ ಇದು.ಹೆಸರೇ ಹೇಳುವಂತೆ ಇದು " ಭೀಮನ ರಸ್ತೆ ".ರೈಲ್ವೆ ಹಳಿ ಪಕ್ಕದ ಆ ಊರಿನ ಕೇರಿಯವರಿಗೊಂದು ಸರಿಯಾದ ರೋಡು ಇಲ್ಲ.ರೋಡು ಇಲ್ಲವೆಂದಲ್ಲ,ಒಂದು ಅಂಕುಡೊಂಕಾದ ರೋಡು ಅವಶ್ಯವಾಗಿ ಅಲ್ಲಿದೆ.ಆದರೆ ಅದರಲ್ಲಿ ಸ್ಕೂಟರ್,ಬೈಕ್ ನಂತಹ ದ್ವಿಚಕ್ರ ವಾಹನ ಅಷ್ಟೇ ಹೋಗಬಹುದೇ ಹೊರತು,ಕಾರು ಹೋಗುವಷ್ಟು ಅದು ಅಗಲವಾಗಿಲ್ಲ.ಭೀಮ ಎಂಬ ಉತ್ಸಾಹಿ ಮನುಷ್ಯ ಕೇರಿಯ ಎಲ್ಲರನ್ನೂ ಸೇರಿಸಿಕೊಂಡು ಈ ಬಾರಿ ರೋಡ್ ಮಾಡಲೇ ಬೇಕೆಂದು,ರೋಡಿಗಾಗಿ ಎಲ್ಲರೂ ತಮ್ಮ ತಮ್ಮ ಜಾಗಗಳಲ್ಲಿ ಒಂದಿಷ್ಟನ್ನು ಬಿಟ್ಟು ಕೊಡುವಂತೆ ಎಲ್ಲರ ಮನ ಒಲಿಸುತ್ತಾ,ಅದಕ್ಕೆ ಒಪ್ಪದವರ ಜೊತೆಗೊಂದು ನಿರಂತರವಾಗಿ ಪೆಟ್ಟ್ ಲಡಾಯಿ ಮಾಡುತ್ತಾ ಹೋಗುವ ಕುಶಾಲಿನ ಕಥೆಯೇ ಈ ಮೂವಿಯ ಕಥೆ. Ashraf Hamza ಇದನ್ನು ನಿರ್ದೇಶಿಸಿದ್ದು,Kunchacko Boban,Chemban Vinod Jose, Megha Thomas, Suraj Venjaramoodu ಮುಂತಾದವರು ಇದರಲ್ಲಿ ಅಭಿನಯಿಸಿದ್ದಾರೆ. ಇದೊಂದು ಕಾಮಿಡಿ ಮೂವಿ.ಮಲಯಾಳಂ ಕಾಮಿಡಿ ಇಷ್ಟ ಪಡುವವರಿಗೆ ಇದು ಕೂಡ ಎಂದಿನಂತೆ ಇಷ್ಟವಾಗಬಹುದು.ಒಂದೆರಡು ದೃಶ್ಯಗಳಲ್ಲಿ ಅಷ್ಟೇ ಬರುವ Suraj Venjaramoodu ಇಲ್ಲಿ ತುಂಬಾನೇ ನಗಿಸುತ್ತಾನೆ.ಕಾಮಿಡಿ ಬಿಟ್ಟರೆ ಇದರ ಉಳಿದೆಲ್ಲಾ ಡೀಟೈಲ್ ಗಳು ಸಹ ಅಷ್ಟೇ ಚೆನ್ನಾಗಿದೆ....

ಫಲ್ಗುಣಿಯ ಗರ್ಭದೊಳ್

Image
 #ಫಲ್ಗುಣಿಯ_ಗರ್ಭದೊಳ್...  ಈ ದಿನ ಬಂತೆಂದರೆ ಸಾಕು,ಚಿಕ್ಕಂದಿನಲ್ಲಿ ಅಮ್ಮ ಬೆಳಿಗ್ಗೆಯೇ ಮನೆಯಿಂದ ನನ್ನನ್ನು ಹೊರಗೆ ಓಡಿಸಿ ಬಿಡುತ್ತಿದ್ದಳು.ಅವಳದ್ದೊಂದು ಹಿಂದಿನ ರಾತ್ರಿಯೇ ಶುರುವಾಗುವ ಆ ಪಿರಿಪಿರಿ,ಬೆಳ್ಳಂಬೆಳಗ್ಗಿನ ಞಂಕ್ಕ್ ಞೈ,ಉಗ್ರವೆನಿಸುವ ಆ ಕಠೋರವಾದ ಆದೇಶ,ನಾನು ಮಣಿಯದೇ ಇದ್ದಾಗ ಕೊನೆಯ ಅಸ್ತ್ರವಾದ ಪರಿಪರಿಯ ಮನವಿ,ಹೀಗೆ ಎಲ್ಲದರ ಹಿಂದಿನ ಉದ್ದೇಶ ಒಂದೇ ಆಗಿತ್ತು;ಅದೇ "ಎಳ್ಳಮವಾಸ್ಯೆಗೆ ಒಮ್ಮೆ ಫಲ್ಗುಣಿಗೆ ಹೋಗಿ,ದಾನ ಬಿಟ್ಟು ನೀರಲ್ಲಿ ಮುಳುಗಿ ಬಾ ಮಾರಾಯ.." ಎಂಬುವುದೇ ಆಗಿತ್ತು. ಫಲ್ಗುಣಿ ನನಗೇನು ಹೊಸಬಳಲ್ಲ.ಅವಳ ಪರಿಚಯ ನನಗೆ ಬಹಳನೇ ಹಳೆಯದ್ದು.ಅವಳಿಗೂ ನನ್ನ ಬಹಳ ಸೊಗಸಾದ ಪರಿಚಯವಿದೆ.ಮನೆಯಲ್ಲಿ ಅಮ್ಮ ಒತ್ತಾಯದಿಂದ ಕಳುಹಿಸಿದರೂ,ಎಳ್ಳಮವಾಸ್ಯೆಗೆ ಬಹು ಸಂಭ್ರಮದಿಂದ ಹೂವು, ಹಣ್ಣು ಕಾಯಿಯೊಂದಿಗೆ ಫಲ್ಗುಣಿ ಕಡೆಗೆ ಧಾವಿಸಲು ಆಗ ನಮಗೆಲ್ಲಾ ಮಕ್ಕಳಿಗೆ ವಿಶೇಷವಾದ ಕಾರಣಗಳು ಕೂಡ ಒಂದಷ್ಟು ಇದ್ದವು.  ನದಿಯ ತಣ್ಣನೆಯ ನೀರಿನಲ್ಲಿ ನಿಂತುಕೊಂಡು ನವಧಾನ್ಯ,ಮನೆಯ ಅಂಗಳದಿಂದಲೇ ಕೊಯ್ದು ತಂದ ತಾಜಾ ಹೂವುಗಳು,ಒಂದಿಷ್ಟು ನಾಣ್ಯ,ದೀಪ ಬೆಳಗಲು ಕರ್ಪೂರ ಇಲ್ಲವೇ ಎಣ್ಣೆಯಲ್ಲಿ ಅದ್ದಿದ ಬತ್ತಿ,ಹೀಗೆ ಎಲ್ಲವನ್ನೂ ತುದಿ ಬಾಳೆಲೆಯಲ್ಲಿಟ್ಟು,ಎಲೆಯ ಸಹಿತ ಅವೆಲ್ಲವನ್ನೂ ನಮಗೆ ನಾವೇ ತಲೆಗೆ ಮೂರು ಸುತ್ತು ನಿವಾಳಿಸಿ ತೆಗೆದು,ಆ ನಂತರ ಎಲೆಯ ಮೇಲೊಂದು ಕರ್ಪೂರವನ್ನು ಉರಿಸಿ ಕರ್ಪೂರದಾರತಿ ಇಲ್ಲವೇ ಎಣ್ಣೆ ಬತ್ತಿ ಬೆಳಗಿಸಿ ಫಲ್ಗ...