Meppadiyan
#Meppadiyan | [ ] ಇದರ ಕಥೆ ಬಹಳ ಸರಳವಾದದ್ದು,ಇಂತಹ ಕಥೆಗಳು ನಮ್ಮ ಸುತ್ತಮುತ್ತಲಿನಲ್ಲಿಯೇ ದಿನ ನಿತ್ಯವೂ ಸದ್ದಿಲ್ಲದೇ ನಡೆದು ಹಾಗೇ ತೆರೆಮರೆಗೆ ಸರಿಯುವಂತಹದ್ದು.ಇಷ್ಟೆಲ್ಲಾ ಸರಳ ಸಾಮಾನ್ಯ ಕಥೆ ಆಗಿದ್ದರೂ ಕೂಡ ಈ ಮೂವಿ ಬಾರೀ ಚಂದ ಉಂಟು ಆಯ್ತಾ. ಈ ಕಥೆಯ ನಾಯಕ ಜಯಕೃಷ್ಣನ್.ಅವನು ಇಲ್ಲಿ ನೀವೇ ಆಗಿರಬಹುದು,ಇಲ್ಲವೇ ಪಕ್ಕದ ಮನೆಯ ನಿಮ್ಮ ಸ್ನೇಹಿತನೂ ಆಗಿರಬಹುದು,ಇಲ್ಲದಿದ್ದರೆ ನಿಮ್ಮ ಊರಿನಲ್ಲಿಯೇ ಇರುವ ಯಾರೋ ಒಬ್ಬ ಅವಶ್ಯವಾಗಿ ಈ ಕಥೆಯ ಜಯಕೃಷ್ಣನ್ ನಂತೆಯೇ ಇರಬಹುದು. ಬರೀ ಕಾಸಿದ ಹಾಲು ಮಾತ್ರ ಕುಡಿಯುವ ಜಯಕೃಷ್ಣನ್ ನ ಮನಸ್ಸು ಕೂಡ ಇಲ್ಲಿ ಶುದ್ಧ ಹಾಲಿನಷ್ಟೇ ಬಹಳಷ್ಟು ಪರಿಶುದ್ಧವಾದದ್ದು ಹಾಗು ಅಷ್ಟೇ ಶುಭ್ರವಾದದ್ದು.ಮೂವಿ ಉದ್ದಕ್ಕೂ ಅವನು ಸೋಲದಿರಲಿ ಎಂದೇ ನಿಮ್ಮ ಮನಸ್ಸಿಗೂ ಅನ್ನಿಸಿಬಿಟ್ಟರೆ ಆ ಕ್ಷಣಕ್ಕೆನೇ ಅವನು ತುಂಬಾ ನಿಮ್ಮವನು.ಕೆಲವೊಮ್ಮೆ ಅವನು ಸತ್ಯ ಹರಿಶ್ಚಂದ್ರನ ಅಸಲಿ ತುಂಡಿನಂತೆಯೇ ಅಲ್ಲಲ್ಲಿ ಗೋಚರಿಸಿ ಮನಸ್ಸನ್ನು ಸಿಕ್ಕಾಪಟ್ಟೆ ಹಿಂಡಿ ಬಿಡುತ್ತಾನೆ.ಒಟ್ಟಿನಲ್ಲಿ ಈ ಸಮಾಜದಲ್ಲಿನ ಮುಗ್ಧರು,ಜನ ಸಾಮಾನ್ಯರು ಪಡಬಹುದಾದ ಕಷ್ಟಗಳೇ ಅವನದ್ದೊಂದು ಕಷ್ಟ ಇಲ್ಲಿ.ಹಾಗಂತ ಅವನ ಕಷ್ಟ,ಅವನು ಒಳ್ಳೆಯವನು ಅನ್ನುವುದಷ್ಟೇ ಈ ಮೂವಿಯ ಒಟ್ಟು ಕಥೆಯಲ್ಲ,ಅದು ಕಥೆಯ ಆಶಯವೂ ಅಲ್ಲ.ಮಾನವನ ಕೆಟ್ಟ ವಾಂಛೆಗಳು ಹಾಗೂ ಪರಿಸ್ಥಿತಿಯ ಲಾಭ ಪಡೆಯುವ ಅವನದ್ದೊಂದು ಮನುಷ್ಯ...