ವೀರಗಾಥೆ - ಯೋಧರ ಅಜ್ಞಾತ ಸಾಹಸ ಕಥನಗಳು

ಹೀರೋಗಳು ಅಂದ ಕೂಡಲೇ ನಿಮಗೆ ತೆರೆಯ ಮೇಲೆ ಮೆರೆದು ಇನ್ನಿಲ್ಲದಂತೆ ಅಬ್ಬರಿಸುವ ಸಿನಿಮಾ ನಾಯಕನಟರು ನೆನಪಾಗದೇ,ಕೇವಲ ಗಡಿ ಕಾಯುವ ಆ ನಮ್ಮ ಯೋಧನೇ ಮೊದಲು ನೆನಪಾಗುವುದಾದರೆ.. ಖಂಡಿತವಾಗಿಯೂ ಇದು ನೀವುಗಳು ಓದಲೇಬೇಕಾದ ಪುಸ್ತಕ. ನಮ್ಮ ಯೋಧರ ಕಥೆಗಳೇ ಹಾಗೇ.. ಕೆಲವೊಮ್ಮೆ ಮೈನವಿರೇಳಿಸುವಂತಹದ್ದು,ಇನ್ನು ಕೆಲವೊಮ್ಮೆ ಹಾಗೇ ಕಣ್ಣಂಚನ್ನು ಇಂಚಿಂಚು ತೇವಗೊಳಿಸುವಂತಹದ್ದು.ದೇಶಕ್ಕಾಗಿ ಪ್ರಾಣವನ್ನು ಅರ್ಪಿಸಲು ಹಿಂದೆ ಮುಂದೆ ನೋಡದ ಯೋಧರ ಕಥೆಗಳು ಹೇಗೆ ನಮಗೆ ತೀವ್ರವಾಗಿ ಕಾಡುತ್ತದೋ ಅದೇ ರೀತಿ ಯೋಧನ ವೃದ್ಧ ತಂದೆ,ಅವನ ಹೆತ್ತ ತಾಯಿ,ಕೈ ಹಿಡಿದ ಮಡದಿ,ಪುಟ್ಟ ಮಗುವಿನ ಕಥೆ ಕೂಡ ಕೆಲವೊಮ್ಮೆ ಹಾಗೇ ಕರುಳು ಕಿವುಚಿ ಹಾಕಿ ಬಿಡುತ್ತದೆ. ಡಾ.ಸಿಂಧೂ ಪ್ರಶಾಂತ್ ಅವರು ಬರೆದಿರುವ ಈ "ವೀರಗಾಥೆ" ಯಲ್ಲೂ ಇಂತಹದ್ದೇ ಕಥೆಗಳಿರುವುದು.ನಾವು ಬೆಚ್ಚಗೆ ಮಲಗಿ ನಿದ್ರಿಸುವಾಗ ದೇಶದ ಗಡಿಯಲ್ಲಿ ಶತ್ರುಗಳ ನೆತ್ತರು ಹರಿಸಿದ್ದು ಮಾತ್ರವಲ್ಲ ಅವಶ್ಯಕತೆ ಬಿದ್ದಾಗ ನಮಗಾಗಿ,"ಕೇವಲ ನಮಗಾಗಿ "ಪ್ರಾಣ ತ್ಯಾಗ ಮಾಡಿ, ಆ ಮೂಲಕ ಈ ದೇಶದ ಧ್ವಜವೊಂದು ಸದಾ ಎತ್ತರದಲ್ಲಿಯೇ ಬೆಚ್ಚಗೆ ಸ್ವಲ್ಪವೂ ಸುಕ್ಕಾಗದೇ ಹಾರಾಡುವಂತೆ ನೋಡಿಕೊಂಡ,ತಮಗೊಂದು ಚಂದದ ಹೆಸರಿದ್ದರೂ ಸಹ ದೇಶದ ಜನ ಮಾನಸದಲ್ಲಿ ಇನ್ನೂ ಅಜ್ಞಾತವಾಗಿಯೇ ಉಳಿದು ಹೋಗಿರುವ ಸುಮಾರು 50 ಹುತಾತ್ಮ ವೀರ ಯೋಧರ ಸಾಹಸ ಕಥೆಗಳೇ ಈ "ವೀರಗಾಥೆ". ಇಲ್ಲಿಯ ಎಲ್ಲಾ ಕಥೆಗಳಲ್ಲೂ ನಮ್ಮ ಯೋಧರ ಅಪ್ರತ...