ಭಕ್ತಿಯ ಜೊತೆಗೆ ಭಯವೂ ಇರಲಿ..

ಮನೆಯ ಹಿಂದೆ ಒಂದು ಗುಡ್ಡ ಇದೆ.ಅದರಲ್ಲಿ ರಾಹು ಗುಳಿಗ ದೈವದ ಕಲ್ಲು ಕೂಡ ಉಂಟು. ಅದು ಅಲ್ಲಿ ಪ್ರಾಕೃತಿಕವಾಗಿಯೇ ಎಷ್ಟೋ ಸಮಯದಿಂದ ಇನ್ನೂ ಹಾಗೆಯೇ ಇದೆ.ಯಾವಾಗ ಬೇಕಾದರೂ ಆ ಗುಡ್ಡದ ಬಳಿ ಸುತ್ತಾಡಬಹುದು.ಆದರೆ ಮಧ್ಯಾಹ್ನದ ಹೊತ್ತು ಆ ಗುಡ್ಡ ಸುತ್ತ ಸುತ್ತಾಡಲು ನಮಗೆ ಮಾತ್ರವಲ್ಲ ಮನೆಯ ಹಸುಗಳಿಗೆ ಕೂಡ ಯಾರ ಮನೆಯಲ್ಲೂ ಬಿಡುವುದೇ ಇಲ್ಲ.ಕಾರಣ ಅಲ್ಲಿರುವ ದೈವದ ಮೇಲಿನ ಭಕ್ತಿಯ ಜೊತೆಗೆ ಅಷ್ಟೇ ಭಯ.. ಬೈಲು ಬದಿಯಲ್ಲೊಂದು ಕಲ್ಲುಟ್ಟಿ(ಕಲ್ಲುರ್ಟಿ)ದೈವದ ಸಾನವೊಂದು ಇದೆ.ಅಮ್ಮ ದನಕ್ಕೆ ಹುಲ್ಲು ತರಲು ಹೋಗುವಾಗ ಕಾಲಿನಲ್ಲಿರುವ ಚಪ್ಪಲಿಯನ್ನು ಕೆಳಗಿಟ್ಟು ತುಂಬಾ ದೂರದಿಂದಲೇ ಪ್ರತೀ ನಿತ್ಯವೂ ಕಲ್ಲುಟ್ಟಿಗೆ ಶ್ರದ್ಧೆಯಿಂದ ಕೈ ಮುಗಿಯುತ್ತಾಳೆ.ಹಾಗೆ ಮಾಡದಿದ್ದರೆ ಅವಳಿಗೆ ಆ ದಿನ ನಿದ್ದೆಯೇ ಬರುವುದಿಲ್ಲ. ಕಷ್ಟ ಅಂತ ಬಂದಾಗ ದೇವರಿಗಿಂತ ಮೊದಲು ಅವಳಿಗೆ ನೆನಾಪುಗುವುದೇ ಬೈಲಿನ ಕಾರಣಿಕದ ಕಲ್ಲುಟ್ಟಿ.ದೈವಕ್ಕೊಂದು ಚೆಂಡು ಮಲ್ಲಿಗೆ ಹೂವು ಹೇಳಿ ಬಿಟ್ಟರೆ ಸಾಕು.. ಅವಳು ಆ ಕ್ಷಣಕ್ಕೆ ಎಷ್ಟೋ ನಿರಾಳ. ಕಾರಣ ಅವಳ ಸಮಸ್ಯೆಗಳಿಗೆ ಪರಿಹಾರ ಕ್ಷಣ ಮಾತ್ರದಲ್ಲಿ ಆಗುವುದು ಈ ದೈವಗಳಿಂದಲೇ ಎಂದು ಅವಳು ದೃಢವಾಗಿ ನಂಬಿದ್ದಾಳೆ.ಹೌದು ದೈವ ಅಂದರೆ ಅವಳಿಗೆ ಎಂದಿಗೂ ಮುಗಿಯದ ನಂಬಿಕೆಯೇ ಆಗಿದೆ. ಬೆಟ್ಟದ ತುದಿಯಲ್ಲಿ ಎಲ್ಲರಿಗಿಂತ ಎತ್ತರದಲ್ಲಿ ರಾಜನ್ ದೈವವಾಗಿ ಕೊಡಮಂದಾಯ ಇದ್ದಾನೆ.ಊರಲ್ಲಿ ಯಾರೇ ಇರಲಿ ಒಳ್ಳೆಯ ಕೆಲಸ ಮಾಡುವಾಗ ಇಲ್ಲವೇ ಮನ...