ಕಪ್ಪು ಸೂರ್ಯ

ನೈತನುಪ್ಪು ತಿನ್ನುವುದಕ್ಕಿಂತಲೂ ಕೆಲವೊಮ್ಮೆ ನೋಡಲು ಇಷ್ಟವಾಗುತ್ತದೆ.ತುಪ್ಪದ ಅನ್ನ ಉದುರುದುರಾಗಿ ಘಮ್ಮೆನ್ನುತ್ತಾ ಹರಡಿಕೊಂಡರೂ ಬರೀ ಅಷ್ಟಕ್ಕೆ ಅದು ಚಂದ ಅಲ್ಲ,ಚಕ್ರ ಮೊಗ್ಗು ಬಿಳಿಯ ಅನ್ನದ ಯಾವುದೇ ಒಂದು ಕೆನ್ನೆಯಲ್ಲಿ ಆತುಕೊಂಡು ಒಂಚೂರೇ ಚೂರು ದರ್ಶನ ಕೊಟ್ಟರೂ ಸಾಕು ಕಣ್ಣಿಗೆ ಅದೆನೋ ಹಿತ.ಪೋಟೋ ಸೆಷನ್ ಗೆ ಅಂತು ಅದು ಯಾವತ್ತೂ ಅನ್ನದ ಸೆಂಟರ್ ನಲ್ಲಿಯೇ ಇರಬೇಕು.. ಹೈಸ್ಕೂಲ್ ನ ಖಡಕ್ ಪ್ರಿನ್ಸಿಪಾಲರಂತೆ ಬಾಯಿ ಬಿಟ್ಟು ನಗದಿದ್ದರೂ ಸಹ. ತಿನ್ನಲು ಬರುವುದಿಲ್ಲ ನಿಜ,ಆದರೆ ಅದು ಇರಬೇಕು.ಚಕ್ರ ಮೊಗ್ಗು ನೈಚೋರಿನ ಕಪ್ಪು ಸೂರ್ಯನಂತೆ.ಹೊಳೆಯದಿದ್ದರೂ ಬಿಳಿಯ ಬಣ್ಣದ ಘೀರೈಸಿನಲ್ಲಿ ಅದು ಎಲ್ಲಾದರೂ ಒಂದು ಕಡೆ ಅದರಷ್ಟಕ್ಕೆ ಹೊರಳಲೇಬೇಕು.ಆಗಲೇ ಮನಸ್ಸಿಗೆ ತಕ್ಕ ಮಟ್ಟಿನ ಸಮಾಧಾನ. ಅಲಂಕಾರವೇ ಅಡುಗೆ ಅಲ್ಲ.ಒಗ್ಗರಣೆಯೇ ಇಲ್ಲದಿದ್ದರೂ ಹೊಟ್ಟೆ ತಂಪಾಗಬಹುದು ಆದರೆ ಕಣ್ಣು ಅಲ್ಲ.ಜಿಹ್ವೆಗೂ ಕಣ್ಣಿಗೂ ದಿವ್ಯವಾದ ಒಂದು ಕನೆಕ್ಷನ್ ಬಹಳ ಹಿಂದಿನಿಂದಲೇ ಇದೆ.ನನಗಂತು ಮೊದಲು ಕಣ್ಣು ಇಷ್ಟ ಪಡಬೇಕು, ಹೃದಯ ಅಲ್ಲ.ಆಮೇಲೆ ಅಷ್ಟೇ ಉದರಕ್ಕೆ ಅದರ ಕಾರ್ಯ ಮಾಡಲು ಶರತ್ತು ರಹಿತ ಅನುಮತಿ. ಬರೀ ಇದೊಂದೇ ಅಲ್ಲ.. ಇಂತಹದ್ದು ತುಂಬಾ ಇದೆ.ಶ್ಯಾವಿಗೆ ಪಾಯಸದ ಕೆನೆ ಬಣ್ಣದ ಮೇಲ್ಬಾಗದಲ್ಲಿ ಹುರಿದ ಗೋಡಂಬಿ ಇದ್ದರಷ್ಟೇ ಆ ಪರಮಾನ್ನಕ್ಕೊಂದು ಭೂಷಣ,ಬೇಕರಿ ಲಾಡಿನಲ್ಲಿ ಒಂದೆರಡು ಲವಂಗ, ತಿಮ್ಮಪ್ಪನ ಲಡ್ಡು ಪ್ರಸಾಧದಲ್ಲಿ ಗೋಡಂಬಿ ಸಹಿತ ಸಾಕಷ್ಟು ಏಲಕ್ಕಿ ಸ...