Chhorii
#Chhorii | Prime ಅವಳು ತುಂಬು ಗರ್ಭಿಣಿ ಹಾಗೂ ನಗರದ ಹುಡುಗಿ. ಒಂದು ದಿನ ಸಿಟಿಯಿಂದ ಗಂಡನೊಡನೆ ಹಳ್ಳಿಯಲ್ಲಿರುವ ಆ ಒಂದು ದೊಡ್ಡ ಕಬ್ಬಿನಗದ್ದೆಯ ನಡುವಿನ ಒಂಟಿ ಮನೆಗೆ ಆಕೆ ಬರುತ್ತಾಳೆ. ಅಲ್ಲಿಯ ವಿಚಿತ್ರ ಹೆಂಗಸು ಆ ಗರ್ಭಿಣಿ ಹುಡುಗಿಗೊಂದು ಕಥೆ ಹೇಳುತ್ತಾಳೆ. ಆ ಕಥೆ ಹೀಗಿದೆ... " ಒಂದು ಸಣ್ಣ ಹಳ್ಳಿಯಲ್ಲಿ ಒಂದು ದೊಡ್ದ ಮರವಿತ್ತು. ಆ ಮರದಲ್ಲಿ ಒಂದು ಕಾಗೆಗಳ ಸುಖಿ ಪರಿವಾರವೂ ಇತ್ತು. ಎಲ್ಲವೂ ಸರಿ ಇತ್ತು ಮತ್ತು ಕಾಗೆಗಳು ಕೂಡ ಆ ಮರದಲ್ಲಿ ಬಹಳ ಸಂತೋಷವಾಗಿದ್ದವು. ಒಂದು ದಿನ ಒಂದು ವಿಷಯುಕ್ತ ಹಾವು ಆ ಮರಕ್ಕೆ ಬಳ್ಳಿಯಂತೆ ಹಾಗೇ ಶಾಶ್ವತವಾಗಿ ಸುತ್ತಿ ಹಾಕಿಕೊಂಡು ಬಿಟ್ಟಿತ್ತು. ನೋಡು ನೋಡುತ್ತಿದ್ದಂತೆ ಮರದ ಎಲೆಗಳು ಬಾಡಿದವು. ಅದರ ಹಣ್ಣುಗಳು ಕೂಡ ಉದುರಿದವು. ದಿನ ಕಳೆದಂತೆ ವಿಧವೆಯ ಭವಿಷ್ಯದಂತೆ ಆ ಮರವೂ ಕೂಡ ಒಣಗತೊಡಗಿತು..! ಕಾಗೆ ಪ್ರತೀ ಬಾರಿ ಮೊಟ್ಟೆ ಇಟ್ಟಾಗಲೂ ಆ ವಿಷಕಾರಿ ಹಾವು ಬಂದು ಕಾಗೆಯ ಮೊಟ್ಟೆಗಳನ್ನು ನುಂಗಿ ಹಾಕುತ್ತಿತ್ತು. ಕಾಗೆಗೆ ಇದನ್ನು ನೋಡಿ ದಿಕ್ಕು ತೋಚದಂತಾಯಿತು. ಇದೇ ಸಂಧರ್ಭದಲ್ಲಿ ಆ ಪಾಳು ಮರಕ್ಕೆ ಒಂದು ಚಂದದ ಗುಬ್ಬಿಯ ಸುಂದರ ಸಂಸಾರ ಬಂದು ನೆಲೆಸಿತು. ಗುಬ್ಬಿ ಆ ಮರದ ಮೇಲೊಂದು ತನ್ನ ಪುಟ್ಟ ಗೂಡು ಕೂಡ ಕಟ್ಟಿಕೊಂಡಿತು. ಒಂದು ದಿನ ಅದು ಮೊಟ್ಟೆ ಕೂಡ ಇಟ್ಟಿತು. ಅದನ್ನು ನೋಡ...